Business Ideas : ಮನೆ ಸೌಂದರ್ಯ ಹೆಚ್ಚಿಸುವ ಬಿದಿರು ಆದಾಯದ ಮೂಲ

By Suvarna NewsFirst Published Feb 15, 2023, 5:21 PM IST
Highlights

ಬಿದುರಿಲ್ಲದೆ ನಮ್ಮ ಜೀವನವಿಲ್ಲ ಎನ್ನುವಂತಾಗಿದೆ. ನಾವು ಇದನ್ನು ಮನೆಯಲ್ಲಿ ಅನೇಕ ವಸ್ತುಗಳ ರೂಪದಲ್ಲಿ ಬಳಸ್ತೇವೆ. ಬಿದುರಿನ ಕಡ್ಡಿಯಿಂದ ಹಿಡಿದು ಪಿಠೋಪಕರಣದವರೆಗೆ ಬಹುಉಪಯೋಗಿಯಾಗಿರುವ ಈ ಬಿದಿರು ನಿಮ್ಮ ಜೀವನಕ್ಕೆ ದಾರಿಯಾಗಬಲ್ಲದು.
 

ಬಿದಿರಿನ ವಸ್ತುಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅವು ಮನೆಗೆ ವಿಶೇಷ ಲುಕ್ ನೀಡುತ್ತವೆ. ಈಗಿನ ದಿನಗಳಲ್ಲಿ ಜನರು ಮನೆಯ ಅಲಂಕಾರಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ಮನೆ ಹಾಗೂ ಹೊಟೇಲ್ ಗಳಲ್ಲಿ ನೀವು ಬಿದುರಿನ ಪಿಠೋಪಕರಣಗಳನ್ನು ನೋಡ್ಬಹುದು. ವಿದೇಶದಲ್ಲೂ ಈ ಬಿದುರಿನ ಪಿಠೋಪಕರಣಕ್ಕೆ ಬೇಡಿಕೆಯಿದೆ. ನೀವು ಹೊಸ ವ್ಯಾಪಾರ ಮಾಡಲು ಬಯಸಿದ್ರೆ ಬಿದುರಿನ ಪಿಠೋಪಕರಣದ ಮಾರಾಟ ಶುರು ಮಾಡಬಹುದು. ನಾವಿಂದು ಬಿದುರಿನ ಬಿದುರಿನ ಪಿಠೋಪಕರಣದ ಬ್ಯುಸಿನೆಸ್ ಶುರು ಮಾಡೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೆವೆ.

ಬಿದುರಿ (Bamboo) ನ ಪಿಠೋಪಕರಣ ವ್ಯಾಪಾರ (Business) ಪ್ರಾರಂಭಕ್ಕೆ ತಗಲುವ ವೆಚ್ಚ : ಇದನ್ನು ಸಣ್ಣದಾಗಿ ಇಲ್ಲವೆ ದೊಡ್ಡದಾಗಿ ಶುರು ಮಾಡ್ಬಹುದು. ಸಣ್ಣ ಪ್ರಮಾಣದಲ್ಲಿ ಶುರು ಮಾಡುತ್ತೀರಿ ಎಂದಾದ್ರೆ ನೀವು 1 ಲಕ್ಷದಿಂದ 2 ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ನಿಮಗೆ ಬಿದಿರು ಹಾಗೂ ಉತ್ತಮ ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳ ಅಗತ್ಯವಿರುತ್ತದೆ.  ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ನಗರದ ಪುರಸಭೆಯಿಂದ ಅಥವಾ ಸಂಬಂಧಿತ ಸಂಸ್ಥೆಗಳಿಂದ ನೀವು ವ್ಯಾಪಾರ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಬಿದಿರಿನ ವ್ಯಾಪಾರಕ್ಕಾಗಿ ಅತ್ಯಂತ ಪ್ರಮುಖವಾದ ಬಿದಿರಿನ ಜೊತೆಗೆ  ಸರಕುಗಳನ್ನು ತಯಾರಿಸಲು ಬಳಸುವ ವಸ್ತುಗಳು ಕೂಡ ಬೇಕಾಗುತ್ತದೆ.

Business Ideas : ಮಹಿಳೆಯ ಸೌಂದರ್ಯ ಹೆಚ್ಚಿಸಿ ಗಳಿಕೆ ಶುರು ಮಾಡಿ

ತರಬೇತಿ (Training) ಪಡೆಯದ್ರೆ ಒಳ್ಳೆಯದು : ಬಿದಿರಿನ ಉತ್ಪನ್ನಗಳನ್ನು ತಯಾರಿಸುವಲ್ಲಿ ಕೌಶಲ್ಯ (Skill) ನಿಮಗೆ ತಿಳಿದಿಲ್ಲವೆಂದಾದ್ರೆ ನೀವು ತರಬೇತಿ ಪಡೆಯಬೇಕು. ಇದಕ್ಕಾಗಿ ಸರ್ಕಾರ (Govt) ವು ಅನೇಕ ಯೋಜನೆಗಳನ್ನು ನಡೆಸುತ್ತಿದೆ. ರಾಷ್ಟ್ರೀಯ ಬಿದಿರು ಮಿಷನ್ ಅಡಿಯಲ್ಲಿ ಸಂಬಂಧಿತ ತರಬೇತಿಯನ್ನು ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ಉಚಿತವಾಗಿದೆ.  
2018 ರಲ್ಲಿ ಕೇಂದ್ರ ಸರ್ಕಾರ ಮರಗಳ ವರ್ಗದಿಂದ ಬಿದಿರನ್ನು ತೆಗೆದುಹಾಕಿದೆ. ರೈತರಿಗೆ ವ್ಯವಹಾರ ನಡೆಸಲು ಸುಲಭವಾಗ್ಲಿ ಎನ್ನುವ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಬಿದಿರು ಕೃಷಿಯಲ್ಲಿ ಸರ್ಕಾರ ರೈತರಿಗೆ 50 ಸಾವಿರ ಸಹಾಯಧನವನ್ನೂ ನೀಡುತ್ತದೆ. 

ಬಿದಿರಿನ ವ್ಯಾಪಾರ ಹೆಚ್ಚಾದಂತೆ ಕುಶಲಕರ್ಮಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರಿಂದ ಅದರ ಉತ್ಪಾದನೆಯು ಹೆಚ್ಚಾಗುತ್ತದೆ. ನೀವು ಬರೀ ಬಿದುರಿನ ಪಿಠೋಪಕರಣ ತಯಾರಿಸಬೇಕಾಗಿಲ್ಲ, ಜೋಕಾಲಿ, ಬಾಟಲಿ, ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸಬಹುದು. ಇತ್ತೀಚಿನ ಟ್ರೆಂಡ್‌ಗಳನ್ನು ಗಮನದಲ್ಲಿಟ್ಟುಕೊಂಡು ನೀವು ಬಿದಿರಿನ ಉತ್ಪನ್ನಗಳನ್ನು ಸಹ ಮಾಡಬಹುದು. ಒಳಾಂಗಣ ವಿನ್ಯಾಸಕಾರರೊಂದಿಗೆ ಕೈಜೋಡಿಸಿ ಕೆಲಸ ಮಾಡಬಹುದು. ಕಚೇರಿಗಳು, ರೆಸ್ಟೋರೆಂಟ್‌ಗಳ ಜೊತೆ ನೀವು ಒಪ್ಪಂದ ಮಾಡಿಕೊಂಡು ಅವರಿಗೆ ಉತ್ಪನ್ನಗಳನ್ನು ನೀಡಬಹುದು. 

ಆನ್ಲೈನ್ ನಲ್ಲೂ ಮಾರಾಟ ಮಾಡಿ : ನಿಮ್ಮ ವ್ಯಾಪಾರವನ್ನು ಆನ್ಲೈನ್ ಗೆ ತರಬಹುದು. ನೀವು ತಯಾರಿಸಿದ ಬಿದಿರಿನ ವಸ್ತುವನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು. ಅಮೆಜಾನ್, ಫ್ಲಿಪ್ಕಾರ್ಟ್ ಜೊತೆಯೂ ಕೈ ಜೋಡಿಸಬಹುದು. 

Personal Finance : ತಿಂಗಳ ಇಎಂಐ ಹೊಣೆ ಕಡಿಮೆಯಾಗ್ಬೇಕೆಂದ್ರೆ ಹೀಗೆ ಮಾಡಿ

ಒಳಾಂಗಣ ಕೆಲಸ ಮಾಡಿ ಹಣ ಗಳಿಸಿ : ಮನೆಯ ಒಳಾಂಗಣಕ್ಕೆ ಬಿದಿರಿನ ವಿನ್ಯಾಸವನ್ನು ಮಾಡಲಾಗುತ್ತದೆ. ನೀವು ಬಿಲ್ಡರ್‌ಗಳು, ಗುತ್ತಿಗೆದಾರರೊಂದಿಗೆ ಸೇರಿ ಇಂಥ ಕೆಲಸವನ್ನು ಶುರು ಮಾಡಬಹುದು. ಮನೆ, ರೆಸ್ಟೋರೆಂಟ್ ಒಳಾಂಗಣಕ್ಕೆ ಬಿದುರನ್ನು ಹೇಗೆಲ್ಲ ಬಳಸಬೇಕು ಎನ್ನುವ ಜ್ಞಾನ ನಿಮಗಿರಬೇಕು. 

ಬಿದುರಿನ ಕ್ಯಾಂಡಲ್ : ನಿಮ್ಮ ವ್ಯಾಪಾರವನ್ನು ನೀವು ಹೆಚ್ಚು ವಿಸ್ತರಿಲು ಬಯಸಿದ್ರೆ ಕ್ಯಾಂಡಲ್ ವ್ಯಾಪಾರ ಸೇರಿಸಬಹುದು. ಇದಕ್ಕೆ ಬೇಕಾದ ಕಚ್ಚಾ ವಸ್ತುವು ಹತ್ತಿರದ ಅಂಗಡಿಗಳಿಂದಲೂ ಸುಲಭವಾಗಿ ದೊರೆಯುತ್ತದೆ. ವ್ಯಾಪಾರಕ್ಕಾಗಿ ಮೇಣದ ಗುಣಮಟ್ಟವನ್ನು ನೀವು ಕಾಳಜಿ ವಹಿಸಬೇಕು. ಕೈಯಿಂದ ತಯಾರಿಸಿದ ಮೇಣದಬತ್ತಿಗೆ ಬೆಲೆ ಹೆಚ್ಚು. ಮಶಿನ್ ಮೂಲಕವೂ ನೀವು ಬಿದುರಿನ ಮೇಣದಬತ್ತಿ ತಯಾರಿಸಬಹುದು. ಸುಂದರ ಡಿಸೈನ್ ಮೇಣದಬತ್ತಿಗೆ ಯಾವಾಗ್ಲೂ ಬೇಡಿಕೆಯಿರುತ್ತದೆ.

ಬಿದಿರಿನ ವ್ಯವಹಾರದಿಂದ ಲಾಭ : ನೀವು ಯಾವ ಮಟ್ಟದಲ್ಲಿ ವ್ಯಾಪಾರ ಮಾಡ್ತಿದ್ದೀರಿ ಎನ್ನುವುದ್ರ ಮೇಲೆ ಲಾಭ ನಿಂತಿದೆ. ನಿಮ್ಮ ಯೋಜನೆಯನ್ನು ವಿಸ್ತರಿಸುತ್ತಾ ಹೋದಂತೆ, ಹೊಸ ಹೊಸ ಡಿಸೈನ್ ಗಳನ್ನು ಗ್ರಾಹಕರಿಗೆ ನೀಡಿದ್ರೆ ಲಾಭ ಹೆಚ್ಚಾಗುತ್ತದೆ.
 

click me!