ಗಗನಕ್ಕೇರಿದ ಈರುಳ್ಳಿ ಬೆಲೆ| ಮದುವೆ ಮನೆಯಲ್ಲಿ ಈರುಳ್ಳಿ ಗಿಫ್ಟ್, ಈಗ ಮೊಬೈಲ್ ಶಾಪ್‌ನಲ್ಲಿ ಆಫರ್| ಫೋನ್ ಖರೀದಿಸಿದ್ರೆ 1KG ಈರುಳ್ಳಿ ಫ್ರೀ
ಚೆನ್ನೈ[ಡಿ.08]: ಈರುಳ್ಳಿ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜನರ ಕಣ್ಣಲ್ಲಿ ನೀರು ತರಿಸುತ್ತಿದೆ. ಹೀಗಿರುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಅಡುಗೆ ಮನೆಗೆ ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಎಂಟ್ರಿ ಇಲ್ಲ ಎಂದಿದ್ದಾರೆ. ಆದರೆ ಎಲ್ಲರ ಮನೆ ಕತೆ ಹೀಗೆಯೇ ಎನ್ನಲು ಸಾಧ್ಯವಿಲ್ಲ. ಈರುಳ್ಳಿ ಇಲ್ಲದೇ ಅಡುಗೆ ಹೇಗೆ ಮಾಡೋದು? ರುಚಿ ಇಲ್ವಲ್ಲಾ ಅನ್ನೋರೂ ಇದ್ದಾರೆ. ಇನ್ನು ಈರುಳ್ಳಿ ಬೆಲೆ ಯಾವಾಗ ಕಡಿಮೆಯಾಗುತ್ತೆ ಎಂದು ಅಂದಾಜಿಸಲೂ ಸಾಧ್ಯವಿಲ್ಲ. ಹೀಗಿರುವಾಗ ಇಲ್ಲೊಂದು ಶಾಪ್ ಮೊಬೈಲ್ ಖರೀದಿಸುವವರಿಗೆ 1ಕೆಜಿ ಈರುಳ್ಳಿ ಲುಚಿತ ಎಂಬ ಆಫರ್ ಬಿಡುಗಡೆ ಮಾಡಿದೆ.
ಹೌದು ಈ ವಿನೂತನ ಆಫರ್ ನಿಂದಾಗಿ ತಮಿಳುನಾಡಿನ ಪುಟ್ಟ ಮೊಬೈಲ್ ಶಾಪ್ ದಿನ ಬೆಳಗಾಗುತ್ತಿದ್ದಂತೆಯೇ ಎಲ್ಲರ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾಗಳಲ್ಲೂ ಈ ಶಾಪ್ ನದ್ದೇ ಸದ್ದು. ತಮಿಳುನಾಡಿನ ಪುಟ್ಟುಕೊಟ್ಟಾಯೀಯಲ್ಲಿರುವ ಈ ಪುಟ್ಟ ಮೊಬೈಲ್ ಶಾಪ್, ಫೋನ್ ಖರೀದಿಸುವ ತನ್ನ ಗ್ರಾಹಕರಿಗೆ 1ಕೆಜಿ ಈರುಳ್ಳಿ ಉಚಿತವಾಗಿ ನೀಡುತ್ತಿದೆ. ತಮಿಳುನಾಡಿನಲ್ಲಿ 1 ಕೆಜಿ ಈರುಳ್ಳಿ ಬೆಲೆ 140 ರಿಂದ 160ರೂ. ಇದೆ ಎನ್ನುವುದು ಉಲ್ಲೇಖನೀಯ.
undefined
ಫುಲ್ ಡಿಫರೆಂಟ್ ಈ ಆಫರ್
'STR ಮೊಬೈಲ್ಸ್' ಹೆಸರಿನ ಈ ಶಾಪ್ ಪುಟ್ಟುಕೊಟ್ಟಾಯಿಯ ಥಲಿಯಾರೀ ರಸ್ತೆಯಲ್ಲಿದೆ. ತಮ್ಮ ಶಾಪ್ ನಲ್ಲಿ ನೀಡಲಾಗುತ್ತಿರುವ ಈ ಆಫರ್ ಕುರಿತು ಪ್ರತಿಕ್ರಿಯಿಸಿದ ಮಾಲೀಕ ಶ್ರವಣ್ ಕುಮಾರ್ 'ಜನರು ಈ ಆಫರ್ ಕುರಿತು ಭಾರೀ ಚರ್ಚೆ ನಡೆಸುತ್ತಿದ್ದಾರೆ. ಪುಟ್ಟುಕೊಟ್ಟಾಯಿಯಲ್ಲಿ ಈವವರೆಗೆ ಯಾರೂ ಇಂತಹ ಆಫರ್ ಕೇಳಿರಲಿಲ್ಲ. ಹೀಗಾಘಿ ಜನರೆಲ್ಲರೂ ಭಾರೀ ಆಸಕ್ತರಾಗಿದ್ದಾರೆ. ಇಂತಹ ಆಫರ್ ಇದೆ ೆಂದು ಜಾಹೀರಾತು ಕೊಟ್ಟ ಬಳಿಕ, ಶಾಪ್ ಗೆ ಬರುವ ಗ್ರಾಹಕರ ಸಂಖ್ಯೆಯೂ ಜಾಸ್ತಿಯಾಗಿದೆ' ಎಂದಿದ್ದಾರೆ.
8 ವರ್ಷದ ಹಿಂದೆ ಆರಂಭವಾಗಿತ್ತು ಈ ಶಾಪ್
35 ವರ್ಷದ ಶ್ರವಣ್ ಕುಮಾರ್ 'STR ಮೊಬೈಲ್ಸ್' ಹೆಸರಿನ ಈ ಶಾಪ್ 8 ವರ್ಷದ ಹಿಂದೆ ಆರಂಭಿಸಿದ್ದರು. ಪ್ರತಿ ದಿನ ಇಲ್ಲಿ ಕನಿಷ್ಟವೆಂದರೂ 2 ಮೊಬೈಲ್ ಮಾರಾಟವಾಗುತ್ತದೆ. ತಮ್ಮ ವ್ಯಾಪಾರದ ಕುರಿತು ಪ್ರತಿಕ್ರಿಯಿಸಿದ ಶ್ರವಣ್ ಕುಮಾರ್ 'ಗುರುವಾರ ಹಾಗೂ ಶುಕ್ರವಾರ ನಾನು ತಲಾ 8 ಮೊಬೈಲ್ ಫೋನ್ ಮಾರಾಟ ಮಾಡಿದ್ದೇನೆ. ಇದೆಲ್ಲಾ ಈರುಳ್ಳಿ ಆಫರ್ ನಿಂದ ಸಾಧ್ಯವಾಯ್ತು ಎಂದು ನನ್ನ ಭಾವನೆ' ಎಂದಿದ್ದಾರೆ. ತಮ್ಮ ಶಾಪ್
ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ