
ನವದೆಹಲಿ(ಜೂ.4): ಭಾರತೀಯ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಅತೀ ದೊಡ್ಡ ಹೆಸರು ಬರ್ಡ್ ಗ್ರೂಪ್. ಈ ಸಂಸ್ಥೆಯ ಮೂಲಕ ಪ್ರವಾಸೋದ್ಯ ಹಾಗೂ ಟ್ರಾವೆಲ್ ಟೆಕ್ ಬ್ರಾಂಡ್‌ನ್ನು ಭಾರತ ಹಾಗೂ ಭಾರತ ಉಪಖಂಡ ತಂದ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಂಕುರ್ ಭಾಟಿಯಾ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಪ್ನಾ ಬುಕ್ ಹೌಸ್ ಸಂಸ್ಥಾಪಕ ಸುರೇಶ್ ಶಾ ಇನ್ನಿಲ್ಲ
48 ವರ್ಷದ ತರುಣ, ಸದಾ ಕ್ರಿಯಾಶೀಲ, ಹೊಸತನ ಹಾಗೂ ಉದ್ಯಮ ಕ್ಷೇತ್ರದಲ್ಲಿ ದಿಗ್ಗಜನಾಗಿದ್ದ ಅಂಕುರ್ ಭಾಟಿಯಾ ನಿಧನ ಭಾರತದ ಉದ್ಯಮಕ್ಷೇತ್ರವನ್ನೇ ಬೆಚ್ಚಿಬೀಳಿಸಿದೆ. ಕೊರೋನಾ ದಿಂದ ಚೇತರಿಸಿಕೊಂಡಿದ್ದ ಅಂಕುರ್ ಭಾಟಿಯಾ ಬೆಳಗಿನ ಜಾವ ಸೈಕಲ್ ಸವಾರಿ ಮಾಡುತ್ತಿದ್ದ ವೇಳೆ ಹೃದಯಾಘದಿಂದ ನಿಧನರಾಗಿದ್ದಾರೆ.
ಕೊರೋನಾದಿಂದ ಟಾಟಾ ಸ್ಟೀಲ್ ಉದ್ಯೋಗಿ ನಿಧನ, 60ನೇ ವಯಸ್ಸಿನವರೆಗೆ ಕುಟುಂಬಕ್ಕೆ ವೇತನ!...
ಅಂಕುರ್ ಭಾಟಿಯಾ ಪತ್ನಿ ಸ್ಮೃತಿ ಭಾಟಿಯಾ, ಇಬ್ಬರು ಮಕ್ಕಳಾದ ಅನರ್ವ್, ಸೈನಾ ಅವರನ್ನು ಅಗಲಿದ್ದಾರೆ. ಅಂಕುರ್ ಭಾಟಯಾ ಇಂಡಿಗೊ ಏರ್‌ಲೈನ್ಸ್, ಐಬಿಐಎಸ್ ಹೋಟೆಲ್ ಮತ್ತು ರೋಸೇಟ್ ಹೋಟೆಲ್‌ನ ಮಾಲೀಕರಾಗಿದ್ದಾರೆ.
ಏರಿಂಡಿಯಾದ 12,000 ಕೋಟಿ ವಿದೇಶಿ ಆಸ್ತಿ ಕೇರ್ನ್ ಪಾಲು ಸಾಧ್ಯತೆ!
ಅಂಕುರ್ ಭಾಟಿಯಾ ಕುಟುಂಬ ಸದಸ್ಯರ ಜೊತೆ ಉತ್ತಮ ಸಂಬಂಧ ಇಲ್ಲ. ಹೀಗಾಗಿ ಅಂಕುರ್ ಭಾಟಿಯಾ ತಾಯಿ ಬರ್ಡ್ ಗ್ರೂಪ್ ಆರಂಭಿಸಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯಮ ಆರಂಭಿಸಿ ಯಶಸ್ವಿಯಾದರು. ಆದರೆ ಅಂಕರು ಭಾಟಿಯಾ ಈ ಉದ್ಯಮಕ್ಕೆ ಹೊಸ ರೂಪ ಹಾಗೂ ಆಧನಿಕತೆ ಸ್ಪರ್ಶ ನೀಡಿ ದೇಶ ವಿದೇಶಗಳಲ್ಲಿ ಅತೀ ದೊಡ್ಡ ಸಂಸ್ಥೆಯಾಗಿ ಕಟ್ಟಿಬೆಳೆಸಿದ್ದಾರೆ.
ಚೀನಾಗೆ ಗುಡ್ ಬೈ ಹೇಳ್ತಿವೆ ಕಂಪನಿಗಳು, ಪಲಾಯನ ತಡೆಯಲು ಡ್ರ್ಯಾಗನ್ ಹರಸಾಹಸ!
ಬರ್ಡ್ ಗ್ರೂಪ್ ಹೊಸ ಕ್ಷೇತ್ರದಲ್ಲೂ ಯಶಸ್ವಿಯಾಗಿದೆ. ಬರ್ಡ್ ಎಲೆಕ್ಟ್ರಿಕಲ್ ಉತ್ಪನ್ನ ದೇಶದ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಶ್ರೇಯಸ್ಸು ಅಂಕುರ್ ಭಾಟಿಯಾಗೆ ಸಲ್ಲಿಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.