ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಬಂಪರ್‌?

By Kannadaprabha News  |  First Published Jan 27, 2023, 6:30 AM IST

ಆದಾಯ ತೆರಿಗೆ ವಿನಾಯಿತಿ, ಸೆಕ್ಷನ್‌ 80ಸಿ ಅಡಿ ಹೂಡಿಕೆ ಮಿತಿ ಹೆಚ್ಚಳ ಸಂಭವ,  ಸ್ಟಾಂಡರ್ಡ್‌ ಡಿಡಕ್ಷನ್‌ ಹೆಚ್ಚಳ, ಕ್ಯಾಪಿಟಲ್‌ ಗೇನ್‌ ತೆರಿಗೆ ನೀತಿ ಸರಳ ಸಾಧ್ಯತೆ. 


ನವದೆಹಲಿ(ಜ.27):  ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್‌ ಫೆ.1ರಂದು ಮಂಡನೆಯಾಗಲಿದ್ದು, ಮಧ್ಯಮವರ್ಗವನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ಹಲವು ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ವಿನಾಯಿತಿ, ಸ್ಟಾಂಡರ್ಡ್‌ ಡಿಡಕ್ಷನ್‌, ಸೆಕ್ಷನ್‌ 80ಸಿ ಅಡಿ ಹೂಡಿಕೆ ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡುವ ಸಂಭವವಿದೆ.

ಮಧ್ಯಮವರ್ಗಕ್ಕೆ ಅನುಕೂಲ ಮಾಡಿಕೊಡುವ ಪ್ರಸ್ತಾವಗಳ ಕುರಿತು ಈಗಾಗಲೇ ಹಣಕಾಸು ಸಚಿವಾಲಯ ಪರಿಶೀಲನೆ ನಡೆಸುತ್ತಿದೆ. ದೊಡ್ಡ ಸಮುದಾಯವಾಗಿರುವ ಮಧ್ಯಮವರ್ಗಕ್ಕಾಗಿ ಏನೇನು ಕೊಡುಗೆ ನೀಡಬಹುದು ಎಂಬ ಬಗ್ಗೆ ವಿವಿಧ ರಾಜ್ಯ ಸರ್ಕಾರಗಳು ಪ್ರಸ್ತಾವ ಸಲ್ಲಿಸಿದ್ದು, ಅದನ್ನೂ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

undefined

Business Ideas: ಮನೆ ಮನೆಗೂ ಬೇಕೇಬೇಕಾಗಿರೋ ಗ್ಯಾಸ್ ಸಿಲಿಂಡರ್ ಬ್ಯಸಿನೆಸ್‌ ಮಾಡಿ ಹಣ ಗಳಿಸಿ

2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತಮ್ಮ ಮೊದಲ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 2ರಿಂದ 2.5 ಲಕ್ಷ ರು.ಗೆ ಹೆಚ್ಚಳ ಮಾಡಿದ್ದರು. ಅದಾದ ನಂತರ ಎಷ್ಟೇ ಬೇಡಿಕೆ ಬಂದರೂ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ಮಿತಿ ಏರಿಸಿಲ್ಲ. 2019ರಲ್ಲಿ 50 ಸಾವಿರ ರು. ಸ್ಟಾಂಡರ್ಡ್‌ ಡಿಡಕ್ಷನ್‌ ತರಲಾಗಿತ್ತು. ಅದರ ಮಿತಿಯೂ ಏರಿಕೆಯಾಗಿಲ್ಲ. ಮಧ್ಯಮವರ್ಗದ ಮೇಲಿನ ಹೊರೆ ತಗ್ಗಿಸಲು ಪ್ರಮುಖವಾಗಿ ಈ ಎರಡೂ ಮಿತಿ ಏರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮುಂದಾಗಬಹುದು ಎಂದು ಹಲವು ತಜ್ಞರು ಹೇಳುತ್ತಿದ್ದಾರೆ.

ಮತ್ತೊಂದೆಡೆ, ಜೀವ ವಿಮೆ, ನಿಶ್ಚಿತ ಠೇವಣಿ, ಬಾಂಡ್‌, ವಸತಿ ಹಾಗೂ ಪಿಪಿಎಫ್‌ನಂತಹ ಸಾಧನಗಳಲ್ಲಿ ಹಣ ವಿನಿಯೋಗಿಸಿ ಸೆಕ್ಷನ್‌ 80ಸಿ ಅಡಿ ಪಡೆಯಬಹುದಾದ ಆದಾಯ ತೆರಿಗೆ ವಿನಾಯಿತಿ ಮೊತ್ತವನ್ನೂ ಹೆಚ್ಚಳ ಮಾಡುವ ಕುರಿತು ಹಣಕಾಸು ಸಚಿವಾಲಯ ಗಂಭೀರವಾಗಿ ಗಮನಹರಿಸುತ್ತಿದೆ ಎನ್ನಲಾಗಿದೆ. ಸದ್ಯ ವಾರ್ಷಿಕ 1.50 ಲಕ್ಷ ರು.ವರೆಗೆ ಸೆಕ್ಷನ್‌ 80ಸಿ ಅಡಿ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಸೆಕ್ಷನ್‌ 80ಸಿ ಅಡಿ ಬರುವ ಎಲ್ಲ ಹೂಡಿಕೆಗೂ ವಿನಾಯಿತಿ ಪ್ರಕಟಿಸುವ ಬದಲು ವೈದ್ಯಕೀಯ ವಿಮಾ ಪ್ರೀಮಿಯಂ ಪಾವತಿಗೆ ಮಾತ್ರ ಮಿತಿ ಹೆಚ್ಚಳ ಮಾಡುವ ಪ್ರಸ್ತಾವವೂ ಇದೆ. ಷೇರುಪೇಟೆಯಲ್ಲಿ ಹಣ ತೊಡಗಿಸುವ ಮಧ್ಯಮವರ್ಗದವರ ಅನುಕೂಲಕ್ಕಾಗಿ ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ನಿಯಮಗಳನ್ನು ಸರಳಗೊಳಿಸುವ ಆಯ್ಕೆಯೂ ಸರ್ಕಾರದ ಮುಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜೀವ ವಿಮೆ, ಆರೋಗ್ಯ ವಿಮೆಯಂತಹ ಯೋಜನೆಗಳಿಗೆ ಹೆಚ್ಚುವರಿ ತೆರಿಗೆ ವಿನಾಯಿತಿ ಕೊಡಬೇಕು. ಇದರಿಂದ ಟಮ್‌ರ್‍ ಇನ್ಶೂರೆನ್ಸ್‌ನಂತಹ ವಿಮಾ ಯೋಜನೆಗಳು ಮತ್ತಷ್ಟುಜನಪ್ರಿಯವಾಗಲಿವೆ. ಆದಾಯ ಗಳಿಸುವ ಕುಟುಂಬದ ಸದಸ್ಯ ಅಕಾಲಿಕ ಮರಣಕ್ಕೆ ಈಡಾದಾಗ ಆತನ ಕುಟುಂಬಕ್ಕೆ ಸಂಪೂರ್ಣ ಹಣಕಾಸು ರಕ್ಷಣೆ ದೊರೆತಂತಾಗುತ್ತದೆ ಎಂದು ಮ್ಯಾಕ್ಸ್‌ ಲೈಫ್‌ ಇನ್ಶೂರೆನ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಪ್ರಶಾಂತ್‌ ತ್ರಿಪಾಠಿ ತಿಳಿಸಿದ್ದಾರೆ.

ಉದ್ಯೋಗ ಕಡಿತದ ಈ ದಿನಗಳಲ್ಲಿಆರ್ಥಿಕ ಮುಗ್ಗಟ್ಟು ಎದುರಾದ್ರೆ ಏನ್ ಮಾಡ್ತೀರಾ? ಹೀಗೆ ಸಿದ್ಧತೆ ಮಾಡಿಕೊಳ್ಳಿ

ಮಧ್ಯಮವರ್ಗಕ್ಕೆ ಸರ್ಕಾರ ಬಜೆಟ್‌ನಲ್ಲಿ ಒತ್ತು ನೀಡಬಹುದು ಎಂಬ ವರದಿಗೆ ಪುಷ್ಟಿನೀಡುವಂತೆ, ‘ನಾನೂ ಮಧ್ಯಮ ವರ್ಗದವಳು. ಹೀಗಾಗಿ ನನಗೂ ಮಧ್ಯಮವರ್ಗದ ಒತ್ತಡದ ಬಗ್ಗೆ ಅರಿವಿದೆ’ ಎಂದು ಇತ್ತೀಚೆಗಷ್ಟೇ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಅದೇ ವೇಳೆ, ಮೋದಿ ಸರ್ಕಾರ ಮಧ್ಯಮವರ್ಗದವರ ಮೇಲಿನ ತೆರಿಗೆ ಹೆಚ್ಚಳ ಮಾಡಿಲ್ಲ ಎಂದೂ ಹೇಳಿದ್ದರು.

ಸ್ಟಾರ್ಟಪ್‌ಗೆ ಮತ್ತಷ್ಟು ಕೊಡುಗೆ:

ದೇಶದಲ್ಲಿ ಸ್ಟಾರ್ಟಪ್‌ ವಾತಾವರಣವನ್ನು ಮತ್ತಷ್ಟುಬಲಯುತಗೊಳಿಸಲು ಹಾಗೂ ದೇಶೀಯ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಯೋಜನೆ ಪ್ರಕಟಿಸುವ ನಿರೀಕ್ಷೆ ಇದೆ. ಇದೇ ವೇಳೆ, ಮತ್ತಷ್ಟುವಲಯಗಳಿಗೆ ಉತ್ಪಾದನೆ ಆಧರಿತ ಉತ್ತೇಜನ ಯೋಜನೆಯನ್ನು ವಿಸ್ತರಿಸುವ ಸಂಭವವೂ ಇದೆ ಎಂದು ಮೂಲಗಳು ತಿಳಿಸಿವೆ.

click me!