ಸ್ವಿಸ್ ಬ್ಯಾಂಕ್‌ನ ಕಪ್ಪು ಹಣ ಖಾತೆದಾರರ ವಿವರ ಕೇಂದ್ರ ಸರ್ಕಾರಕ್ಕೆ ಲಭ್ಯ, ಹಲವರಿಗೆ ಶುರುವಾಗಿದೆ ನಡುಕ!

By Suvarna News  |  First Published Oct 10, 2022, 7:06 PM IST

ಪ್ರಧಾನಿ ಮೋದಿ ಸರ್ಕಾರ ನೀಡಿರುವ ವಾಗ್ದಾನಗಳಲ್ಲಿ ಕಪ್ಪು ಹಣ ಭಾರತಕ್ಕೆ ತರುವುದು ಒಂದಾಗಿದೆ. ಈ ಕುರಿತು ಸಾಕಷ್ಟು ಟೀಕೆಗಳನ್ನು ಕೇಂದ್ರ ಎದುರಿಸಿದೆ. ಆದರೆ ಕೊಂಚ ನಿಧಾನವಾದರೂ ಇದೀಗ ಭ್ರಷ್ಟರ ಎದೆಯಲ್ಲಿ ನಡುಕು ಶುರುವಾಗಿದೆ. ಕಾರಣ ಸ್ವಿಸ್ ಬ್ಯಾಂಕ್‌ನಲ್ಲಿ ಕಪ್ಪು ಹಣ ಇಟ್ಟ ಭಾರತೀಯ ಖಾತೆದಾರರ ವಿವರನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ. 


ನವದೆಹಲಿ(ಅ.10): ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರದ ಕಾರ್ಯಾಚರಣೆ ಸದ್ದಿಲ್ಲದೆ ನಡಯುತ್ತಿದೆ. ಕೊಂಚ ನಿಧಾನವಾದರೂ ಭ್ರಷ್ಟರ ಎದೆಯಲ್ಲಿ ಇದೀಗ ನಡುಕ ಶುರುವಾಗಿದೆ. ಕಾರಣ, ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇಟ್ಟಿರುವ ಕಪ್ಪು ಹಣದ ಮಾಹಿತಿ ಹಾಗೂ ಖಾತೆದಾರರ ನಾಲ್ಕನೇ ಪಟ್ಟಿ ಕೇಂದ್ರ ಸರ್ಕಾರ ಕೈಸೇರಿದೆ. ವೈಯುಕ್ತಿಕ ವ್ಯಕ್ತಿಗಳ ಖಾತೆ, ಕಾರ್ಪೋರೇಟ್, ಟ್ರಸ್ಟ್ ಖಾತೆ ಸೇರಿದಂತೆ 100ಕ್ಕೂ ಹೆಚ್ಚು ಖಾತೆಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಪಡೆದುಕೊಂಡಿದೆ.  ವಾರ್ಷಿಕ ಮಾಹಿತಿ ವಿನಿಮಿಯ ನೀತಿಯಡಿಯಲ್ಲಿ ಸ್ವಿಸ್ ಬ್ಯಾಂಕ್ 101 ದೇಶಗಳ 34 ಲಕ್ಷ ಖಾತೆಗಳ ಮಾಹಿತಿಯನ್ನು ಆಯಾ ದೇಶಕ್ಕೆ ನೀಡಿದೆ. 

ಸ್ವಿಸ್ ಬ್ಯಾಂಕ್ ನೀಡಿರುವ ಖಾತೆದಾರರ ಮಾಹಿತಿಯನ್ನು ಕೇಂದ್ರ ಸರ್ಕಾರ ಗೌಪ್ಯವಾಗಿಟ್ಟಿದೆ. ಮುಂದಿನ ತನಿಖೆಗಳ ಮೇಲೆ ಪರಿಣಾಮ ಬೀರುವ ಕಾರಣ ಮಾಹಿತಿ ಬಹಿರಂಗ ಪಡಿಸಿಲ್ಲ. ತೆರಿಗೆ ವಂಚನೆ, ಮನಿ ಲಾಂಡರಿಂಗ್, ಭಯೋತ್ಪಾದನೆ ಸೇರಿದಂತೆ ಹಲವು ತನಿಖೆಯಲ್ಲಿ ಈ ಮಾಹಿತಿಗಳು ಬಳಕೆಯಾಗಲಿದೆ. ಈ ಮೂಲಕ ಪ್ರತಿಯೊಬ್ಬ ಖಾತೆದಾರರ ವಿವರವನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಕೇಂದ್ರ ಹೇಳಿದೆ. 

Tap to resize

Latest Videos

 

ಸ್ವಿಸ್‌ ಬ್ಯಾಂಕಿಂದ ಬಂತು 3ನೇ ಕಂತಿನ ಕಾಳಧನಿಕರ ಮಾಹಿತಿ!

5ನೇ ಹಂತದ ಮಾಹಿತಿಗಳನ್ನು ಸೆಪ್ಟೆಂಬರ್ 2023ರಲ್ಲಿ ಸ್ವಿಸ್ ಬ್ಯಾಂಕ್ ಭಾರತ ಸೇರಿದಂತೆ ಹಲವು ದೇಶಗಳಿಗೆ ನೀಡಲಿದೆ. ಕೇಂದ್ರ ಸರ್ಕಾರ ಇದೀಗ ಸದ್ದಿಲ್ಲದೆ ತನಿಖೆ ಚುರುಕುಗೊಳಿಸಿದೆ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ಭಾರತಕ್ಕೆ ತರಲು ಇರುವ ಕಾನೂನು ಪ್ರಕ್ರಿಯೆ ಹಾಗೂ ಇತರ ಸಂವಿಧಾನಿಕ ತೊಡಕುಗಳನ್ನು ನಿವಾರಿಸುತ್ತಿದೆ. 

ಸ್ವಿಸ್‌ಬ್ಯಾಂಕಲ್ಲಿ ಭಾರತೀಯರ 30500 ಕೋಟಿ ರು. ಹಣ!
ಗೌಪ್ಯತೆಗೆ ಹೆಸರಾಗಿರುವ ಭಾರತದಲ್ಲಿನ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌ಗಳು ಮತ್ತು ಸ್ವಿಜರ್ಲೆಂಡಿನಲ್ಲಿರುವ ಬ್ಯಾಂಕ್‌ಗಳಲ್ಲಿ ಭಾರತೀಯರು ಮತ್ತು ಭಾರತೀಯ ಮೂಲದ ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ 30500 ಕೋಟಿ ರು.ಗೆ ಏರಿಕೆಯಾಗಿದೆ. ಇದು ಕಳೆದ 14 ವರ್ಷಗಳಲ್ಲೇ ಗರಿಷ್ಠ. ಎಂದು ಸ್ವಿಸ್‌ ಸೆಂಟ್ರಲ್‌ ಬ್ಯಾಂಕಿನ ವಾರ್ಷಿಕ ವರದಿಯು ತಿಳಿಸಿದೆ. 2020ರಲ್ಲಿ ಭಾರತೀಯರ ನಿಧಿಯ ಮೌಲ್ಯ 20,700 ಕೋಟಿ ರು.ಗಳಷ್ಟಿತ್ತು. 2006ರಲ್ಲಿ ಭಾರತೀಯರ ಸ್ವಿಸ್‌ ಖಾತೆಗಳಲ್ಲಿ 50,000 ಕೋಟಿ ರು.ಗಳಷ್ಟುಹಣ ಠೇವಣಿಗಳ ರೂಪದಲ್ಲಿತ್ತು. ನಂತರ ಇದರ ಪ್ರಮಾಣದಲ್ಲಿ ಸತತ ಇಳಿಕೆ ಕಂಡುಬಂದಿತ್ತು.

 

ಈ ಬಾರಿ ಸ್ವಿಸ್‌ ಬ್ಯಾಂಕಿಂದ ರಿಯಲ್‌ ಎಸ್ಟೇಟ್‌ ಮಾಹಿತಿ!

ಇದೇ ವೇಳೆ ಭಾರತೀಯರ ಉಳಿತಾಯ ಖಾತೆಯ ಠೇವಣಿ 4,800 ಕೋಟಿ ರು.ಗಳಿಗೆ ಏರಿಕೆಯಾಗಿದೆ. ಇದು ಕಳೆದ 7 ವರ್ಷಗಳ ಗರಿಷ್ಠ. 15.61 ಸಾವಿರ ಕೋಟಿ ರು.ಗಳಷ್ಟುಮೌಲ್ಯದ ಬಾಂಡ್‌, ಭದ್ರತೆಗಳನ್ನು ಭಾರತೀಯರ ಗ್ರಾಹಕರ ಹೆಸರಿನಲ್ಲಿ ಸ್ವಿಸ್‌ ಬ್ಯಾಂಕಿನಲ್ಲಿಡಲಾಗಿದೆ ಎಂದು ವರದಿ ತಿಳಿಸಿದೆ.

‘ಈ ಮೌಲ್ಯವನ್ನು ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿಟ್ಟಕಪ್ಪುಹಣದ ಪ್ರಮಾಣ ಎಂಬಂತೆ ಬಿಂಬಿಸಬಾರದು. ಜೊತೆಗೆ ಅನಿವಾಸಿ ಭಾರತೀಯರು ಹಾಗೂ ಇನ್ನೊಂದು ದೇಶದ ನಿವಾಸಿಯ ಹೆಸರಿನಲ್ಲಿ ಭಾರತೀಯರು ಠೇವಣಿ ಮಾಡಿದ ಹಣವನ್ನು ಇದು ಒಳಗೊಂಡಿಲ್ಲ. ಭಾರತದಲ್ಲಿರುವ ಸ್ವಿಸ್‌ ಬ್ಯಾಂಕ್‌ ಶಾಖೆ ಹಾಗೂ ಭಾರತೀಯ ಬ್ಯಾಂಕ್‌ ಹಾಗೂ ಸ್ವಿಸ್‌ ಬ್ಯಾಂಕ್‌ ನಡುವಿನ ವ್ಯವಹಾರ ಹೆಚ್ಚಳವಾದ ಕಾರಣದಿಂದ ಠೇವಣಿಯಲ್ಲಿ ಏರಿಕೆಯಾಗಿದೆ ಎಂದು ವರದಿ ಹೇಳಿದೆ. 

click me!