ಆನಂದ್ ಮಹೀಂದ್ರ ರೋಲ್ ಮಾಡೆಲ್ ಈ ಪುಟಾಣಿ ಕಂದ, ಕಾರಣ ಬಿಚ್ಚಿಟ್ಟ ಉದ್ಯಮಿ!

By Chethan Kumar  |  First Published Aug 19, 2024, 4:43 PM IST

ಆನಂದ್ ಮಹೀಂದ್ರ ತಮ್ಮ ಉದ್ಯಮ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳು, ಕ್ರೀಡಾಪಟುಗಳು ಸೇರಿದಂತೆ ಹಲವು ಸಾಧಕರಿಗೆ ಉಡುಗೊರೆಗಳನ್ನು ನೀಡುತ್ತಾ ಮಾದರಿಯಾಗಿದ್ದಾರೆ. ಆದರೆ ಈ ಆನಂದ್ ಮಹೀಂದ್ರ ರೋಲ್ ಮಾಡೆಲ್ ಯಾರು ಗೊತ್ತಾ? 


ಮುಂಬೈ(ಆ.19) ಉದ್ಯಮಿ ಆನಂದ್ ಮಹೀಂದ್ರ ತಮ್ಮ ಬ್ಯೂಸಿ ವೇಳಾಪಟ್ಟಿ ನಡುವೆ ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಸಕ್ರಿಯವಾಗಿದ್ದಾರೆ. ಹಲವರಿಗೆ ಆರ್ಥಿಕ ನೆರವು, ಮತ್ತೆ ಕೆಲವರಿಗೆ ಪ್ರೋತ್ಸಾಹ, ಉದ್ಯೋಗ ಅವಕಾಶ, ಸಾಧಕರಿಗೆ ಸನ್ಮಾನ ಹೀಗೆ ಒಂದಲ್ಲಾ ಒಂದು ಕಾರ್ಯಗಳ ಮೂಲಕ ಆನಂದ್ ಮಹೀಂದ್ರ ಸದಾ ಸಕ್ರಿಯ. ಹೀಗಿರುವ ಆನಂದ್ ಮಹೀಂದ್ರ ರೋಲ್ ಮಾಡೆಲ್ ಪುಟಾಣಿ ಕಂದ. ಹೌದು, ಆನಂದ್ ಮಹೀಂದ್ರ ಭಾನುವಾರದ ರೋಲ್ ಮಾಡೆಲ್ ಈ ಕಂದಮ್ಮ.

ಆನಂದ್ ಮಹೀಂದ್ರ ಪುಟಾಣಿ ಕಂದಮ್ಮನ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ಮಗು ನನ್ನ ಭಾನುವಾರದ ರೋಲ್ ಮಾಡೆಲ್ ಎಂದು ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪುಟಾಣಿ ಮಗುವಿಗೆ ತಲೆ ಮಸಾಜ್ ಮಾಡುವ ದೃಶ್ಯವಿದೆ. ಪುಟಾಣಿ ಮಗು ಮಸಾಜ್ ಮಾಡುತ್ತಿದ್ದಂತೆ ಅದನ್ನು ಅಷ್ಟೇ ಎಂಜಾಯ್ ಮಾಡುತ್ತಿದೆ. ಮಸಾಜ್ ಮಾಡುತ್ತಿದ್ದಂತೆ ಮಗು ನಿದ್ದೆಗೆ ಜಾರುತ್ತಿದೆ. ಮಗುವ ಸಂಡೇ ಮೂಡ್‌ನಲ್ಲಿರುವಂತಿದೆ. ಇಷ್ಟೇ ಅಲ್ಲ ಮಸಾಜ್ ಎಂಜಾಯ್ ಮಾಡುತ್ತಾ ರಿಲ್ಯಾಕ್ಸ್ ಆಗುತ್ತಿದೆ.  ಈ ವಿಡಿಯೋವನ್ನು ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ.

Latest Videos

undefined

ಮಳೆಗೆ ಛತ್ರಿ ಹಿಡಿಯುವ ಬದಲು ಧರಿಸಿ, ಹೊಸ ಐಡಿಯಾ ನೀಡಿದ ಆನಂದ್ ಮಹೀಂದ್ರ ವಿಡಿಯೋ!

ಸೋಮವಾರದಿಂದ ಶನಿವಾರದವರೆಗೆ ತಮ್ಮ ಜವಾಬ್ದಾರಿ, ಕೆಲಸ, ಸಾಮಾಜಿಕ ಕೆಲಸ ಕಾರ್ಯಗಳು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಬ್ಯೂಸಿಯಾಗಿರುವ ಆನಂದ್ ಮಹೀಂದ್ರಗೆ ಭಾನುವಾರ ಈ ರೀತಿಯ ಮಸಾಜ್ ಅಗತ್ಯವಿದೆ ಅನ್ನೋದನ್ನು ಪರೋಕ್ಷವಾಗಿ ಹೇಳಿಕೊಂಡಿದ್ದರೆ. ಹೀಗಾಗಿ ಈ ಮಗು ನನ್ನ ಭಾನುವಾರದ ರೋಲ್ ಮಾಡೆಲ್ ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ.

 

This kid is my role model for
🙂

pic.twitter.com/o03pSZSm08

— anand mahindra (@anandmahindra)

 

ಆನಂದ್ ಮಹೀಂದ್ರ ಹಂಚಿಕೊಂಡ ವಿಡಿಯೋಗೆ ಭರ್ಜರಿ ಕಮೆಂಟ್‌ಗಳು ವ್ಯಕ್ತವಾಗಿದೆ. ನಮ್ಮೆಲ್ಲಾ ಒತ್ತಡದ ಬದುಕಿನಲ್ಲಿ ಭಾನುವಾರ ಕನಿಷ್ಠ ಈ ರೀತಿ ಮಸಾಜ್ ಅಗತ್ಯವಿದೆ. ಈ ಮಗು ನಮಗೂ ಮಾದರಿಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಗುವಿನ ಮುಖದಲ್ಲಿನ ಭಾವಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಮಗುವಿನಂತೆ ಭಾನುವಾರ ದಿನ ಅನುಭವಿಸಬೇಕಿದೆ. ಸಂಪೂರ್ಣ ರಿಲ್ಯಾಕ್ಸ್ ಆಗಬೇಕು. ಇದು ಮುಂದಿನ ಇಡೀ ವಾರ ನಮ್ಮಲ್ಲಿನ ಉತ್ಸಾಹ, ಚೈತನ್ಯ ಹೆಚ್ಚಿಸಲಿದೆ. ಇದರಿಂದ ಇಡೀ ವಾರದ ಕೆಲಸ ಕಾರ್ಯಗಳು ಶುಭವಾಗಿ ಸಂಪನ್ನಗೊಳ್ಳಲಿದೆ ಎಂದು ಮತ್ತೆ ಕೆಲವರು ಅಭಿಪ್ರಾಯಟ್ಟಿದ್ದಾರೆ. 

ಮತ್ತೆ ಕೆಲವರು ಭಾನುವಾರ ಈ ರೀತಿ ರಿಲಾಕ್ಸ್ ಆಗಲು ಸಾಧ್ಯವಿಲ್ಲ. ಮನೆಗೆ ಬೇಕಾದ ವಸ್ತುಗಳ ಖರೀದಿ, ಕ್ಲೀನಿಂಗ್ ಸೇರಿದಂತೆ ನೂರಾರು ಕೆಲಸವಿದೆ ಎಂದಿದ್ದಾರೆ. 

6 ಟನ್ ತೂಕದ 'ಬುಜ್ಜಿ' ರೈಡ್‌ ಮಾಡಿದ ಆನಂದ್ ಮಹೀಂದ್ರ: ವೀಡಿಯೋ ಸಖತ್ ವೈರಲ್

click me!