Karnataka Budget: ಏಪ್ರಿಲ್‌ ಅಂತ್ಯದೊಳಗೇ ಬಜೆಟ್‌ ಜಾರಿ: ಸಿಎಂ ಬೊಮ್ಮಾಯಿ

Published : Mar 19, 2022, 04:55 AM IST
Karnataka Budget: ಏಪ್ರಿಲ್‌ ಅಂತ್ಯದೊಳಗೇ ಬಜೆಟ್‌ ಜಾರಿ: ಸಿಎಂ ಬೊಮ್ಮಾಯಿ

ಸಾರಾಂಶ

*   ಬಜೆಟ್‌ ಕಾರ್ಯಕ್ರಮಗಳ ಜಾರಿ ಬಗ್ಗೆ ಯಾರಿಗೂ ಸಂಶಯ ಬೇಡ *   ಈ ತಿಂಗಳ ಅಂತ್ಯದೊಳಗೆ ಕಾರ್ಯಕ್ರಮ ಅನುಷ್ಠಾನ ವರದಿ *  ಯಾವುದೇ ಆಸ್ತಿ ಮಾರಾಟ ಮಾಡುವುದಿಲ್ಲ  

ಬೆಂಗಳೂರು(ಮಾ.19): ಬಜೆಟ್‌ನ(Budget) ಕಾರ್ಯಕ್ರಮಗಳು ಕೇವಲ ಘೋಷಣೆಗಳಾಗಿ ಉಳಿಯುವುದಿಲ್ಲ. ಈಗಾಗಲೇ ಆಯಾ ಇಲಾಖೆಗಳಿಗೆ ಅನುಷ್ಠಾನ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಪತ್ರ ಬರೆದಿದ್ದು, ಏಪ್ರಿಲ್‌ ಅಂತ್ಯದೊಳಗೆ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತಿಳಿಸಿದ್ದಾರೆ.

ಶುಕ್ರವಾರ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಬಜೆಟ್‌ನ ಕಾರ್ಯಕ್ರಮಗಳ ಜಾರಿ ಕುರಿತು ಸಂಶಯ ಬೇಡ. ಜಾರಿಗೆ ಏನೆಲ್ಲಾ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡೇ ಘೋಷಣೆ ಮಾಡಿದ್ದೇವೆ. ಮಾರ್ಚ್ ಅಂತ್ಯದೊಳಗೆ ಇಲಾಖೆಗಳಿಗೆ ಜಾರಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಅದಕ್ಕೆ ಬೇಕಾದ ಅನುದಾನದ(Grants) ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ. ಏಪ್ರಿಲ್‌ ಕೊನೆಯ ವಾರದೊಳಗೆ ಎಲ್ಲಾ ಕಾರ್ಯಕ್ರಮಗಳು ಆರಂಭವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Karnataka Budget: 'ಸಾಲ ಮಾಡಿ ಹೋಳಿಗೆ ತಿಂದಿಲ್ಲ.. ಸಾಲದ ಅವಕಾಶವಿದ್ದರೂ ರೊಟ್ಟಿತಿನ್ನುತ್ತಿದ್ದೇವೆ'

ರಾಜ್ಯದ(Karnataka) ಆರ್ಥಿಕ ವ್ಯವಸ್ಥೆಯನ್ನು ಕೊರೋನಾ(Coronavirus) ಪೂರ್ವ ಮತ್ತು ಕೊರೋನಾ ನಂತರ ಎಂದು ವಿಂಗಡಿಸಿ ನೋಡಬೇಕು. ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಆರ್ಥಿಕ ಸಂಪನ್ಮೂಲ(Financial Resources)ಕ್ರೋಢೀಕರಣ ಕುಗ್ಗಿದೆ. 21 ಸಾವಿರ ಕೋಟಿ ರು. ತೆರಿಗೆ(Tax) ಸಂಗ್ರಹ ಕಡಿಮೆಯಾಗಿದೆ. ಜತೆಗೆ ಕೊರೋನಾ ನಿರ್ವಹಣೆಗೆ 15 ಸಾವಿರ ಕೋಟಿ ರು. ಖರ್ಚು ಮಾಡಲಾಗಿದೆ. ಹೀಗಾಗಿ, ಕೆಲವು ಕಾರ್ಯಕ್ರಮಗಳನ್ನು ಮೊಟಕುಗೊಳಿಸಬೇಕಾಯಿತು. ಕೊರೋನಾ ಕಾರಣದಿಂದ ಆರ್ಥಿಕ ಖರ್ಚು ಜಾಸ್ತಿ ಆಗಿದೆ. ಆದರೂ, ಸಾಲವನ್ನು ಮಿತಿಯಲ್ಲಿಯೇ ಪಡೆದುಕೊಂಡು, ನಿಶ್ಚಿತ ಖರ್ಚುಗಳನ್ನು ಶೇ.97 ರಿಂದ ಶೇ.89ಕ್ಕೆ ಕಡಿಮೆ ಮಾಡಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣವನ್ನು ಮೀಸಲಾಗುತ್ತಿದೆ. ಮೆಗಾ ಪ್ರಾಜೆಕ್ಟ್‌ಗಳಿಗೆ ಅವಕಾಶ ಮಾಡಿಕೊಟ್ಟು ಉದ್ಯೋಗವಕಾಶ(Jobs) ಹೆಚ್ಚಿಸಲಾಗಿದೆ. ದುಡಿಯ ವರ್ಗ, ಹೆಣ್ಣುಮಕ್ಕಳು, ತುಳಿತಕೊಳಗಾದವರಿಗೆ ಆದ್ಯತೆ ನೀಡಲಾಗಿದೆ ಎಂದರು.

ನೆರೆಯ ರಾಜ್ಯಕ್ಕೆ ಹೋಲಿಸಿದರೆ ಆರ್ಥಿಕ ಸ್ಥಿತಿ ಉತ್ತಮ:

ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ರಾಜ್ಯದ ರಾಜಸ್ವ ಕೊರತೆ 14,699 ಕೋಟಿ ರು. ಇದೆ. ಆದರೆ, ಆಂಧ್ರಪ್ರದೇಶ 17 ಸಾವಿರ ಕೋಟಿ, ಕೇರಳ 22,968 ಕೋಟಿ, ಮಹಾರಾಷ್ಟ್ರ 24 ಸಾವಿರ ಕೋಟಿ ಹಾಗೂ ರಾಜಸ್ತಾನ 23 ಸಾವಿರ ಕೋಟಿ ರು. ರಾಜಸ್ವ ಕೊರತೆಯನ್ನು ಹೊಂದಿವೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ 67,100 ಕೋಟಿ ರೂ. ಸಾಲ ಪಡೆಯಲು ಅವಕಾಶ ಇತ್ತು. ಆದರೆ, 63,100 ಕೋಟಿ ರೂ. ಸಾಲ ಪಡೆದಿದ್ದೇವೆ. ರಾಜ್ಯವು ಆರ್ಥಿಕ ನಿರ್ವಹಣೆಯಲ್ಲಿ ಸರಿದಾರಿಯಲ್ಲಿದೆ ಎಂದು ಇದೇ ವೇಳೆ ಬೊಮ್ಮಾಯಿ ಪ್ರತಿಪಾದಿಸಿದರು.

ಈ ಮಧ್ಯೆ ಮಾತನಾಡಿದ ವಿರೋಧ ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ರಾಜ್ಯದ ಆರ್ಥಿಕ ಇಲಾಖೆಯ ಸಮೀಕ್ಷೆಯ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಬಜೆಟ್‌ ಸಿದ್ಧಪಡಿಸಲಾಗಿದೆ. ಸಮೀಕ್ಷೆಯಲ್ಲಿಯೇ ರಾಜ್ಯಕ್ಕೆ ಅಗತ್ಯವಿದ್ದ ಅಂಶಗಳು ಹೆಚ್ಚಿದ್ದವು ಎಂದು ದೂರಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು ‘ಕೊರೋನಾ ಪೂರ್ವದ ಆರ್ಥಿಕ ಸಮೀಕ್ಷೆಯಾಗಿದ್ದು, ಸದ್ಯ ಪರಿಸ್ಥಿತಿ ಬದಲಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಅಂಶಗಳನ್ನು ಮಾತ್ರ ಪರಿಗಣಿಸಲಾಗಿದೆ’ ಎಂದು ಉತ್ತರಿಸಿದರು.

ಬೊಮ್ಮಾಯಿ ಮಂಡಿಸಿದ್ದು ಸಾಲದ ಬಜೆಟ್‌: ಇದು ಡಬಲ್‌ ಎಂಜಿನ್‌ ಸರ್ಕಾರವಲ್ಲ, ಡಬ್ಬಾ ಸರ್ಕಾರ: ಸಿದ್ದು

ಇಂದಿರಾ ಕ್ಯಾಂಟಿನ್‌ಗೆ ಮೂರು ವರ್ಷದಿಂದ ಹಣ ನೀಡದೆ ಮುಚ್ಚಿಸುವ ಪ್ರಯತ್ನ ಮಾಡಲಾಗಿದೆ. ಮನ್‌ರೇಗಾದಂತಹ ಬಡವರ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ಒಟ್ಟಾರೆ ನಿರಾಶದಾಯಕ, ಚುನಾವಣಾ ಪೂರ್ವ ಬಜೆಟ್‌ ಆಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ಯಾವುದೇ ಆಸ್ತಿ ಮಾರಾಟ ಮಾಡುವುದಿಲ್ಲ

ಈ ಹಿಂದೆ ಬಿಜೆಪಿ ಸರ್ಕಾರ(BJP Government) ಅಡಮಾನವಿಟ್ಟಿದ್ದ ಆಸ್ತಿಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ್ದಾಗ ಮರಳಿ ಪಡೆದಿದ್ದರು. ಕೇಂದ್ರ ಸರ್ಕಾರದಿಂದ ಜಿಎಸ್‌ಟಿ(GST) ಹಣ ಸೂಕ್ತವಾಗಿ ಬರುತ್ತಿಲ್ಲ. ಸದ್ಯ ಆದಾಯ ಕೊರತೆ ಇದೆ ಎಂಬ ಕಾರಣಕ್ಕೆ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸರ್ಕಾರವು ಆಸ್ತಿ ಮಾರಾಟ, ಅಡಮಾನವಿಡಲು ಮುಂದಾಗಬಾರದು ಎಂದು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಲೇವಡಿ ಮಾಡಿದರು. ಅವರ ಮಾತಿಗೆ ಉತ್ತರಿಸಿದ ಮುಖ್ಯಮಂತ್ರಿಗಳು ‘ಸರ್ಕಾರದ ಯಾವುದೇ ಆಸ್ತಿಯನ್ನು ಮಾರಾಟ ಮಾಡುವುದಿಲ್ಲ, ಅಡಮಾನಕ್ಕೂ ಮುಂದಾಗುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್