Food
ನೀವು ಸ್ಟ್ರೀಟ್ ಫುಡ್ ಪ್ರಿಯರಾಗಿದ್ದೀರಾ? ಹಾಗಿದ್ರೆ ನಿಮಗಾಗಿ ಈ ಸ್ಪೆಷಲ್ ನ್ಯೂಸ್. ಅದೇನಪ್ಪಾ ಅಂದ್ರೆ ನೀವು ಎಂದೂ ಮಿಸ್ ಮಾಡದೇ ತಿನ್ನಲೇ ಬೇಕಾದಂತಹ 7 ಸ್ಟ್ರೀಟ್ ಫುಡ್ ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಮಹಾರಾಷ್ಟ್ರದ ತಿನಿಸಾಗಿದ್ದರೂ, ಸದ್ಯ ದೇಶಾದ್ಯಂತ ಫೇಮಸ್ ಆಗಿರುವ ಸ್ಟ್ರೀಟ್ ಫುಡ್ ವಡಾ ಪಾವ್. ಡೀಪ್ ಫ್ರೈ ಮಾಡಿದ ಆಲೂಗಡ್ಡೆ ಬೋಂಡಾವನ್ನು ಪಾವ್ ನಡುವೆ ಇಟ್ಟು, ಒಂದು ಮಿರ್ಚಿ ಜೊತೆಗಿಟ್ಟು ತಿನ್ನೋ ರುಚಿನೇ ಬೇರೆ.
ಒಂದಲ್ಲ ಒಂದು ಬಾರಿ ಪಾವ್ ಬಾಜಿ ತಿನ್ನಲೇಬೇಕೆನ್ನುವ ಆಸೆಯಾಗೋದು ಖಂಡಿತಾ. ಯಾಕಂದ್ರೆ ಅದರ ರುಚಿನೇ ಹಾಗಿರುತ್ತೆ. ಅದರಲ್ಲೂ ಸ್ಟ್ರೀಟ್‌ನಲ್ಲಿ ಸಿಗೋ ಆ ಬಾಜಿ ಜೊತೆಗಿನ ಪಾವ್ ರುಚಿ ಯಾವ ರೆಸ್ಟೋರೆಂಟ್‌ನಲ್ಲೂ ಸಿಗಲ್ಲ.
ಈ ಸ್ಟ್ರೀಟ್ ಫುಡ್ ಬಗ್ಗೆ ನೀವು ಕೇಳಿಲ್ಲ ಅನ್ಸತ್ತೆ. ಆದರೆ ಈ ಟೇಸ್ಟಿ ದಹಿ ಬಲ್ಲ ದೆಹಲಿಯ ಸ್ಟ್ರೀಟ್‌ಗಳಲ್ಲಿ ಫೇಮಸ್. ದಾಲ್ ವಡೆಯ ಮೇಲೆ ಕೆಂಪು, ಹಸಿರು ಚಟ್ನಿ ಜೊತೆ ಮೊಸರು ಹಾಕಿ ತಿನ್ನೋಕೆ ಚೆನ್ನಾಗಿರುತ್ತೆ.
ಗೋಲ್ ಗಪ್ಪಾ, ಪಾನೀ ಪುರಿ, ಗುಪ್ ಚುಪ್ ಏನೇನೋ ಹೆಸರಲ್ಲಿ ಜನಪ್ರಿಯತೆ ಪಡೆದಿರೋ ಈ ತಿಂಡಿಯನ್ನು ಸ್ಟ್ರೀಟ್ ಫುಡ್‌ಗಳ ಕಿಂಗ್ ಎಂದ್ರೆ ತಪ್ಪಾಗಲ್ಲ. ಹೆಸರು ಹೇಳೋವಾಗ್ಲೆ ಬಾಯಲ್ಲಿ ನೀರು ಬರುತ್ತೆ ಅಲ್ವಾ?
ಆಲೂಗಡ್ಡೆ, ಬಟಾಣಿ ಕಾಳು, ಜೊತೆಗೆ ಒಂದಿಷ್ಟು ಮಸಾಲೆ ಬೆರೆಸಿ ಗರಂ ಗರಂ ಆಗಿ ಮಾಡುವಂತಹ ಆಲೂ ಟಿಕ್ಕಿ ಒಂದು ತುಂಡು ತಿಂದ್ರೆ ಮತ್ತೆ ಮತ್ತೆ ಬಾಯಿ ಚಪ್ಪರಿಸಿ ತಿನ್ನೋ ಹಾಗೆ ಮಾಡುತ್ತೆ. ಅಷ್ಟೊಂದು ಟೇಸ್ಟಿಯಾಗಿರುತ್ತೆ ಇದು.
ನಮ್ ಕಡೆ ಅಷ್ಟೊಂದು ಫೇಮಸ್ ಅಲ್ಲ, ಆದ್ರೆ ನೀವು ಹೊರಗಡೆ ಹೋದಾಗ ಇದನ್ನ ತಿನ್ನಲೇಬೇಕು. ಗುಜರಾತ್ ಮೂಲದ ಈ ಸ್ಟ್ರೀಟ್ ಫುಡ್ ಸೇವ್ ಬೆರೆಸಿದ ಸ್ಪೈಸಿ ಮಸಾಲೆಯನ್ನು ಪಾವ್ ಮಧ್ಯದಲ್ಲಿಟ್ಟು ನೀಡುತ್ತಾರೆ.
ಸ್ಟ್ರೀಟ್ ಫುಡ್ ಗಳ ಹೆಸರು ಹೇಳುತ್ತಾ ಹೋದ್ರೆ ಅದ್ರಲ್ಲಿ ಪನೀರ್ ಟಿಕ್ಕಾವನ್ನು ಮರೆಯೋ ಹಾಗಿಲ್ಲ. ತಂದೂರ್ ನಲ್ಲಿ ಗ್ರಿಲ್ ಮಾಡಿ, ಮೇಲೆ ಸ್ಪೈಸಸ್ ಹಾಕಿ ನೀಡುವಂತಹ ಪನೀರ್ ಟಿಕ್ಕಾ ನೀರೂರಿಸುತ್ತೆ.