ಮನುಷ್ಯನಿಗೆ ನಿದ್ರೆ ಅಂದ್ರೆ ಟೈಮ್ ವೇಸ್ಟ್ ಅಂತ ಯೋಚಿಸುತ್ತಿದ್ದರಂತೆ ಬಿಲ್ ಗೇಟ್ಸ್!

By Suvarna NewsFirst Published Aug 9, 2023, 2:31 PM IST
Highlights

ಬಿಲಿಯನೇರ್ ಬಿಲ್ ಗೇಟ್ಸ್  ಯುವಕರಿಗೆ ಮಾದರಿ. ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಬಿಲ್ ಗೇಟ್ಸ್ ಬಗ್ಗೆ ತಿಳಿಯೋದು ಸಾಕಷ್ಟಿದೆ. ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬಿಲ್ ಗೇಟ್ಸ್ , ತಮ್ಮ 30 -40ರ ವಯಸ್ಸಿನಲ್ಲಿ ನಿದ್ರೆ ಹೇಗಿರುತ್ತಿತ್ತು ಎಂಬುದನ್ನು ಹೇಳಿದ್ದಾರೆ.  
 

ಮೈಕ್ರೋ ಸಾಫ್ಟ್ ಸಹ ಸಂಸ್ಥಾಪಕ, ಪರ್ಸನಲ್ ಕಂಪ್ಯೂಟರ್ ಕ್ರಾಂತಿಯ ವಿಶ್ವಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಯಶಸ್ಸಿನ ಕಥೆ ಕೇಳಲು ಯುವ ಉದ್ಯಮಿಗಳು ಉತ್ಸುಕರಾಗಿರ್ತಾರೆ. ಕೆಲ ದಿನಗಳ ಹಿಂದೆ ಮಾತನಾಡಿದ್ದ ಬಿಲ್ ಗೇಟ್ಸ್, ನಿದ್ರೆಗೆ ಸಂಬಂಧಿಸಿದಂತೆ ಮಹತ್ವದ ವಿಷ್ಯವನ್ನು ಹೇಳಿದ್ದರು. ಮೈಕ್ರೋಸಾಫ್ಟ್ ನ ಪ್ರಮುಖ ವರ್ಷಗಳಲ್ಲಿ ನಿದ್ರೆಯನ್ನು ಕಡಿಮೆ ಮಾಡಿದ್ದೇನೆ ಎಂದು ಬಿಲ್ ಗೇಟ್ಸ್ ಒಪ್ಪಿಕೊಂಡಿದ್ದಾರೆ. ನಿದ್ರೆಯನ್ನು ಸೋಮಾರಿ ಮತ್ತು ಅನಗತ್ಯ  ಎಂದು ನಾನು ನಂಬಿದ್ದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.  
 
ಬಿಲಿಯನೇರ್ (Billionaire) ಸೇಥ್ ರೋಗನ್ ಮತ್ತು ಅವರ ಪತ್ನಿ ಲಾರೆನ್ ಮಿಲ್ಲರ್ ರೋಗನ್ ಅವರೊಂದಿಗೆ  ಬಿಲ್ ಗೇಟ್ಸ್ (Bill Gates) , ಅನ್‌ಕನ್‌ಫ್ಯೂಸ್ ಮಿಯ ಮೊದಲ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದಾರೆ.  ಮೆದುಳಿನ ಆರೋಗ್ಯದ ಬಗ್ಗೆ ಹಾಗೂ ಅಲ್ಝೈಮರ್ಸ್ (Alzheimers) ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದ ಬಿಲ್ ಗೇಟ್ಸ್, ನಿದ್ರೆ ಬಗ್ಗೆ ಮಾತನಾಡಿದರು. ಬಿಲ್ ಗೇಟ್ಸ್ ತಮ್ಮ ಮೂವತ್ತು ಮತ್ತು ನಲವತ್ತರ ವಯಸ್ಸಿನ ನಿದ್ರೆ ಬಗ್ಗೆ ತನ್ನ ಮನಸ್ಸಿನಲ್ಲಿ ಏನು ಓಡ್ತಿತ್ತು, ಏನು ಮಾತನಾಡ್ತಿದ್ದೆವು ಎಂಬುದನ್ನು ಹೇಳಿದ್ದಾರೆ.  ಓಹ್.. ನಾನು ಕೇವಲ ಆರು ಗಂಟೆಗಳ ಕಾಲ ಮಲಗುತ್ತಿದ್ದೆ, ಜನರು ಇದನ್ನು ಇಷ್ಟಪಡುತ್ತಿದ್ದಾರೆ. ಇಲ್ಲ ನಾನು ಐದು ಗಂಟೆ ಮಾತ್ರ ನಿದ್ರೆ ಮಾಡ್ಬೇಕು. ನಾನು ಈ ಸಮಯದಲ್ಲಿ ನಿದ್ರೆ ಮಾಡಲು ಸಾಧ್ಯವೇ ಇಲ್ಲ..  ವಾವ್ ಅವರು ಎಷ್ಟೊಂದು ಒಳ್ಳೆಯವರು, ನಾನು ಇನ್ನಷ್ಟು ಪ್ರಯತ್ನಪಡಬೇಕು ಯಾಕೆಂದ್ರೆ ನಿದ್ರೆ ಸೋಮಾರಿತನ ಮತ್ತು ಅನಗತ್ಯ.. ಹೀಗೆಲ್ಲ ಬಿಲ್ ಗೇಟ್ಸ್ ಆಲೋಚನೆ ಮಾಡ್ತಿದ್ದರಂತೆ. 

Zomato ಮೂಲಕ 60 ರೂ. ಮೌಲ್ಯದ ಫುಡ್‌ ಆರ್ಡರ್ ಮಾಡಿದ ಮಹಿಳೆಗೆ ಕಂಟೇನರ್‌ ಚಾರ್ಜ್‌ಗೂ 60 ರೂ. ಶುಲ್ಕ: ಟ್ವೀಟ್‌ ವೈರಲ್‌

ಬಿಲಿಯನೇರ್ ಆಗಿನಿಂದಲೇ ತಮ್ಮ ನಿದ್ರೆಯ ಬಗ್ಗೆ ಮನಸ್ಸನ್ನು ಬದಲಾಯಿಸಿದ್ದರಂತೆ. ದೈನಂದಿನ ನಿದ್ರೆಯ ಸ್ಕೋರ್ ಅನ್ನು ಟ್ರ್ಯಾಕ್ ಮಾಡಲು ಪ್ರಾರಂಭಿಸಿದ್ದರಂತೆ. ನಿದ್ರೆಯ ಸ್ಕೋರ್  ನಿಮ್ಮ ನಿದ್ರೆಯ ಅವಧಿ ಮತ್ತು ಗುಣಮಟ್ಟದಿಂದ ನಿರ್ಧರಿಸಲಾಗುತ್ತದೆ ಎಂದವರು ಹೇಳಿದ್ದಾರೆ.

ಗ್ರಾಹಕರ ಸೇವೆಗೆ ವೀಡಿಯೋ ಕರೆ: ಈ ಬ್ಯಾಂಕಲ್ಲಿ ಇನ್ಮುಂದೆ ದಿನದ 24 ಗಂಟೆ/ 365 ದಿನವೂ ಸೇವೆ

ಹದಿಹರೆಯದವರೆಗೂ ಉತ್ತಮ ನಿದ್ರೆ ಬಹಳ ಮುಖ್ಯ ಎನ್ನುತ್ತಾರೆ ಬಿಲ್ ಗೇಟ್ಸ್. ಹದಿಹರೆಯದವರೆಗೆ ಒಳ್ಳೆ ನಿದ್ರೆ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯ ಎಂದು ಬಿಲ್ಸ್ ಗೇಟ್ಸ್ ಹೇಳಿದ್ದಾರೆ. ಅಲ್ಝೈಮರ್ ಸೇರಿದಂತೆ ಯಾವುದೇ ಬುದ್ಧಿಮಾಂದ್ಯತೆಯ ಅತ್ಯಂತ ಮುನ್ಸೂಚಕ ಅಂಶವೆಂದರೆ ನೀವು ಎಷ್ಟು ನಿದ್ದೆ ಮಾಡುತ್ತಿದ್ದೀರಾ ಎಂಬುದು ಎಂದು ಬಿಲ್ ಗೇಟ್ಸ್ ಹೇಳ್ತಾರೆ. ಆಲ್ಝೈಮರ್ನ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಂದೆ 2020 ರಲ್ಲಿ ನಿಧನರಾಗಿದ್ದರು.  ಅನ್‌ಕನ್‌ಫ್ಯೂಸ್ ಮಿ  ಮೊದಲ ಸಂಚಿಕೆಯಲ್ಲಿ ಮಾತನಾಡಿದ  ರೋಗನ್, ಬಿಲ್ ಗೇಟ್ಸ್ ನಿದ್ರೆ ವಿಚಾರವನ್ನು ಒಪ್ಪಿಕೊಳ್ಳುತ್ತಾರೆ. 1950 ಮತ್ತು 1960 ರ ದಶಕದ ಬಗ್ಗೆ ಮಾತನಾಡಿದ ಅವರು ನಾನು ಚಿಕ್ಕವನಿದ್ದಾಗ, ನೀವು ಸತ್ತಾಗ ಮಾತ್ರ ನೀವು ಮಲಗುತ್ತೀರಿ ಎಂಬ ಸಂಪ್ರದಾಯವಿತ್ತು. ಧೂಮಪಾನ ಆರೋಗ್ಯಕರವೆಂದು ನಾನು ಭಾವಿಸಿದ್ದೆ ಎಂದು ರೋಗನ್ ಹೇಳಿದ್ದಾರೆ.  

ಗೇಟ್ಸ್ ಅವರು ನರವಿಜ್ಞಾನಿ ಮತ್ತು ನಿದ್ರೆ ತಜ್ಞ ಮ್ಯಾಥ್ಯೂ ವಾಕರ್ ಅವರ ಪುಸ್ತಕ "ವೈ ವಿ ಸ್ಲೀಪ್" ನಿಂದ  ನಿದ್ರೆ ಬಗ್ಗೆ ಸಲಹೆಗಳನ್ನು ತೆಗೆದುಕೊಂಡಿದ್ದಾರೆ. ಇದನ್ನು ಅವರು 2019 ರಲ್ಲಿ ತಮ್ಮ ಬ್ಲಾಗ್ "ಗೇಟ್ಸ್ ನೋಟ್ಸ್" ನಲ್ಲಿ ಬರೆದಿದ್ದಾರೆ. ನಾವು ಆ ಸಮಯದಲ್ಲಿ ಸತತವಾಗಿ ರಾತ್ರಿಯಿಡೀ ಕೆಲಸ ಮಾಡುತ್ತಿದ್ದೆ. ಕೆಲವೊಮ್ಮೆ  ನಾನು ಎರಡು ರಾತ್ರಿಗಳವರೆಗೆ ಎಚ್ಚರವಾಗಿರುತ್ತಿದ್ದೆ. ನಾನು ಕೆಫೀನ್ ಮತ್ತು ಅಡ್ರಿನಾಲಿನ್ ಮೇಲೆ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾಗ ನಾನು ಚುರುಕಾಗಿಲ್ಲ ಎಂದು ನನಗೆ ತಿಳಿದಿತ್ತು. ಆದರೆ ನಾನು ನನ್ನ ಕೆಲಸದ ಬಗ್ಗೆ ಗೀಳನ್ನು ಹೊಂದಿದ್ದೆ, ಮತ್ತು ನಾನು ಹೆಚ್ಚು ನಿದ್ರಿಸುವುದು ಸೋಮಾರಿತ ಎಂದು ನಂಬಿದ್ದೆ ಎಂದು ಗೇಟ್ಸ್ ಆಗ್ಲೂ ಬರೆದಿದ್ದರು. 

click me!