Budget 2021: ರೈಲ್ವೇಗೆ 1,10,055 ಕೋಟಿ ರೂ ಅನುದಾನ ಮೀಸಲು!

Published : Feb 01, 2021, 02:33 PM ISTUpdated : Feb 01, 2021, 04:33 PM IST
Budget 2021: ರೈಲ್ವೇಗೆ 1,10,055 ಕೋಟಿ ರೂ ಅನುದಾನ ಮೀಸಲು!

ಸಾರಾಂಶ

ರೈಲ್ವೇ ಅಭಿವೃದ್ಧಿಗೆ ಹೊಸ ಘೋಷಣೆ| ರೈಲ್ವೇಗೆ 1,10,055 ಕೋಟಿ ರೂ ಅನುದಾನ ಮೀಸಲು| ರೈಲ್ವೇಸ್ 2.17 ಲಕ್ಷ ಕೋಟಿ ರೂ ಮೊತ್ತದ ದಾಖಲೆಯ ಬಂಡವಾಳ ವೆಚ್ಚ. 

ನವದೆಹಲಿ(ಫೆ.01): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರೈಲ್ವೇ ಅಭಿವೃದ್ಧಿಗೆ ಹೊಸ ಘೋಷಣೆಗಳನ್ನು ಮಾಡಿದ್ದಾರೆ. ಅಲ್ಲದೇ 2021-22ನೇ ಸಾಲಿನ ರೈಲ್ವೆ ಯೋಜನೆಗಳಿಗೆ 1,10,055 ಕೋಟಿ ರೂ ಅನುದಾನ ಘೋಷಿಸಿದ್ದಾರೆ.

"

ಸಂಸತ್ ನಲ್ಲಿ ಕೇಂದ್ರ ಬಜೆಟ್ 2021 ಮಂಡಿಸಿದ ನಿರ್ಮಲಾ ಸೀತಾರಾಮನ್ , ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಟ್ಟಿದ್ದು. ಕಳೆದ ಬಾರಿಯ ರೈಲ್ವೇ ಬಜೆಟ್ ಗಿಂತ 40,055 ಕೋಟಿ ರೂ ಹೆಚ್ಚಿದೆ ಎಂದ್ದಾರೆ. ಕಳೆದ ವರ್ಷ ರೈಲ್ವೇ ಇಲಾಖೆಗೆ 70,000 ಕೋಟಿ ರೂ ಮೀಸಲಿಡಲಾಗಿತ್ತು.

* ಭಾರತೀಯ ರೈಲ್ವೆ ಯೋಜನೆ 2030 ಸಿದ್ಧ. 

* ರೈಲ್ವೇಗೆ 2.17 ಲಕ್ಷ ಕೋಟಿ ರೂದ ಮೊತ್ತದ ದಾಖಲೆಯ ಬಂಡವಾಳ ವೆಚ್ಚ. 

* ರೈಲ್ವೆಗೆ 1.15 ಲಕ್ಷ ಕೋಟಿ ರೂ ನೀಡುತ್ತಿದ್ದು, ಅದರಲ್ಲಿ ಸಿಎಪಿಇಎಕ್ಸ್ (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್) ಮೊತ್ತ 1.07 ಲಕ್ಷ ಕೋಟಿ ರೂ ಇರಲಿದೆ. 

* ರೈಲ್ವೆಯು ಮುಂದೆ ಸರಕು ಸಾಗಣೆ ಕಾರಿಡಾರ್‌ಗೆ ಹೆಚ್ಚಿನ ಗಮನ.

* 46,000 ಕಿ.ಮೀ. ಈ ವರ್ಷ ಬ್ರಾಡ್​ಗೇಜ್​ ಹಳಿ ಪರಿವರ್ತನೆ

* ಸರಕು ಕಾರಿಡಾರ್ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದ್ದು, 18,000 ಕೋಟಿ ರೂ ಮೊತ್ತದ ಸಾರ್ವಜನಿಕ ಸಾರಿಗೆಯ ಪಾಲನ್ನು ಪಡೆದುಕೊಳ್ಳುವತ್ತ ಕೆಲಸ

* ಜೂನ್ 2022ರ ಒಳಗೆ ಎರಡು ಕಾರಿಡಾರ್ ಪೂರ್ಣ

* 2023ರ ಡಿಸೆಂಬರ್ ವೇಳೆಗೆ 100 ಬ್ರಾಡ್‌ಗೇಜ್ ರೈಲ್ವೇ ಹಳಿಗಳ ವಿದ್ಯುದೀಕರಣ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?