ಬೆಜೋಸ್‌ ಹಿಂದಿಕ್ಕಿದ ಬಿಲ್‌ಗೇಟ್ಸ್‌ ವಿಶ್ವದ ನಂ.1 ಸಿರಿವಂತ!, ಅಂಬಾನಿಗೆ ಯಾವ ಸ್ಥಾನ?

By Web Desk  |  First Published Nov 17, 2019, 2:22 PM IST

ಬೆಜೋಸ್‌ ಹಿಂದಿಕ್ಕಿದ ಬಿಲ್‌ಗೇಟ್ಸ್‌ ಮತ್ತೆ ವಿಶ್ವದ ನಂ.1 ಸಿರಿವಂತ| ಬ್ಲೂಮ್‌ಬರ್ಗ್‌ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ| ಮುಕೇಶ್‌ ಅಂಬಾನಿ ವಿಶ್ವದಲ್ಲೇ ಶ್ರೀಮಂತ ನಂ.14


ಸ್ಯಾನ್‌ಫ್ರಾನ್ಸಿಸ್ಕೋ[ನ.17]: ಅಮೆರಿಕದ ಮೂಲದ ಬ್ಲೂಮ್‌ಬರ್ಗ್‌ ಸಂಸ್ಥೆ ವಿಶ್ವದ ಶ್ರೀಮಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೇಟ್ಸ್‌ 7.92 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಮತ್ತೊಮ್ಮೆ ವಿಶ್ವದ ನಂ.1 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ಸತತ 24 ವರ್ಷ ವಿಶ್ವದ ನಂ.1 ಶ್ರೀಮಂತನಾಗಿದ್ದ ಬಿಲ್‌ಗೇಟ್ಸ್‌ ಅವರನ್ನು 2018ರಲ್ಲಿ ಜೆಜೋಸ್‌ ಕೆಳಗೆ ಇಳಿಸಿದ್ದರು.

2018ರಲ್ಲಿ ಬೆಜೋಸ್‌ ಆಸ್ತಿ 11 ಲಕ್ಷ ಕೋಟಿ ರು. ಇತ್ತು. ಆದರೆ ನಂತರದಲ್ಲಿ ಅವರ ಕಂಪನಿಯ ಷೇರು ಮೌಲ್ಯಗಳ ಇಳಿಕೆ ಕಂಡ ಕಾರಣ, ಮತ್ತು ಅವರು ಕಂಪನಿಯಲ್ಲಿನ ತಮ್ಮ ಪಾಲಿನ ಒಂದಷ್ಟುಷೇರುಗಳನ್ನು ವಿಚ್ಛೇದಿತ ಪತ್ನಿಗೆ ನೀಡಿದ ಕಾರಣ, ಬಜೆಟ್‌ ಆದಾಯದಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಇದೇ ವೇಳೆ ಮೈಕ್ರೋಸಾಫ್ಟ್‌ ಕಂಪನಿಯ ಷೇರು ಮೌಲ್ಯ ಭಾರೀ ಏರಿಕೆ ಕಂಡ ಕಾರಣ, ಗೇಟ್ಸ್‌ ಮತ್ತೆ ನಂ.1 ಆಗಿದ್ದಾರೆ.

Tap to resize

Latest Videos

ಇನ್ನು ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ 4 ಲಕ್ಷ ಕೋಟಿ ರು. ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ನಂ.1 ಭಾರತೀಯ ಮತ್ತು ವಿಶ್ವ ನಂ.14 ಶ್ರೀಮಂತನಾಗಿ ಹೊರಹೊಮ್ಮಿದ್ದಾರೆ. ಉಳಿದಂತೆ ವಿಶ್ವದ ಟಾಪ್‌ 100 ಶ್ರೀಮಂತರಲ್ಲಿ 4 ಭಾರತೀಯರು ಸ್ಥಾನ ಪಡೆದಿದ್ದಾರೆ. ಅವರೆಂದರೆ 14ನೇ ಸ್ಥಾನದಲ್ಲಿರುವ ಮುಕೇಶ್‌ ಅಂಬಾನಿ, 48ನೇ ರಾರ‍ಯಂಕ್‌ ಪಲ್ಲೋನ್‌ ಜೀ ಮಿಸ್ತ್ರಿ, 57ನೇ ಸ್ಥಾನ ಪಡೆದಿರುವ ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ, 81ನೇ ಸ್ಥಾನ ಪಡೆದಿರುವ ಎಚ್‌ಸಿಎಲ್‌ನ ಶಿವ ನಾಡಾರ್‌, ಮತ್ತು 95ನೇ ಸ್ಥಾನ ಪಡೆದಿರುವ ಬಿರ್ಲಾ ಗ್ರೂಪ್‌ನ ಉದಯ್‌ ಕೋಟಕ್‌.

click me!