Brent Crude Futures: ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗೋ ಸಾದ್ಯತೆ

By Kannadaprabha NewsFirst Published Jan 28, 2022, 5:30 AM IST
Highlights

* ಬ್ಯಾರಲ್‌ಗೆ 90 ಡಾಲರ್‌
* ಮತ್ತೆ ತೈಲ ಬೆಲೆ ಏರಿಕೆ ಆತಂಕ
* 2014ರ ಬಳಿಕ ಕಚ್ಚಾ ತೈಲದ ಗರಿಷ್ಠ ದರ

ನವದೆಹಲಿ (ಜ. 28): ಜಾಗತಿಕ ಮಟ್ಟದಲ್ಲಿನ ಕೆಲ ಬೆಳವಣಿಗೆಗಳ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾತೈಲದ (Brent Crude) ಬೆಲೆ ಪ್ರತಿ ಬ್ಯಾರಲ್‌ಗೆ 6,760(90 ಡಾಲರ್‌) ರು.ಗೆ ತಲುಪಿದೆ. ಇದು 2014ರ ಬಳಿಕ ಕಚ್ಚಾತೈಲದ ಬೆಲೆ ಗರಿಷ್ಠ ದರ. ಹೀಗಾಗಿ ಮತ್ತೊಮ್ಮೆ ವಿವಿಧ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಭಾರತದಲ್ಲಿ ಪೆಟ್ರೋಲ್‌ ದರ 110ರ ಗಡಿ ಮತ್ತು ಡೀಸೆಲ್‌ ದರ 100ರ ಗಡಿ ದಾಟಿದೆ. ಆದರೆ 2021ರ ನವೆಂಬರ್‌ ಬಳಿಕ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯ ಪಂಚ ರಾಜ್ಯ ಚುನಾವಣೆ ನಡೆಯುತ್ತಿರುವ ಕಾರಣ ಅದು ಮುಗಿಯುವವರೆಗೂ ದರ ಏರಿಕೆ ಸಾಧ್ಯತೆ ಕಡಿಮೆ. ಬಳಿಕವೂ ಕಚ್ಚಾತೈಲ ಬೆಲೆ ಹೆಚ್ಚೇ ಇದ್ದರೆ, ದೇಶದಲ್ಲೂ ದರ ಏರಿಕೆ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭೆಗೆ 2018ರಲ್ಲಿ ಚುನಾವಣೆ ನಡೆದಿದ್ದ ವೇಳೆ 19 ದಿನಗಳ ಕಾಲ ಪಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ 5 ಡಾಲರ್‌ ಏರಿಕೆಯಾಗಿದ್ದರೂ ದೇಶದಲ್ಲಿ ದರ ಏರಿಕೆ ನಡೆದಿರಲಿಲ್ಲ. ಆದರೆ, ಚುನಾವಣೆ ಮುಗಿದು ಫಲಿತಾಂಶ ಹೊರರಬಿದ್ದ ಬಳಿಕ, ಅಂದರೆ ಮೇ 14 ರಿಂದ ಸತತ 16 ದಿನಗಳ ಕಾಲ ದರ ಏರಿಕೆ ನಡೆಯುವ ಮೂಲಕ ತೈಲ ಕಂಪನಿಗಳ ಮೇಲಿದ್ದ ಹೊರೆಯನ್ನು ಜನರಿಗೆ ದಾಟಿಸುವಲ್ಲಿ ಯಶಸ್ವಿಯಾಗಿತ್ತು. ಆ ಸಮಯದಲ್ಲಿ ಪೆಟ್ರೋಲ್ ಬೆಲೆಯಲ್ಲಿ 3.8 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 3.38 ರೂಪಾಯಿ ಏರಿಕೆಯಾಗಿತ್ತು.

ಇದೇ ರೀತಿ 2017ರ ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೂ 14 ದಿನ ದರ ಏರಿಕೆ ಸ್ಥಗಿತಗೊಂಡಿತ್ತು. ಇದೇ ರೀತಿ 2017ರ ಜನವರಿ 16 ರಿಂದ ಏಪ್ರಿಲ್‌ 1ರ ನಡುವಿನ ಅವಧಿಯಲ್ಲಿ ಪಂಜಾಬ್‌, ಗೋವಾ, ಉತ್ತರಾಖಂಡ್‌, ಉತ್ತರ ಪ್ರದೇಶ, ಮಣಿಪುರ ಚುನಾವಣೆಗಳಿದ್ದಾಗ ತೈಲ ಕಂಪನಿಗಳು ದರ ಏರಿಕೆಯನ್ನು ತಡೆ ಹಿಡಿದಿದ್ದವು.
ಏರಿಕೆ ಆಗುತ್ತಿರುವ ಕಚ್ಚಾ ತೈಲ ಬೆಲೆಗಳನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ತೈಲ ಉತ್ಪಾದಕ ರಾಷ್ಟ್ರಗಳನ್ನು ಭಾರತ ರಾಜತಾಂತ್ರಿಕ ಒಪ್ಪಂದದ ನಿಟ್ಟಿನಲ್ಲಿ ಕೇಳಿಕೊಂಡಿದೆ. ಕಚ್ಚಾ ತೈಲಗಳ ಮಾರ್ಕೆಟ್ ಗೆ ಮೂರನೇ ಎರಡರಷ್ಟು ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬ್ಯಾರಲ್ ಗೆ 90 ಡಾಲರ್ ಗಿಂತ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತ ಕೂಡ ಇದರ ಪರಿಣಾಮ ಎದುರಿಸಲು ಸಿದ್ಧವಾಗಬೇಕಿದೆ.

Brand Finance List: ಜಗತ್ತಿನ ನಂ.1 ಸಿಇಒ ಸತ್ಯ ನಾದೆಳ್ಲಾ; ಎನ್. ಚಂದ್ರಶೇಖರ್, ಆನಂದ್ ಮಹೀಂದ್ರಾ, ಮುಖೇಶ್ ಅಂಬಾನಿಗೂ ಸ್ಥಾನ
ಈ ವಾರದ ಆರಂಭದಲ್ಲಿ, ಪೆಟ್ರೋಲಿಯಂ ಸಚಿವ ಹರ್ದೀಪ್ ಪುರಿ (Petroleum Minister Hardeep Puri) ಅವರು ತೈಲ ಶ್ರೀಮಂತ ದೇಶವಾಗಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನ (United Arab Emirates) ರಾಷ್ಟ್ರೀಯ ತೈಲ ಕಂಪನಿ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ (ADNOC) ವ್ಯವಸ್ಥಾಪಕ ನಿರ್ದೇಶಕ ಮತ್ತು ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸುಲ್ತಾನ್ ಅಲ್ ಜಾಬರ್ (Sultan Al Jaber)ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದರು. ಯುಎಇ ಜೊತೆ ದ್ವಿಪಕ್ಷೀಯ ಇಂಧನ ಪಾಲುದಾರಿಕೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ ಎಂದು ಪುರಿ ಟ್ವೀಟ್‌ನಲ್ಲಿ ತಿಳಿಸಿದ್ದರು. ಇದೇ ವೇಳೆ ಯುಎಇ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಭಾರತೀಯರು ಪ್ರಾಣ ಕಳೆದುಕೊಂಡಿರುವುದನ್ನು ಅವರು ಖಂಡಿಸಿದರು.

Weapons Home Delivery: ಪಾಕಿಸ್ತಾನದಲ್ಲಿ ಪಿಝ್ಝಾ ರೀತಿ ಎಕೆ 47 ಬಂದೂಕು ಹೋಂ ಡೆಲಿವರಿ!
ಕಾರಣ ಏನು?:
ಇತ್ತೀಚೆಗೆ ಅರಬ್‌ ಸಂಯುಕ್ತ ಸಂಸ್ಥಾನದ ಮೇಲಿನ ಯೆಮೆನ್‌ ಬಂಡುಕೋರರ ದಾಳಿ, ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ಜಮಾವಣೆ ಮಾಡಿರುವುದು ಈ ಎರಡು ದೇಶಗಳ ಮಧ್ಯೆ ಶೀತಲ ಸಮರದ ಸುಳಿವು ನೀಡಿದೆ. ಇದರಿಂದ ಕಚ್ಚಾತೈಲದ ಪೂರೈಕೆಯಲ್ಲಿ ವ್ಯತ್ಯವಾಗುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಕಚ್ಚಾತೈಲದ ಬೆಲೆ ಭಾರೀ ಏರಿಕೆಯಾಗಿದೆ. ಈ ತಿಂಗಳ ಆರಂಭದಲ್ಲಿ, ಗೋಲ್ಡ್‌ಮನ್ ಸ್ಯಾಚ್ಸ್ ಬ್ರೆಂಟ್ ಮೂರನೇ ತ್ರೈಮಾಸಿಕದ ವೇಳೆಗೆ ಪ್ರತಿ ಬ್ಯಾರೆಲ್‌ಗೆ $100 ತಲುಪಬಹುದು ಎಂದು ಅಂದಾಜು ಮಾಡಿತ್ತು. ಇನ್ನೊಂದೆಡೆ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು OPEC+ ಎಂದು ಕರೆಯಲ್ಪಡುವ ಮಿತ್ರರಾಷ್ಟ್ರಗಳು ಮತ್ತೊಂದು ಉತ್ಪಾದನೆಯ ಹೆಚ್ಚಳವನ್ನು ಪರಿಗಣಿಸಲು ಫೆಬ್ರವರಿ 2 ರಂದು ಸಭೆ ಸೇರಲಿವೆ. 

click me!