ಮದ್ಯದ ದೊರೆ ವಿಜಯ್ ಮಲ್ಯ ಜಾಗಕ್ಕೆ ಹೊಸ ಬಿಲಿಯನೇರ್‌, ಲಿಕ್ಕರ್ ಸೇಲ್‌ನಿಂದ ಗಳಿಸ್ತಿರೋದೆಷ್ಟು ಗೊತ್ತಾ?

By Vinutha PerlaFirst Published Feb 10, 2024, 2:09 PM IST
Highlights

ಮದ್ಯದ ದೊರೆ ವಿಜಯ್ ಮಲ್ಯ. ಕಿಂಗ್‌ಫಿಶರ್‌ ಬ್ರ್ಯಾಂಡ್‌ನಲ್ಲಿ ಕೋಟ್ಯಾಂತರ ರೂ. ಮೌಲ್ಯದ ಲಿಕ್ಕರ್ ಬಿಸಿನೆಸ್‌ನ್ನು ನಿರ್ವಹಿಸುತ್ತಿದ್ದರು. ಆದರೆ ಕೊನೆಗೆ ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಪರಾರಿಯಾದರು. ಸದ್ಯ ವಿಜಯ್ ಮಲ್ಯ ಜಾಗದಲ್ಲಿ ಹೊಸ ಬಿಲಿಯನೇರ್‌ ಇದ್ದಾರೆ. ಅವ್ರು ಲಿಕ್ಕರ್ ಸೇಲ್‌ನಿಂದ ಗಳಿಸ್ತಿರೋದೆಷ್ಟು ಗೊತ್ತಾ?

ಭಾರತದ ಮದ್ಯದ ಮಾರುಕಟ್ಟೆಯು ಜಾಗತಿಕವಾಗಿ ಅತಿ ದೊಡ್ಡದಾಗಿದೆ. ಸಾವಿರಾರು ಮಂದಿ ಉದ್ಯಮಿಗಳು ಮದ್ಯ ಮಾರಾಟದಿಂದ ಕೋಟ್ಯಾಧಿಪತಿಗಳಾಗಿದ್ದಾರೆ. ಮದ್ಯ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಕೇಳಿ ಬರೋ ಹೆಸರು ಲಲಿತ್ ಖೈತಾನ್. ಮದ್ಯದ ಬ್ರಾಂಡ್‌, ರಾಡಿಕೊ ಖೈತಾನ್ ಮಾಲೀಕರು. ಇದು ಪ್ರೀಮಿಯಂ ವಿಸ್ಕಿಯನ್ನು ಒಳಗೊಂಡಿರುವ ಹೆಸರುವಾಸಿಯಾದ ಬ್ರ್ಯಾಂಡ್ ಆಗಿದೆ. ರಾಂಪುರ್ ಇಂಡಿಯನ್ ಸಿಂಗಲ್ ಮಾಲ್ಟ್ ವಿಸ್ಕಿ, ರೀಗಲ್ ಟ್ಯಾಲೋನ್ ವಿಸ್ಕಿ ಸೇರಿದಂತೆ ಹಲವು ಹೆಸರಾಂತ ಮದ್ಯಗಳು ಈ ಬ್ರ್ಯಾಂಡ್ ಹೆಸರಲ್ಲಿದೆ. ಲಲಿತ್ ಖೈತಾನ್ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಲಿಕ್ಕರ್ ಬಿಸಿನೆಸ್ ನಿರ್ವಹಿಸುತ್ತಾರೆ.

ತಾಯ್ನಾಡಿನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ 85ಕ್ಕೂ ಹೆಚ್ಚು ದೇಶಗಳಲ್ಲಿ ಲಲಿತ್ ಖೈತಾನ್ ಮದ್ಯವನ್ನು ತಯಾರಿಸುತ್ತಾರೆ ಮತ್ತು ಸರಬರಾಜು ಮಾಡುತ್ತಾರೆ. ರಾಡಿಕೊ ಖೈತಾನ್ ಕಂಪನಿಯು ದೆಹಲಿಯಲ್ಲಿದೆ. ಪ್ರಸ್ತುತ ಸುಮಾರು 23000 ಕೋಟಿ ರೂ. ಹೆಚ್ಚು ಲಾಭವನ್ನು ಗಳಿಸುತ್ತಿದೆ. 

ಬರೋಬ್ಬರಿ 7000 ಕೋಟಿ ಮೌಲ್ಯದ ಸಂಸ್ಥೆ ಸ್ಥಾಪಿಸಿ, ತನ್ನದೇ ಕಂಪನಿಯಿಂದ ವಜಾಗೊಂಡ ಮಹಿಳೆ!

80 ವರ್ಷ ವಯಸ್ಸಿನ ಲಲಿತ್ ಖೈತಾನ್, ಭಾರತದ ಹೊಸ ಬಿಲಿಯನೇರ್ ಆಗಿದ್ದು, ಒಟ್ಟು 1 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಹೆಚ್ಚುತ್ತಿರುವ ಮದ್ಯ ಮಾರಾಟ ಮತ್ತು ಹ್ಯಾಪಿನೆಸ್ ಇನ್ ಎ ಬಾಟಲ್ ಜಿನ್‌ನಂತಹ ಹೊಸ ಡ್ರಿಂಕ್ಸ್‌ನ ಬಿಡುಗಡೆಯಿಂದಾಗಿ ರಾಡಿಕೊ ಖೈತಾನ್ ಲಾಭ ಇನ್ನಷ್ಟು ಹೆಚ್ಚಿದೆ. ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯ ಷೇರುಗಳು ಕಳೆದ ವರ್ಷ 50% ಕ್ಕಿಂತ ಹೆಚ್ಚು ಏರಿಕೆ ಕಂಡವು. ಲಲಿತ್ ಕಂಪನಿಯಲ್ಲಿ 40% ಪಾಲನ್ನು ಹೊಂದಿದ್ದಾರೆ.

ಕೋಲ್ಕತ್ತಾದವರಾದ ಲಲಿತ್ ಖೈತಾನ್, ತಮ್ಮ ಶಿಕ್ಷಣಕ್ಕಾಗಿ ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜ್ ಮತ್ತು ಅಜ್ಮೀರ್‌ನ ಮೇಯೊ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. 1972-1973ರಲ್ಲಿ ಹಲವಾರು ಹೊಣೆಗಾರಿಕೆಗಳನ್ನು ಹೊಂದಿರುವ ವ್ಯಾಪಾರದ ರಾಡಿಕೊ ಖೈತಾನ್‌ನ ಅಧಿಕಾರವನ್ನು ವಹಿಸಿಕೊಂಡರು ಕಾರ್ಪೊರೇಟ್ ಆಡಳಿತದ ಕಟ್ಟುನಿಟ್ಟಾದ ಮಾನದಂಡಗಳನ್ನು ಉಳಿಸಿಕೊಂಡು ಅದನ್ನು ಹೊಸ ಎತ್ತರಕ್ಕೆ ಏರಿಸಲು ತಮ್ಮ ನಿರ್ವಹಣಾ ಶೈಲಿಯನ್ನು ಬಳಸಿದರು.

ದಿನಕ್ಕೆ ಕೇವಲ 20 ರೂ. ಗಳಿಸ್ತಿದ್ದ ಬೆಂಗಳೂರಿನ ಮಹಿಳೆ ಈಗ ಕೋಟಿಗಳ ಒಡತಿ, ಮಾಡೆಲ್‌ಗಳನ್ನು ಮೀರಿಸುವಷ್ಟು ಚೆಲುವೆ!

ಲಾಭಕ್ಕೆ ಅನುಕೂಲಕರ ಸ್ಥಾನದಲ್ಲಿದ್ದರೂ, ರಾಡಿಕೊ ಖೈತಾನ್ ಅನೇಕ ಸ್ಪರ್ಧಿಗಳನ್ನು ಎದುರಿಸುತ್ತಿದೆ. ಅತ್ಯಂತ ದೊಡ್ಡದೆಂದರೆ ಯುನೈಟೆಡ್ ಸ್ಪಿರಿಟ್ಸ್, ಪಟ್ಟಿ ಮಾಡಲಾದ ಡಿಯಾಜಿಯೊ ಅಂಗಸಂಸ್ಥೆಯಾಗಿದ್ದು, ಇದನ್ನು ಈ ಹಿಂದೆ ಮದ್ಯದ ಉದ್ಯಮಿ ಮತ್ತು ಮಾಜಿ ಬಿಲಿಯನೇರ್ ವಿಜಯ್ ಮಲ್ಯ ನೇತೃತ್ವ ವಹಿಸಿದ್ದರು.

click me!