ಡಿವೋರ್ಸ್ ಆದೋರ ಮದ್ವೆ ಫೋಟೋಸ್ ಡಿಲೀಟ್, ಹೊಸ ಬ್ಯುಸಿನೆಸ್‌ಗೆ ಸಿಕ್ತಿದೆ ಭರ್ಜರಿ ರೆಸ್ಪಾನ್ಸ್!

By Suvarna News  |  First Published Nov 16, 2023, 12:28 PM IST

ಹಣ ಗಳಿಸಲು ನಾನಾ ದಾರಿಯಿದೆ. ಕೆಲವೊಂದು ಕೆಲಸ ಸುಲಭ ಎನ್ನಿಸಿದ್ರೂ ಮಾಡುವಷ್ಟು ಸಮಯ, ತಾಳ್ಮೆ ಇರೋದಿಲ್ಲ. ಜನರ ಮನಸ್ಥಿತಿ ಅರಿತು ಬ್ಯುಸಿನೆಸ್ ಶುರು ಮಾಡಿದ್ರೆ ಅದ್ರಿಂದ ಲಾಭ ನಿಶ್ಚಿತ ಎನ್ನುವ ಮಾತಿಗೆ ಈ ವ್ಯಕ್ತಿ ಹಾಗೂ ಆತನ ಬ್ಯುಸಿನೆಸ್ ನಿದರ್ಶನ. 
 


ಈಗಿನ ದಿನಗಳಲ್ಲಿ ವಿಚಿತ್ರ ಬ್ಯುಸಿನೆಸ್ ಚಾಲ್ತಿಗೆ ಬರ್ತಿದೆ. ಕೆಲವೊಂದನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಾಗೋದಿಲ್ಲ. ಇಂದು ನಾವು ನಿಮಗೆ ಅಂಥಹದ್ದೇ ಒಂದು ಬ್ಯುಸಿನೆಸ್ ಬಗ್ಗೆ ಹೇಳ್ತೇವೆ. ವಿಚ್ಛೇದನದ ನಂತ್ರ ಜನರಿಗೆ ಹಳೆ ನೆನಪು ಬರದಂತೆ ಮಾಡೋದು ಈ ಕಂಪನಿ ಕೆಲಸವಾಗಿದೆ. ದೇಶದಾದ್ಯಂತ ಇದಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಅನೇಕ ಜನರು ಕಂಪನಿಯನ್ನು ಸಂಪರ್ಕಿಸುತ್ತಿದ್ದಾರೆ. 

ಮದುವೆ (Marriage) ಸಂದರ್ಭದಲ್ಲಿ ಆ ಸುಂದರ ಕ್ಷಣ ಸದಾ ನೆನಪಿರಲಿ ಎನ್ನುವ ಕಾರಣಕ್ಕೆ ವಿಡಿಯೋ (Video) , ಫೋಟೋ ತೆಗೆಯಲಾಗುತ್ತದೆ. ದೊಡ್ಡ ದೊಡ್ಡ ಅಲ್ಬಂ ಮಾಡಿ ಅದನ್ನು ಇಡಲಾಗುತ್ತದೆ. ಇಬ್ಬರ ಮಧ್ಯೆ ಪ್ರೀತಿ ಇದ್ದಾಗ ಆ ಫೋಟೋವನ್ನು ನೋಡಿ ಖುಷಿಪಡುವ ಸಂಗಾತಿ, ಮದುವೆ ಮುರಿದು ಬಿದ್ದಾಗ ಫೋಟೋ ನೋಡಲು ಇಷ್ಟಪಡೋದಿಲ್ಲ. ಮನಸ್ಸಿನಲ್ಲಿರುವ ನೆನಪುಗಳನ್ನು ಹೋಗಲಾಡಿಸೋದು ಬಹಳ ಕಷ್ಟ. ಹಾಗೆ ದೊಡ್ಡ ದೊಡ್ಡ ಆಲ್ಬಂ (Album)  ಕೂಡ. ಅವುಗಳನ್ನು ಎಲ್ಲಿ ಇಡಬೇಕೆಂಬ ಪ್ರಶ್ನೆ ಕಾಡುತ್ತದೆ. ಕೆಲವರು ಅದನ್ನು ಮನೆಯ ಮೂಲೆಯಲ್ಲಿ ಎಸೆಯುತ್ತಾರೆ. ಇನ್ನು ಕೆಲವರಿಗೆ ಇದನ್ನು ಮನೆಯಲ್ಲಿ ಇಡಲು ಮನಸ್ಸಿರೋದಿಲ್ಲ. ಇಡಲು ಜಾಗ ಕೂಡ ಇರೋದಿಲ್ಲ. ಆಗ ಏನು ಮಾಡ್ಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಅದನ್ನು ಕತ್ತರಿಸಿ ಹಾಕೋದು ಸುಲಭವಲ್ಲ.  ನಮ್ಮ ಫೋಟೋಗಳನ್ನು ಸ್ವತಃ ನಾವೇ ಕತ್ತರಿಸಲು ಮನಸ್ಸು ಬರೋದಿಲ್ಲ. ಹಾಗಂತ ಅದನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಜನರ ಈ ಮನಸ್ಥಿತಿಯನ್ನು ಅರಿತ ಕಂಪನಿ ಅವರಿಗೆ ನೆರವಾಗ್ತಿದೆ. 

Tap to resize

Latest Videos

ಈ ನಟನಷ್ಟು ಲಕ್ಸುರಿ ಕಾರ್‌ ಕಲೆಕ್ಷನ್‌ ಶಾರೂಕ್‌, ರಜನೀಕಾಂತ್‌ ಅಲ್ಲು ಅರ್ಜುನ್‌ ಹತ್ರಾನೂ ಇಲ್ಲ!

ಕಂಪನಿ ಎಲ್ಲಿದೆ? : ಈ ಕಂಪನಿ ಇರೋದು ಚೀನಾದಲ್ಲಿ. ಲಿಯು ಎಂಬ ವ್ಯಕ್ತಿ ಚೀನಾದಲ್ಲಿ ಈ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಲಿಯು ಶಾಂಡೋಂಗ್ ಪ್ರಾಂತ್ಯದ ಲ್ಯಾಂಗ್‌ಫಾಂಗ್‌ನ ನಿವಾಸಿಯಾಗಿದ್ದಾರೆ. ವಿಚ್ಛೇದಿತ ಜನರ ಖಾಸಗಿತನವನ್ನು ರಕ್ಷಿಸುವ ಉದ್ದೇಶದಿಂದ ಈ ವ್ಯವಹಾರವನ್ನು ಪ್ರಾರಂಭಿಸಲಾಗಿದೆ. ಲಿಯು ಆರಂಭದಲ್ಲಿ ಒಂದು ಸರ್ವಿಸ್ ಸೆಂಟರ್ ತೆಗೆದಿದ್ದರು. ಹೆಚ್ಚಿನ ಮದುವೆಯ ಫೋಟೋಗಳನ್ನು ಅಕ್ರಿಲಿಕ್ ವಸ್ತುಗಳಿಂದ ತಯಾರಿಸಲಾಗುತ್ತದೆ, ಅದನ್ನು ಸುಲಭವಾಗಿ ಸುಡಲಾಗುವುದಿಲ್ಲ. ಕೆಲವು ಕಡೆ ಜೀವಂತವಿರುವ ವ್ಯಕ್ತಿ ಫೋಟೋವನ್ನು ಸುಡೋದಿಲ್ಲ. ಇದನ್ನು ಕಸಕ್ಕೆ ಹಾಕಿದ್ರೆ ಖಾಸಗಿತನಕ್ಕೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಲಿಯು.  ಖಾಸಗಿತನವನ್ನು ಗಮನದಲ್ಲಿಟ್ಟುಕೊಂಡೇ ನಾನು ಈ ಬ್ಯುಸಿನೆಸ್ ಶುರು ಮಾಡಿದ್ದೇನೆ. ಮದುವೆಯ ಫೋಟೋಗಳು ವೈಯಕ್ತಿಕ ಗೌಪ್ಯತೆ ಸಮಸ್ಯೆಗಳ ಅಡಿಯಲ್ಲಿ ಬರುತ್ತವೆ. ನಾನು ಅವರ ಖಾಸಗಿತನಕ್ಕೆ ಅಡ್ಡಿ ಮಾಡೋದಿಲ್ಲ ಎನ್ನುವ ಲಿಯು, ನನ್ನ ಬ್ಯುಸಿನೆಸ್ ಕ್ಲಿಕ್ ಆಗಲಿದೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ. ಅನೇಕರು ಈಗಾಗಲೇ ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುವ ಲಿಯೋ ಇದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬ ವಿಶ್ವಾಸದಲ್ಲಿದ್ದಾರೆ. 

ರೈತರಿಗೆ ನೆರವು ನೀಡೋ ಈ ಸ್ಟಾರ್ಟ್ ಅಪ್ ವಾರ್ಷಿಕ ವಹಿವಾಟು 550 ಕೋಟಿ; ನಾಲ್ಕೇ ವರ್ಷದಲ್ಲಿ ಯಶಸ್ಸು ಕಂಡ ಗೆಳತಿಯರು

ಲಿಯೋ ಈ ಕೆಲಸಕ್ಕೆ ಚಾರ್ಜ್ ಮಾಡೋದು ಎಷ್ಟು? : ಲಿಯು ಕಂಪನಿ ಹೆಚ್ಚು ದುಬಾರಿಯಲ್ಲ. ಜನರಿಗೆ ಕೆಲಸ ನೀಡಿ ಅತಿ ಕಡಿಮೆ ಹಣವನ್ನು ವಸೂಲಿ ಮಾಡುತ್ತದೆ. ಇದ್ರಿಂದ ಜನರಿಗೂ ಹೊರೆ ಆಗೋದಿಲ್ಲ. 500 ರೂಪಾಯಿಯಿಂದ 1000 ರೂಪಾಯಿಗೆ ಕಂಪನಿ ತನ್ನ ಕೆಲಸ ಮಾಡುತ್ತದೆ. ಫೋಟೋದ ತೂಕದ ಮೇಲೆ ಬೆಲೆ ನಿರ್ಧಾರವಾಗುತ್ತದೆ. 

ಹೇಗೆ ನಡೆಯುತ್ತೆ ಕೆಲಸ ? : ಜನರು ಮೊದಲು ತಮ್ಮ ಫೋಟೋಗಳನ್ನು ಕಳುಹಿಸಬೇಕು. ನಂತ್ರ ಇಡೀ ಪ್ರಕ್ರಿಯೆ ಶುರುವಾಗುತ್ತದೆ. ಎಲ್ಲ ಕೆಲಸವನ್ನು ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ. ಸಿಬ್ಬಂದಿ ಮೊದಲು ಫೋಟೋಗಳ ಮೇಲೆ ಬಣ್ಣ ಎರಚುತ್ತಾರೆ. ನಂತ್ರ ಫೋಟೋಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಅಂತಿಮವಾಗಿ ತ್ಯಾಜ್ಯವನ್ನು ವಿಲೇವಾರಿಗಾಗಿ ವಿದ್ಯುತ್ ಸ್ಥಾವರಕ್ಕೆ ಕಳುಹಿಸಲಾಗುತ್ತದೆ. ಅದರ ವೀಡಿಯೊವನ್ನು   ಗ್ರಾಹಕರಿಗೆ ಕಳುಹಿಸಲಾಗುತ್ತದೆ.
 

click me!