ಇಷ್ಟು ಮೊತ್ತ ನಿಮ್ಮ ಕೈಯ್ಯಲ್ಲಿದ್ರೆ ನಿತ್ಯಾನಂದನಂತೆ ನೀವೂ ಖರೀದಿಸ್ಬಹುದು ದ್ವೀಪ!

By Suvarna NewsFirst Published Dec 8, 2019, 1:30 PM IST
Highlights

ದ್ವೀಪ ಖರೀದಿಸಿ ದೇಶ ನಿರ್ಮಿಸಿದ ನಿತ್ಯಾನಂದ| ನಿತ್ಯಾನಂದನ ಕೈಲಾಸದಂತೆ ನೀವೂ ಖರೀದಿಸ್ವಹುದು ದ್ವೀಪ| ಬೆಲೆ ಎಷ್ಟು ಖರೀದಿ ಹೇಗೆ? ಇಲ್ಲಿದೆ ವಿವರ

ನವದೆಹಲಿ[ಡಿ.08]: ಅತ್ಯಾಚಾರ ಆರೋಪಿ ಹಾಗೂ ವಿದೇಶಕ್ಕೆ ಪರಾರಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಈಕ್ವೆಡಾರ್ ನ ದ್ವೀಪವೊಂದನ್ನು ಖರೀದಿಸಿ ತನ್ನದೇ ದೇಶವೊಂದನ್ನು ನಿರ್ಮಿಸಿರುವ ಸುದ್ದು ಭಾರೀ ಸದ್ದು ಮಾಡುತ್ತಿದೆ. ನಿತ್ಯಾನಂದ ತನ್ನ ಈ ದೇಶಕ್ಕೆ ಕೈಲಾಸ ಎಂದು ಹೆಸರಿಟ್ಟಿದ್ದು, ವೆಬ್ ಸೈಟ್ ಬಿಡುಗಡೆಗೊಳಿಸುವ ಮೂಲಕ ನಿತ್ಯಾನಂದ ಈ ವಿಚಾರ ಬಹಿರಂಗಪಡಿಸಿದ್ದಾನೆ. ದ್ವೀಪವೊಂದನ್ನು ಖರೀದಿಸಿ ತನ್ನದೇ ದೇಶ ನಿರ್ಮಿಸಿರುವ ಈ ವಿಚಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 

ಆದರೆ ನಿಮಗೆ ಗೊತ್ತಾ ದೇಶದ ಯಾವುದೇ ಮೂಲೆಯಲ್ಲಾದರೂ ದ್ವೀಪ ಖರೀದಿಸುವ ಅವಕಾಶ ಇದೆ. ನಿಮ್ಮ ಬಳಿ ಹಣವಿದ್ದರೆ ನೀವೂ ದ್ವೀಪ ಖರೀದಿಸಬಹುದು. ವಿಶ್ವದಾದ್ಯಂತ ದ್ವೀಪ ಖರೀದಿಸಿ, ಮಾರಾಟ ಮಾಡುವ ವ್ಯವಹಾರ ನಡೆಯುತ್ತಿರುತ್ತದೆ. ಹಲವಾರು ಕಡೆ ದ್ವೀಪಗಳನ್ನು ಖರೀದಿಸಿ ಬಾಡಿಗೆಗೂ ನೀಡಲಾಗುತ್ತಿದೆ. ದ್ವೀಪ ಖರೀದಿ, ಜಮೀನು ಕೊಂಡಂತೆ. ನಿಮ್ಮಿಷ್ಟದ ದ್ವೀಪ ಆಯ್ಕೆ ಮಾಡಿ, ಹಣ ಪಾವತಿಸಿ ಮನೆ ನಿರ್ಮಿಸಬಹುದು. ದ್ವೀಪಕ್ಕೆ ತಗುಲುವ ವೆಚ್ಚ ಲೊಕೇಶನ್ ಆಧಾರದಲ್ಲಿರುತ್ತದೆ.

ಇನ್ನು ದ್ವೀಪ ಖರೀದಿಸುವುದು ಅಂದುಕೊಂಡಷ್ಟು ಕಷ್ಟವೇನಲ್ಲ. ಹಲವಾರು ಬಾರಿ 1 ಲಕ್ಷ ಡಾಲರ್ ಅಂದರೆ 72 ಲಕ್ಷ ರೂಪಾಯಿ ಮೊತ್ತಕ್ಕೆ ಖರೀದಿಸಬಹುದು. ಸಾಮಾನ್ಯವಾಗಿ ಶ್ರೀಮಂತರು ತಮ್ಮ ರಜಾ ದಿನಗಳನ್ನು ಕಳೆಯಲು ದೂರದಲ್ಲಿರುವ, ಜನರಿಲ್ಲದ ದ್ವೀಪ ಖರೀದಿಸುತ್ತಾರೆ. ಇದು ಖಾಸಗಿ ಆಸ್ತಿಯಾಗಿರುವುದರಿಂದ ತಮ್ಮಿಷ್ಟದಂತೆ ಇದನ್ನು ಬಳಸಬಹುದಾಗಿದೆ.

ಲೊಕೇಷನ್ ಅನ್ವಯ ಮೌಲ್ಯ ನಿಗದಿಯಾಗುತ್ತದೆ. ಅಂದರೆ ಸೆಂಟ್ರಲ್ ಅಮೆರಿಕಾದಲ್ಲಿ ಕಡಿಮೆ ದ್ವೀಪ ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ಆದರೆ ಯೂರೋಪ್ ನಲ್ಲಿ ಈ ಮೌಲ್ಯ ಹೆಚ್ಚಾಗುತ್ತದೆ. ಬಹಾಮಾಸ್ ಹಾಗೂ ಫ್ರೆಂಚ್ ಪೊಲೀನೇಷಿಯನ್ ನಂತಹ ಪ್ರದೇಶಗಳಲ್ಲಿ ದ್ವೀಪ ಖರೀದಿಸುವುದು ಸುಲಭವಲ್ಲ. ಎಲ್ಲಾ ಸೌಕರ್ಯಗಳು ಇಲ್ಲಿ ಲಭ್ಯವಿರುವುದರಿಂದ ಬೆಲೆಯೂ ಹೆಚ್ಚು.

ಲಂಡನ್ ನಲ್ಲಿ ದ್ವೀಪವೊಂದರ ಬೆಲೆ ಏಳೂವರೆ ಲಕ್ಷ ಡಾಲರ್ ಅಂದರೆ 5 ಕೋಟಿ 35 ಲಕ್ಷವಿರುತ್ತದೆ. ಸೆಂಟ್ರಲ್ ಅಮೆರಿಕಾ, ಸ್ಕಾಟ್ ಲ್ಯಾಂಡ್, ಅಯರ್ಲೆಂಡ್, ಸ್ವೀಡನ್ ಹಾಗೂ ಕೆನಡಾದಲ್ಲಿ ದ್ವೀಪ ಖರೀದಿಗೆ ಬೆಸ್ಟ್ ಡೀಲ್ ಮಾಡಬಹುದು.

ರಿಯಾಲಿಟಿ ಸೆಕ್ಟರ್ ನಂತೆ ದ್ವೀಪ ಮಾರಾಟ ಹಾಗೂ ಖರೀದಿಗೂ ಬ್ರೋಕರ್ ಇರುತ್ತಾರೆ. ಕೆಲವೊಂದು ಬಾರಿ ಇದರ ಬೆಲೆ 5 ಮಿಲಿಯನ್ ಡಾಲರ್ ಕೂಡಾ ತಲುಪುತ್ತದೆ. ಆದರೆ ಹಸಿರಿನಿಂದ ಕಂಗೊಳಿಸುವ ಪ್ರಕೃತಿ ನಡುವೆ ನಿಮ್ಮನ್ನು ಡಿಸ್ಟರ್ಬ್ ಮಾಡುವವರು ಯಾರೂ ಇರುವುದಿಲ್ಲ ಎಂಬುವುದೇ ವಿಶೇಷ.

ದ್ವೀಪ ಖರೀದಿ ಕಷ್ಟವಲ್ಲ. ಉದಾಹರಣೆಗೆ ಜರ್ಮನಿಯ ನಾಗರಿಕನೊಬ್ಬ ನೋವಾ ಸ್ಕೋಟಿಯಾದಲ್ಲಿ 60 ಸಾವಿರ ಡಾಲರ್ ಕೊಟ್ಟು 16 ಎಕರೆ ವಿಸ್ತೀರ್ಣವುಳ್ಳ ದ್ವೀಪ ಖರೀದಿಸಿದ. ಈ ದ್ವೀಪದಲ್ಲಿ ಕಾಡು ಪ್ರಾಣಿಗಳನ್ನು ಬಿಟ್ಟು ಬೇರೇನೂ ಇರಲಿಲ್ಲ.

ಆನ್ ಲೈನ್ ದ್ವೀಪ ಖರೀದಿ

ಹಲವಾರು ಕಂಪೆನಿಗಳು ಆನ್ ಲೈನ್ ಮೂಲಕ ದ್ವೀಪ ಮಾರಾಟ ಮಾಡುತ್ತವೆ. ದ್ವೀಪದ ಫೋಟೋ ಜೊತೆ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡಲಾಗುತ್ತದೆ. ಹಲವಾರು ದ್ವೀಪಗಳಿಗೆ ನೀವು ತೆರಳುವುದಷ್ಟೇ ಬಾಕಿ ಇರುತ್ತದೆ. ಉಳಿದಂತೆ ಅಗತ್ಯವಿರುವ ನೀರಿನ ಸೌಲಭ್ಯ ಹಾಗೂ ವಿದ್ಯುತ್ ಸೌಲಭ್ಯ ಅಲ್ಲೇ ಇರುತ್ತದೆ.

ದ್ವೀಪ ಮಾರಾಟ ಮಾಡುವ ಆನ್ ಲೈನ್ ಕಂಪೆನಿ privateislandsonline.com ತನ್ನ ಬಳಿ ಸುಮಾರು 683 ದ್ವೀಪಗಳಿವೆ ಎಂದು ಘೋಷಿಸಿದೆ. ಈ ವೆಬ್ ಸೈಟ್ ನಲ್ಲಿ ದ್ವೀಪದ ಫೋಟೋ ಜೊತೆ ಎಲ್ಲಾ ಮಾಹಿತಿ ನೀಡಲಾಗಿದೆ. ಭೂಮಿಯ ವಿಸ್ತೀರ್ಣ ಎಷ್ಟಿದೆ ಎಂಬ ಮಾಹಿತಿಯನ್ನೂ ನೀಡಲಾಗಿದೆ.

10 ಮಿಲಿಯನ್ ಡಾಲರ್ ಮೌಲ್ಯದ ದ್ವೀಪ 

ಥಾಯ್ಲೆಂಡ್ ಬಳಿ ರಂಗ್ ಯಾಯಿ ಹೆಸರಿನ ದ್ವೀಪವೊಂದು ಮಾರಾಟಕ್ಕಿದೆ. ಇದರ ಮೌಲ್ಯ 16 ಕೋಟಿ ಯುಎಸ್ ಡಾಲರ್. ಫುಕೆಟ್ ದ್ವೀಪದ ಪೂರ್ವ ಭಾಗದಲ್ಲಿರುವ ಇದು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಈ ದ್ವೀಪ ಈ ಪ್ರದೇಶದಲ್ಲಿರುವ ಬಹುದೊಡ್ಡ ದ್ವೀಪವಾಗಿರುವುದರಿಂದ ಮೌಲ್ಯವೂ ಹೆಚ್ಚು.

110 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ರಂಗ್ ಯಾಯಿ ದ್ವೀಪದಲ್ಲಿ ವಿದ್ಯುತ್ ನಿಂದ ಮೊಬೈಲ್ ಸಿಗ್ನಲ್ ವರೆಗೆ ಎಲ್ಲಾ ಸೌಲಭ್ಯಗಳಿವೆ. ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 10 ನಿಮಿಷದಲ್ಲಿ ಈ ದ್ವೀಪಕ್ಕೆ ತಲುಪಬಹುದು.

click me!