1 ರೂ.ಗೆ 1GB ಡೇಟಾ; 400GBಯ ಬಿಗ್ ಆಫರ್; ವ್ಯಾಲಿಡಿಟಿ, ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

Published : Jun 29, 2025, 10:20 AM IST
BSNL

ಸಾರಾಂಶ

ಫ್ಲ್ಯಾಶ್ ಸೇಲ್‌ನಲ್ಲಿ 400 ರೂಪಾಯಿಗೆ 400GB ಡೇಟಾ ಆಫರ್ ಘೋಷಿಸಿದೆ. ಈ ಪ್ಲಾನ್ ಗ್ರಾಹಕರನ್ನು ಮತ್ತೆ ಸೆಳೆಯುವ ಉದ್ದೇಶ ಹೊಂದಿದೆ.

ನವದೆಹಲಿ: ದೇಶದ ಸರ್ಕಾರಿ ಟೆಲಿಕಾಂ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಅದ್ಭುತವಾದ ಆಫರ್ ಬಿಡುಗಡೆಯಾಗಿದೆ. 1 ರೂ.ಗೆ 1GB ಲೆಕ್ಕದಂತೆ 400GB ಡೇಟಾದ ಆಫರ್ ನೀಡಿದೆ. ಬಿಎಸ್‌ಎನ್‌ಎಲ್ ಫ್ಲ್ಯಾಶ್ ಸೇಲ್ ಅಲರ್ಟ್ (BSNL FLASH SALE ALERT) ಅಡಿ ಈ ಪ್ಲಾನ್‌ನ್ನು ತರಲಾಗಿದೆ. ಕಳೆದ ಮೂರು ತಿಂಗಳಿನಿಂದ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಹಿನ್ನೆಲೆ ಈ ಆಫರ್ ಬಿಡುಗಡೆ ಮಾಡಲಾಗಿದೆ. ಗ್ರಾಹಕರ ಸಂಖ್ಯೆ ಕುಸಿತದ ನಂತರ 5G ಸೇವೆಗಳನ್ನು ಮತ್ತು ಮನೆ ಬಾಗಿಲಿಗೆ ಸಿಮ್ ಕಾರ್ಡ್ ವಿತರಣೆಯನ್ನು ಪರಿಚಯಿಸಲು ಬಿಎಸ್‌ಎನ್‌ಎಲ್ ಯೋಚಿಸುತ್ತಿದೆ. ಈಗಾಗಲೇ ನಂಬರ್ ಒನ್ ಮತ್ತು ಸೆಕೆಂಡ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ  (Reliance Jio) ಮತ್ತು ಭಾರ್ತಿ ಏರ್‌ಟೆಲ್ (Bharti Airtel) ಮನೆ ಬಾಗಿಲಿಗೆ ಸಿಮ್ ವಿತರಣೆಯ ಸೇವೆಯನ್ನು ಒದಗಿಸುತ್ತಿವೆ.

ಈ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಟಕ್ಕರ್ ಕೊಡಲು ಮುಂದಾಗಿರುವ ಬಿಎಸ್‌ಎನ್‌ಎಲ್‌, ಇದೀಗ 400GBಯ ಬಿಗ್ ಆಫರ್ ತಂದಿದೆ. ಇದು ಡೇಟಾ ಪ್ಯಾಕ್ ಮಾತ್ರ ಆಗಿದೆ. 400GBಯ ಬಿಗ್ ಆಫರ್ ಬೆಲೆ ಮತ್ತು ವ್ಯಾಲಿಡಿಟಿ ಎಷ್ಟು ಎಂದು ನೋಡೋಣ ಬನ್ನಿ.

ಬಿಎಸ್‌ಎನ್ಎಲ್ ಫ್ಲ್ಯಾಶ್ ಅಲರ್ಟ್ ಪ್ಲಾನ್

ಬೆಲೆ: 400 ರೂಪಾಯಿ

ವ್ಯಾಲಿಡಿಟಿ: 40 ದಿನ

ಡೇಟಾ: 400GB

ಆಫರ್ ವ್ಯಾಲಿಡಿಟಿ: 28ನೇ ಜೂನ್‌ನಿಂದ 1st ಜುಲೈವರೆಗೆ ಮಾತ್ರ ಇರಲಿದೆ. ಈ ಸಮಯದಲ್ಲಿ ಗ್ರಾಹಕರು ಈ ಆಫರ್‌ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆ

ಟ್ರಾಯ್ ಬಿಡುಗಡೆ ಮಾಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಏಪ್ರಿಲ್‌ನಲ್ಲಿ BSNL 0.2 ಮಿಲಿಯನ್ ಚಂದಾದಾರರ ನಿವ್ವಳ ನಷ್ಟವನ್ನು ದಾಖಲಿಸಿದೆ. ಇನ್ನೂ ಗಮನಾರ್ಹವಾಗಿ, ಅದೇ ಅವಧಿಯಲ್ಲಿ ಸಕ್ರಿಯ ಬಳಕೆದಾರರ ಸಂಖ್ಯೆ 1.8 ಮಿಲಿಯನ್ ಕಡಿಮೆಯಾಗಿದೆ. ಕಳೆದುಕೊಂಡಿರುವ ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್ ಸತತವಾಗಿ ಪ್ರಯತ್ನಿಸುತ್ತಿದೆ.

ಎರಡು ಡೇಟಾ ಆಫರ್

ಬಿಎಸ್‌ಎನ್ಎಲ್ 400GB ಡೇಟಾ ಜೊತೆಗೆ ಇನ್ನು ಎರಡು ಆಫರ್‌ಗಳನ್ನು ನೀಡುತ್ತಿರುತ್ತದೆ. 1 ದಿನ ವ್ಯಾಲಿಡಿಟಿ ಹೊಂದಿರುವ 16 ರೂಪಾಯಿ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ಡೇಟಾ ಲಭ್ಯವಾಗುತ್ತದೆ. ಬಿಎಸ್‌ಎನ್‌ಎಲ್ ಮತ್ತೊಂದು ಡೇಟಾ ಪ್ಲಾನ್ ಹೊಂದಿದೆ. ಇದು 40 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರಿ ಪ್ರತಿದಿನ 2GB ಡೇಟಾ ಸಿಗಲಿದೆ. ಈ ಪ್ಲಾನ್‌ ಆಕ್ಟಿವೇಟ್ ಮಾಡಿಕೊಳ್ಳಲು 198 ರೂಪಾಯಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.

ಬಿಎಸ್‌ಎನ್‌ಎಲ್ ವಾರ್ಷಿಕ ಪ್ಲಾನ್‌ಗಳು ಹೀಗಿವೆ

Rs. 2399 ಪ್ರಿಪೇಯ್ಡ್ ಪ್ಲಾನ್

ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನಿಯಮಿತವಾಗಿ ಕರೆ ಮಾಡುವ ಆಯ್ಕೆಯನ್ನು ನೀಡಲಾಗುತ್ತದೆ. ಈ ಪ್ಯಾಕ್ 395 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.

Rs. 1999 ಪ್ರಿಪೇಯ್ಡ್ ಪ್ಲಾನ್

ಈ ಪ್ಲಾನ್‌ನಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರಿಗೆ ಒಟ್ಟು 600GB ಡೇಟಾ ಸಿಗುತ್ತದೆ. ಇದು 365 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನಿಯಮಿತವಾಗಿ ಕರೆ ಮಾಡಬಹುದು. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.

Rs. 1499 ಪ್ರಿಪೇಯ್ಡ್ ಪ್ಲಾನ್

ಈ ಪ್ರಿಪೇಯ್ಡ್ ಪ್ಲಾನ್ 336 ದಿನದ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಇಂಟರ್‌ನೆಟ್ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ದೇಶದಾದ್ಯಂತ ಅನಿಯಮಿತವಾಗಿ ಕರೆ ಮಾಡಬಹುದು. ಪ್ರತಿದಿನ ಉಚಿತವಾಗಿ 100 ಎಸ್‌ಎಂಎಸ್ ಕಳುಹಿಸಬಹುದು.

 

 

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!