
ನವದೆಹಲಿ(ಫೆ.01): ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಕುರಿತು ಉಲ್ಲೇಖಿಸುತ್ತಾ ಇಡೀ ವಿಶ್ವವೇ ಇಷ್ಟು ದೊಡ್ಡ ಸಂಕಟ ಎದುರಿಸುತ್ತಿರುವಾಗ, ಎಲ್ಲರ ದೃಷ್ಟಿ ಭಾರತದ ಮೇಲಿದೆ. ಹೀಗಿರುವಾಗ ನಾವು ನಮ್ಮ ತೆರಿಗೆದಾರರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದಿದ್ದಾರೆ,. ಇದರೊಂದಿಗೆ ಅವರು 75 ವರ್ಷ ಮೇಲ್ಪಟ್ಟ ಪಿಂಚಣಿ ಪಡೆಯುವವರಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇಲ್ಲಿದೆ ನೋಡಿ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಮಾಡಿದ ಕೆಲ ಪ್ರಮುಖ ಘೋಷಣೆಗಳು
"
* ನೇರ ತೆರಿಗೆ ಪದ್ಧತಿಯಲ್ಲಿ ಹಲವು ಸುಧಾರಣೆಗ. ಕಾರ್ಪೋರೇಟ್ ಟ್ಯಾಕ್ಸ್ ಭಾರೀ ಕಡಿತ.
* ತೆರಿಗೆದಾರರ ಸಂಖ್ಯೆ ಭಾರೀ ಏರಿಕೆ. 3.31 ಕೋಟಿ ಇದ್ದ ತೆರಿಗೆದಾರರ ಸಂಖ್ಯೆ 6.48 ಕೋಟಿಗೇರಿಕೆ
* 75 ವರ್ಷ ಮೇಲ್ಪಟ್ಟ ಪಿಂಚಣಿದಾರರಿಗೆ ಆದಾಯ ತೆರಿಗೆ ಇಲ್ಲ
* NRIಗಳಿಗೆ ತೆರಿಗೆ ಪಾವತಿಸಲು ಬಹಳ ಸಮಸ್ಯೆಯಾಗುತ್ತಿದೆ. ಆದರೆ ಇನ್ಮುಂದೆ ಡಬಲ್ ಟ್ಯಾಕ್ಸ್ ಸಿಸ್ಟಂನಿಂದ ವಿನಾಯಿತಿ.
* ಸ್ಟಾರ್ಟ್ ಅಪ್ಸ್ ಉದ್ದಿಮೆಗಳಿಗೆ ಮತ್ತೆ 1 ವರ್ಷ ತೆರಿಗೆ ರಿಲೀಫ್- ಬಂಡವಾಳದ ಮೇಲಿನ ಲಾಭಕ್ಕೆ ತೆರಿಗೆ ವಿಧಿಸಲ್ಲ. 2022 ಮಾರ್ಚ್ 31ರ ತನಕ ಈ ರಿಲೀಫ್
* ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ತೆರಿಗೆದಾರರಿಗೆ ನಿರಾಸೆ!
ಆದಾಯ ತೆರಿಗೆಯಲ್ಲಿ ಜನ ಸಾಮಾನ್ಯರಿಗೆ ಬಂಪರ್ ಸಿಗುತ್ತದೆ ಅಂದುಕೊಂಡಿದ್ದವರಿಗೆ ಇದೀಗ ನಿರಾಸೆಯಾಗಿದೆ. ಯಾವುದೇ ರೀತಿಯ ಬದಲಾವಣೆಯನ್ನು ಆದಾಯ ತೆರಿಗೆ ಸಂಬಂಧ ಘೋಷಿಸಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.