Personal Finance : ಇಂಟರ್ವ್ಯೂ ಸಂದರ್ಭದಲ್ಲಿ ಸಂಬಳದ ಸಮಾಲೋಚನೆ ಮಾಡಿದರೇನಾಗುತ್ತೆ?

By Suvarna NewsFirst Published Feb 15, 2023, 4:55 PM IST
Highlights

ಪ್ರತಿಯೊಬ್ಬ ವ್ಯಕ್ತಿಯೂ ಕೆಲಸಕ್ಕೆ ತಕ್ಕ ಸಂಬಳ ಬಯಸ್ತಾನೆ. ಕೆಲವೊಮ್ಮೆ ಇದು ಸಿಗದೆ ಇರಬಹುದು. ಆಗ ಹೊಸ ಹುಡುಕಾಟ ಶುರುವಾಗುತ್ತೆ. ಸಂದರ್ಶನದಲ್ಲಿ ಕೆಲಸ ಸಿಕ್ಕಿದ್ರೂ ಹೆಚ್ ಆರ್ ಮುಂದೆ ಸಂಬಳ ಚರ್ಚೆಯಲ್ಲಿ ಕೆಲವರು ಫೇಲ್ ಆಗ್ತಾರೆ. 
 

ಹೊಸ ಉದ್ಯೋಗದ ಪ್ರಸ್ತಾಪ ಬಂದಾಗ ಇತರ ವಿಷಯಗಳಿಗಿಂತ ಹೆಚ್ಚು ಸಂಬಳದ ಮೇಲೆ ಕೇಂದ್ರೀಕರಿಸುತ್ತೇವೆ. ಉತ್ತಮ ಸಂಬಳ ಸಿಗುತ್ತೆ ಎಂದಾದ್ರೆ ನಾವು ಕೆಲ ವಿಷ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನ ನಡೆಸ್ತೇವೆ. ಇಂಟರ್ವ್ಯೂನಲ್ಲಿ ಪಾಸ್ ಆಗ್ತಿದ್ದಂತೆ ಖುಷಿಯಾಗೋದು ಸಹಜ. ಈ ಮಧ್ಯೆ ಕೆಲವರು ತಮ್ಮ ಸಂಬಳದ ಬಗ್ಗೆ ಕೇಳ್ತಾರೆ. ಮತ್ತೆ ಕೆಲವರು ಸಂಬಳದ ಬಗ್ಗೆ ಮಾತನಾಡದೆ ಆಫರ್ ಮಾಡಿದ ಸಂಬಳವನ್ನ ಒಪ್ಪಿಕೊಂಡು ಬರ್ತಾರೆ. 

ಸಂಬಳ (Salary) ದ ವಿಷ್ಯ ಮಾತನಾಡೋದು ಸ್ವಲ್ಪ ಕಷ್ಟ. ನೀವು ಹೆಚ್ಚು ಸಂಬಳಕ್ಕೆ ಆಫರ್ ಮಾಡಿದ ಮೇಲೆ ನಿಮ್ಮಿಷ್ಟದಂತೆ ಸಂಬಳ ಹೆಚ್ಚಾಗಬಹುದು. ಕೆಲವೊಮ್ಮೆ ನಿಮ್ಮ ಸಂಬಳ ಹೆಚ್ಚಳದ ಆಫರ್ ಒಳ್ಳೆ ಕೆಲಸ (Work) ಕಳೆದುಕೊಳ್ಳಲು ಕಾರಣವಾಗಬಹುದು. ಹಾಗಾಗಿ ಸಂಬಳ ಹೆಚ್ಚಿಸುವ ಬಗ್ಗೆ ಮಾತನಾಡುವ ಮೊದಲು ನೀವು ಅದ್ರ ಲಾಭ – ನಷ್ಟಗಳ ಬಗ್ಗೆ ತಿಳಿದು ಹೆಜ್ಜೆಯಿಡಬೇಕಾಗುತ್ತದೆ. ನಾವಿಂದು ಸಂಬಳ ಹೆಚ್ಚಳದ ಬಗ್ಗೆ ಮಾತುಕತೆ ನಡೆಸಿದ್ರೆ ಆಗುವ ಲಾಭ (Profit) ವೇನು, ನಷ್ಟವೇನು ಎಂಬುದನ್ನು ನಿಮಗೆ ಹೇಳ್ತೆವೆ.

ಸಂಬಳದ ಬಗ್ಗೆ ಚರ್ಚೆ ನಡೆಸುವುದ್ರಿಂದಾಗುವ ಲಾಭ : 
ಕಂಪನಿ (Company) ನಿಮಗೆ ಕೆಲಸದ ಆಫರ್ ಮಾಡಿದ್ದು, ಆಫರ್ ಲೆಟರನ್ನು ನಿಮಗಿನ್ನೂ ನೀಡಿಲ್ಲ ಎನ್ನುವ ಸಂದರ್ಭದಲ್ಲಿ ನೀವು ಸಂಬಳ ಹೆಚ್ಚಳದ ಬಗ್ಗೆ ಚರ್ಚೆ ನಡೆಸಬಹುದು. ಕಂಪನಿ ನಿಮ್ಮ ಕೌಶಲ್ಯಗಳಿಂದ ಪ್ರಭಾವಿತವಾಗಿದೆ ಮತ್ತು ಕಂಪನಿಗೆ ನಿಮ್ಮ ಸಹಾಯವನ್ನು ನಿರೀಕ್ಷಿಸುತ್ತಿದೆ ಎಂದಾದ್ರೆ ಅದು ಸಂಬಳ ಹೆಚ್ಚಿಸುತ್ತದೆ.

Personal Finance : ತಿಂಗಳ ಇಎಂಐ ಹೊಣೆ ಕಡಿಮೆಯಾಗ್ಬೇಕೆಂದ್ರೆ ಹೀಗೆ ಮಾಡಿ

ನಿಮ್ಮ ಕ್ಷೇತ್ರದಲ್ಲಿ ನೀವು ಉತ್ತಮ ಅನುಭವವನ್ನು ಹೊಂದಿದ್ದರೆ ಮತ್ತು ನೀವು ಕೆಲಸ ಮಾಡಿದ ಹಿಂದಿನ ಎಲ್ಲ ಕಂಪನಿಯಲ್ಲಿ ಲಾಭವಾಗಿದ್ರೆ  ನೀವು ಸಂಬಳದ ಬಗ್ಗೆ ಮಾತುಕತೆ ನಡೆಸಬಹುದು. ಪ್ರತಿ ಕಂಪನಿಯು ತಮ್ಮ ಕಂಪನಿಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಅಭ್ಯರ್ಥಿಯನ್ನು ಹುಡುಕುತ್ತದೆ. ಕಂಪನಿಯು ನಿಮಗೆ ಒಂದು ಸಂಬಳವನ್ನು ನೀಡೋದಾಗಿ ಹೇಳಿದ್ದು, ನೀವು ತಕ್ಷಣ ಅದಕ್ಕೆ ಓಕೆ ಎಂದು ಹೇಳಿದರೆ ಕಂಪನಿಗೆ ಅನುಮಾನ ಬರಬಹುದು. ನಿಮಗೆ ಕೆಲಸ ನೀಡಲು ಹಿಂಜರಿಯಬಹುದು. ನೀವು ಹೆಚ್ಚಿನ ಅರ್ಹತೆ ಹೊಂದಿದ್ದರೂ ಅಲ್ಪ ಸಂಬಳಕ್ಕೆ ಕೆಲಸ ಮಾಡಲು ಒಪ್ಪಿದರ ಹಿಂದೆ ಬೇರೆ ಏನೋ ಕಾರಣವಿದೆ ಎಂದು ಅನುಮಾನ ವ್ಯಕ್ತಪಡಿಸಬಹುದು. 

ಸಂಬಳದ ಬಗ್ಗೆ ಚರ್ಚೆ ಮಾಡೋದು ನಿಮಗೂ ಪ್ರಯೋಜನಕಾರಿ. ಒಂದು ನಿಮ್ಮ ನಿರೀಕ್ಷೆಯಷ್ಟೇ ಸಂಬಳ ಸಿಗುತ್ತದೆ. ಇದು ಸ್ವಂತ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ಕೊಡುಗೆಯನ್ನು ಪಡೆದಾಗ ನೀವು ಹೆಚ್ಚು ತೃಪ್ತಿ ಹೊಂದುತ್ತೀರಿ. ಪೂರ್ಣ ಮನಸ್ಸಿನಿಂದ  ಕೆಲಸ ಮಾಡುತ್ತೀರಿ. ಸಂಬಳ ಕಡಿಮೆಯಿದ್ದು, ನೀವದರ ಬಗ್ಗೆ ಚರ್ಚೆ ಮಾಡದೆ ಒಪ್ಪಿಕೊಂಡಿದ್ರೆ ನಂತ್ರ ಇದೇ ಸಂಗತಿ ಮನಸ್ಸಿನಲ್ಲಿ ಕೊರೆಯುತ್ತಿರುತ್ತದೆ. ಪೂರ್ಣ ಮನಸ್ಸಿನಿಂದ ಕೆಲಸ ಮಾಡಲು ಸಾಧ್ಯವಾಗೋದಿಲ್ಲ. ಬೇರೆ ಕೆಲಸದ ಹುಡುಕಾಟದಲ್ಲಿ ಸಮಯ ಹಾಳು ಮಾಡ್ತೀರಿ.

ಸಂಬಳದ ಬಗ್ಗೆ ಮಾತುಕತೆಯಿಂದಾಗುವ ಅನಾನುಕೂಲ : 
ಸಂಬಳಕ್ಕಾಗಿಯೇ ಬಹುತೇಕರು ಉದ್ಯೋಗ ಬದಲಾವಣೆ ಮಾಡಿರ್ತಾರೆ. ಹೆಚ್ಚಿನ ಸಂಬಳವನ್ನು ಅವರು ಕೇಳ್ತಾರೆ. ಆದರೆ ಪ್ರತಿ ಉದ್ಯೋಗ ಪ್ರೊಫೈಲ್‌ಗೆ ಸರಾಸರಿ ವೇತನವನ್ನು ನಿಗದಿಪಡಿಸಲಾಗಿರುತ್ತದೆ. ಅದಕ್ಕಿಂತ ಹೆಚ್ಚಿನ ಸಂಬಳವನ್ನು ಕೇಳಿದಾಗ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. 

ಸಂಬಳದ ಮಾತುಕತೆ ನಡೆಸುವಾಗ ಅನೇಕರು ಅದಕ್ಕೆ ಅಂಟಿಕೊಂಡಿರುತ್ತಾರೆ. ಬೇರೆ ಸೌಲಭ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆಗ ಹೆಚ್ ಆರ್ ನಿಮ್ಮನ್ನು ಬರೀ ಸಂಬಳಕ್ಕೆ ದುಡಿಯುವ ವ್ಯಕ್ತಿ ಎಂದು ಭಾವಿಸುವ ಸಾಧ್ಯತೆಯಿರುತ್ತದೆ.   

ಪ್ರತಿ ಅಂಗಡಿಯಲ್ಲೂ ಕಾಣಸಿಗುವ POS ಮಶಿನ್ ಅಂದ್ರೇನು ಗೊತ್ತಾ?

ಕೆಲಸವೇನು ಹಾಗೆ ಅದಕ್ಕೆ ಮಾರುಕಟ್ಟೆಯಲ್ಲಿ ಎಷ್ಟು ಸಂಬಳ ಸಿಗ್ತಿದೆ ಎಂಬುದನ್ನು ಮೊದಲು ಪತ್ತೆ ಮಾಡಬೇಕು. ನಂತ್ರ ಹೆಚ್ ಆರ್ ಜೊತೆ ಚರ್ಚೆ ನಡೆಸಬೇಕು. ಯಾವುದೇ ಜ್ಞಾನವಿಲ್ಲದೆ ಅತಿ ಸಂಬಳ ಆಫರ್ ಮಾಡ್ತಾರೆ. ಇದ್ರಿಂದ ಕೆಲಸ ಹೋಗುವುದು ಮಾತ್ರವಲ್ಲ ನಿಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತದೆ. ಈಗಾಗಲೇ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚನ್ನು ಕಂಪನಿ ನೀಡಿದ್ದರೆ ನೀವು ಮತ್ತಷ್ಟು ಆಫರ್ ಮಾಡಬಾರದು. 
 

click me!