
ನ್ಯೂಯಾರ್ಕ್(ಜೂ.23) ಸ್ಪೆಸ್ ಎಕ್ಸ್, ಟ್ವಿಟರ್, ಟೆಸ್ಲಾ ಸೇರಿದಂತೆ ಹಲವು ಅಗ್ರ ಕಂಪನಿಗಳ ಮಾಲೀಕ ಎಲಾನ್ ಮಸ್ಕ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ವಿಶ್ವದ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ 12ನೇ ಮಗುವಿಗೆ ತಂದೆಯಾಗಿದ್ದಾರೆ. ಈ ಕುರಿತು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎಲಾನ್ ಮಸ್ಕ್ 12ನೇ ಮಗುವಿನ ತಾಯಿ ನ್ಯೂರಾಲಿಂಕ್ ಕಂಪನಿ ಮ್ಯಾನೇಜರ್ ಶಿವೊನ್ ಝಿಲಿಸ್ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಎಲಾನ್ ಮಸ್ಕ್ 12ನೇ ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ. ಕಳೆದ 5 ವರ್ಷದಲ್ಲಿ ಎಲಾನ್ ಮಸ್ಕ್ 6 ಬಾರಿ ತಂದೆಯಾಗಿದ್ದರೆ. ಇದರಲ್ಲಿ ಎಲಾನ್ ಮಸ್ಕ್ ಮೂರು ಮಕ್ಕಳು ಕೆನಡಾ ಮೂಲದ ಗಾಯಕಿ ಗ್ರಿಮ್ಸ್ ತಾಯಿಯಾಗಿದ್ದರೆ, ಇನ್ನುಳಿದ ಮೂರು ಮಕ್ಕಳು ಶಿವೊನ್ ಝಿಲಿಸ್ ತಾಯಿಯಾಗಿದ್ದಾರೆ. ಇದೀಗ ಮಸ್ಕ್ ಅಪ್ಪನಾಗಿರುವ ಸಂಭ್ರಮವನ್ನು ಮಸ್ಕ್ ಕುಟುಂಬದ ಆಪ್ತ ಮೂಲಗಳು ಹೇಳಿವೆ.ಆದರೆ ಈ ಕುರಿತು ಮಸ್ಕ್ ಹಾಗೂ ಝಿಲಿಸ್ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು
ಮಗುವಿನ ಹೆಸರು ಸೇರಿದಂತೆ ಇತರ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಇದಕ್ಕೂ ಮೊದಲು ಎಲಾನ್ ಮಸ್ಕ್ ಹಾಗೂ ಶಿವೊನ್ ಝಿಲಿಸ್‌ಗೆ ಅವಳಿ ಜವಳಿ ಮಕ್ಕಳು ಹುಟ್ಟಿದ್ದರು. ಎಲಾನ್ ಮಸ್ಕ್ ಮೊದಲು ಕೆನಡಾ ಬರಹಗಾರ್ತಿ ಜಸ್ಟಿನ್ ವಿಲ್ಸನ್ ಮದುವೆಯಾಗಿದ್ದರು. 2000 ಇಸವಿಯಲ್ಲಿ ಮಸ್ಕ್ ಮದುವೆಯಾಗಿದ್ದರು. 2002ರಲ್ಲಿ ಮಸ್ಕ್‌ಗೆ ಹುಟ್ಟಿದ ಮಗು 10 ವಾರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಬಳಿಕ 2004ರಲ್ಲಿ ಅವಳಿ ಜವಳಿ ಜನನವಾಗಿತ್ತು. 2008ರಲ್ಲಿ ಮಸ್ಕ್ ಹಾಗೂ ವಿಲ್ಸನ್ ವಿಚ್ಚೇದನ ಪಡೆದುಕೊಂಡರು.
2008ರಲ್ಲಿ ಎಲಾನ್ ಮಸ್ಕ್ ಮೊದಲ ಪತ್ನಿಯಿಂದ ದೂರವಾಗುತ್ತಿದ್ದಂತೆ ನಟಿ ತಲುಲಾ ರಿಲೆ ಜೊತೆ ಡೇಟಿಂಗ್‌ನಲ್ಲಿದ್ದರು. 2 ವರ್ಷದ ಬಳಿಕ ಸ್ಕಾಟ್‌ಲೆಂಡ್‌ನಲ್ಲಿ ಮದುವೆಯಾಗಿದ್ದರು. ಒಂದು ಬಾರಿ ಡಿವೋರ್ಸ್ ನೀಡಿ ಮರು ಮದೆಯಾಗಿದ್ದ ಮಸ್ಕ್, 2016ರಲ್ಲಿ ಎರಡನೇ ಬಾರಿಗೆ ಡಿವೋರ್ಸ್ ನೀಡಿದರು. ಇದೇ ವೇಳೆ ಮಸ್ಕ್ ಅಮೆರಿಕ ನಟಿ ಆ್ಯಂಬರ್ ಲೌರ್ ಹರ್ಡ್ ಜೊತೆಗೂ ಡೇಟಿಂಗ್ ನಡೆಸುತ್ತಿದ್ದರು.
2018ರಲ್ಲಿ ಕೆನಡಿಯನ್ ನಟಿ ಗ್ರಿಮ್ಸ್ ಜೊತೆ ಎಲಾನ್ ಮಸ್ಕ್ ಡೇಟಿಂಗ್ ಮಾಹಿತಿ ಹೊರಬಿದ್ದಿತ್ತು. 2020ರಲ್ಲಿ ಈ ಜೋಡಿ ಪೋಷಕರಾಗಿದ್ದರು. 2022ರ ವೇಳೆ ಈ ಸಂಬಂಧದಲ್ಲಿ ಬಿರುಕು ಬಿದ್ದಿತ್ತು. 2023ರಲ್ಲಿ ಇದೋ ಜೋಡಿ 3ನೇ ಮಗುವಿನ ಪೋಷಕರಾಗಿದ್ದರು. ಆದರೆ ಸಂಬಂಧ ಹಳಸಿತ್ತು. 2022ರಲ್ಲಿ ಶಿವೋನ್ ಝಿಲಿಸ್ ಜೊತೆ ಮಸ್ಕ್ ಡೇಟಿಂಗ್ ಆರಂಭಗೊಂಡಿತ್ತು.
ಇವಿಎಂ ಮಿಷನ್ ಮೇಲಿನ ಎಲಾನ್ ಮಸ್ಕ್ ಅನುಮಾನ ಬೆಂಬಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.