ಆನ್ಲೈನ್ ನಲ್ಲಿ ಪ್ಯಾಂಟಿ ಖರೀದಿಸುವ ಮುನ್ನ..

By Suvarna News  |  First Published Oct 10, 2022, 5:16 PM IST

ಆನ್ಲೈನ್ ಶಾಪಿಂಗ್ ಗೆ ಈಗ ಭರ್ಜರಿ ಬೇಡಿಕೆಯಿದೆ. ವಿಶೇಷವಾಗಿ ಮಹಿಳೆಯರು ಆನ್ಲೈನ್ ಖರೀದಿ ಹೆಚ್ಚು ಮಾಡ್ತಿದ್ದಾರೆ. ಒಳ ಉಡುಪುಗಳನ್ನು ಕೂಡ ಆನ್ಲೈನ್ ನಲ್ಲಿ ಖರೀದಿ ಮಾಡ್ತಾರೆ. ಸೈಜ್, ಬಟ್ಟೆ ಬಗ್ಗೆ ಆನ್ಲೈನ್ ನಲ್ಲಿ ಸರಿಯಾಗಿ ತಿಳಿಯೋದಿಲ್ಲ. ಆ ಸಂದರ್ಭದಲ್ಲಿ ಮಹಿಳೆಯರು ಕೆಲ ಎಚ್ಚರಿಕೆವಹಿಸಬೇಕು, 
 


ಒಂದಾನೊಂದು ಕಾಲದಲ್ಲಿ ಜನರು ಮಾರುಕಟ್ಟೆಗೆ ಹೋಗಿ ಎಲ್ಲ ವಸ್ತುವನ್ನು ಖರೀದಿ ಮಾಡ್ತಾ ಇದ್ದರು. ವಸ್ತುವನ್ನು ಕೈನಲ್ಲಿ ಸ್ಪರ್ಶಿಸಿ, ಅದ್ರ ಕ್ವಾಲಿಟಿ ಪರೀಕ್ಷೆ ಮಾಡಿ, ಅದ್ರ ಬೆಲೆ ಚೌಕಾಸಿ ಮಾಡಿ ನಂತ್ರ ಖರೀದಿ ಮಾಡಲಾಗ್ತಾಯಿತ್ತು. ಅದಕ್ಕೆ ಸಾಕಷ್ಟು ಸಮಯ ಹಾಳಾಗ್ತಾಯಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಖರೀದಿ ಹೆಚ್ಚಾಗಿದೆ. ಜನರಿಗೆ ಆನ್ಲೈನ್ ಖರೀದಿಯಿಂದ ಅನೇಕ ಲಾಭವಿದೆ. ಒಂದು ಕಡೆಯಿಂದ ಇನ್ನೊಂದು ಕಡೆ ಓಡಾಡಬೇಕಾಗಿಲ್ಲ, ವಸ್ತುಗಳ ಖರೀದಿಗೆ ಸಮಯ ಹೊಂದಿಸಬೇಕಾಗಿಲ್ಲ ಹಾಗೆ ನೂಕುನುಗ್ಗಲಿನ ಸಮಸ್ಯೆಯಿಲ್ಲ. ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ವಸ್ತುಗಳನ್ನು ಖರೀದಿ ಮಾಡಬಹುದು. ಇ – ವೆಬ್ಸೈಟ್ ಗಳಲ್ಲಿ ಈಗ ಸಾಕಷ್ಟು ಆಫರ್ ಕೂಡ ಸಿಗುತ್ತದೆ. ಮಹಿಳೆಯರು ಪ್ಯಾಂಟಿ ಖರೀದಿ ಮಾಡುವಾಗ ಮುಜುಗರಕ್ಕೊಳಗಾಗೋದು ಸಹಜ. ಅಂಗಡಿಗೆ ಹೋಗಿ ಪ್ಯಾಂಟಿ ತೋರಿಸಿ ಎನ್ನಲು ಅನೇಕ ಮಹಿಳೆಯರು ನಾಚಿಕೊಳ್ತಾರೆ. ಹಾಗೆ ಪ್ಯಾಂಟಿ ಖರೀದಿಯನ್ನು ಬೇರೆಯವರು ನೋಡಿದ್ರೆ ಎಂಬ ನಾಚಿಕೆ ಅವರಲ್ಲಿರುತ್ತದೆ. ಕದ್ದು ಮುಚ್ಚಿ ಪ್ಯಾಂಟಿ ಖರೀದಿ ಮಾಡ್ತಿದ್ದ ಮಹಿಳೆಯರಿಗೆ ಆನ್ಲೈನ್ ಶಾಪಿಂಗ್ ಕೆಲಸ ಸುಲಭಗೊಳಿಸಿದೆ. ಆರಾಮವಾಗಿ ಬೆಲೆ, ಬಣ್ಣ ಎಲ್ಲವನ್ನೂ ಚೆಕ್ ಮಾಡಿ ಖರೀದಿ ಮಾಡಬಹುದು. ಹಾಗೆಯೇ ಪ್ಯಾಂಟಿ ಖರೀದಿಸಿದ ವಿಷ್ಯ ಮತ್ತ್ಯಾರಿಗೂ ತಿಳಿಯೋದಿಲ್ಲ. ನೀವೂ ಆನ್ಲೈನ್ ನಲ್ಲಿ ಪ್ಯಾಂಟಿ ಖರೀದಿ ಮಾಡ್ತಿದ್ದರೆ ಕೆಲ ಸಂಗತಿ ನೆನಪಿಡಿ.

ಆನ್ಲೈನ್ (Online) ನಲ್ಲಿ ಪ್ಯಾಂಟಿ (Panty) ಖರೀದಿ ಮಾಡುವ ಮೊದಲು ನೀವು ನಿಮ್ಮ ದೇಹದ ಆಕಾರದ ಬಗ್ಗೆ ಗಮನ ನೀಡಿ. ನಿಮ್ಮ ದೇಹದ ಆಕಾರಕ್ಕೆ ತಕ್ಕಂತೆ ಪ್ಯಾಂಟಿ ಖರೀದಿ ಮಾಡಿ. ನಿಮ್ಮ ಹೊಟ್ಟೆ ದೊಡ್ಡದಾಗಿದ್ದರೆ ನೀವು ಹೈ ವೆಸ್ಟ್ ಪ್ಯಾಂಟಿ ಖರೀದಿ ಮಾಡಬೇಕು.

Latest Videos

undefined

ನೀವು ಯಾವ ಡ್ರೆಸ್ (Dress) ಧರಿಸುತ್ತಿದ್ದೀರಿ ಎಂಬುದನ್ನು ಕೂಡ ನೀವು ಗಮನಿಸಬೇಕು. ಎಲ್ಲ ಡ್ರೆಸ್ ಗೆ ಒಂದೇ ರೀತಿಯ ಪ್ಯಾಂಟಿ ಸರಿ ಹೊಂದುವುದಿಲ್ಲ. ಪ್ಯಾಂಟಿಯ ದಪ್ಪ ಪಟ್ಟಿ, ಡ್ರೆಸ್ ನಲ್ಲಿ ಎದ್ದು ಕಾಣುವ ಸಾಧ್ಯತೆಯಿರುತ್ತದೆ. ಅದು ಮುಜಗರಕ್ಕೀಡುಮಾಡಬಹುದು. ಹಾಗಾಗಿ ಡ್ರೆಸ್ ಗೆ ತಕ್ಕ ಪ್ಯಾಂಟಿ ಖರೀದಿ ಮಾಡಿ. 

Smart shopping tips : ಆನ್ ಲೈನ್ ಶಾಪಿಂಗ್ ಮಾಡ್ತೀರಾ? ಹಾಗಿದ್ರೆ ಈ ಟ್ರಿಕ್ಸ್ ನೆನಪಿಡಿ

ಪ್ಯಾಂಟಿ ಖರೀದಿ ಮಾಡುವ ಮೊದಲು ಗಾತ್ರದ ಬಗ್ಗೆ ಗಮನವಿರಲಿ. ನಿಮ್ಮ ಸೊಂಟದ ಗಾತ್ರಕ್ಕೆ ತಕ್ಕಂತೆ ನೀವು ಪ್ಯಾಂಟಿ ಖರೀದಿಸಬೇಕು. ಇಲ್ಲವೆಂದ್ರೆ ದೊಡ್ಡ ಪ್ಯಾಂಟಿ ಅಥವಾ ಚಿಕ್ಕ ಪ್ಯಾಂಟಿ ಖರೀದಿಸಬೇಕಾಗುತ್ತದೆ. ಅನೇಕ ವೆಬ್ಸೈಟ್ ನಲ್ಲಿ ಪ್ಯಾಂಟಿಯನ್ನು ವಾಪಸ್ ಪಡೆಯುವುದಿಲ್ಲ. ಹಾಗಾಗಿ ನೀವು ಖರೀದಿಸಿದ ಪ್ಯಾಂಟಿ ವೇಸ್ಟ್ ಆಗುತ್ತದೆ.

ಆನ್‌ಲೈನ್‌ನಲ್ಲಿ ಪ್ಯಾಂಟಿಗಾಗಿ ಶಾಪಿಂಗ್ ಮಾಡುತ್ತಿದ್ದರೆ, ಪ್ರತಿಯೊಂದು ಬ್ರ್ಯಾಂಡ್ ವಿಭಿನ್ನ ಗಾತ್ರಗಳನ್ನು ಹೊಂದಿದೆ ಎಂಬುದನ್ನು ತಿಳಿದಿರಿ. ಒಂದು ಬ್ರ್ಯಾಂಡ್ ಗಾತ್ರದ ಪ್ರಕಾರ ನೀವು ಇನ್ನೊಂದು ಬ್ರ್ಯಾಂಡ್ ಪ್ಯಾಂಟಿ  ಖರೀದಿಸಲು ಸಾಧ್ಯವಿಲ್ಲ. ಪ್ಯಾಂಟಿ ಕೆಳಗೆ ನೀಡುವ ಗಾತ್ರವನ್ನು ಪರೀಕ್ಷಿಸಿ ಖರೀದಿ ಮಾಡಿ. 

ಪ್ಯಾಂಟಿ ಖರೀದಿ ಮಾಡುವ ವೇಳೆ ಬಣ್ಣದ ಬಗ್ಗೆಯೂ ಗಮನ ನೀಡಿ. ಬಿಳಿ ಬಣ್ಣದ ಲೆಗ್ಗಿನ್ಸ್ ಧರಿಸುವ ವೇಳೆ ನಿಮ್ಮ ಪ್ಯಾಂಟಿ ಬಣ್ಣ ಎದ್ದು ಕಾಣುವ ಸಾಧ್ಯತೆಯಿರುತ್ತದೆ. ಹಾಗಾಗಿ ಅದನ್ನು ಪರೀಕ್ಷಿಸಿ ನಂತ್ರ ಖರೀದಿ ಮಾಡಿ. 

ಪ್ಯಾಂಟಿ ಖರೀದಿ ಮಾಡುವ ವೇಳೆ ರಿವ್ಯೂ ಪರಿಶೀಲನೆ ಮಾಡಿ. ಈಗಾಗಲೇ ಖರೀದಿ ಮಾಡಿದವರು ಬ್ರ್ಯಾಂಡ್ ಬಗ್ಗೆ ಮಾಹಿತಿ ನೀಡಿರುತ್ತಾರೆ. 

Personal Finance : ಆನ್ಲೈನ್ ಶಾಪಿಂಗ್ ವೇಳೆ ಅಸಲಿ, ನಕಲಿ ಹೀಗೆ ಪತ್ತೆ ಮಾಡಿ

ಹಾಗೆ ಆನ್ಲೈನ್ ನಲ್ಲಿ ಪ್ಯಾಂಟಿ ಖರೀದಿ ಮಾಡಲು ಬಯಸಿದ್ರೆ ಉತ್ತಮ ಬ್ರ್ಯಾಂಡ್ ಪ್ಯಾಂಟಿ ಖರೀದಿ ಮಾಡಿ. ಅತಿ ಟೈಟ್ ಪ್ಯಾಂಟಿ ಧರಿಸಬೇಡಿ. ಪ್ಯಾಂಟಿಯ ಫ್ಯಾಬ್ರಿಕ್ ಸಹ ಗಮನಿಸಿ. ಕೆಟ್ಟ ಗುಣಮಟ್ಟದ ಬಟ್ಟೆ ಸೋಂಕಿಗೆ ಕಾರಣವಾಗಬಹುದು. ಅಗ್ಗವಿದೆ ಎನ್ನುವ ಕಾರಣಕ್ಕೆ ಪ್ಯಾಂಟಿ ಖರೀದಿ ಮಾಡಬೇಡಿ. 

click me!