ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ: ನಿರ್ಮಲಾ ಘೋಷಣೆ!

By Web Desk  |  First Published Nov 17, 2019, 11:55 AM IST

ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಕ್ರೋಡೀಕರಿಸುವ ಸರ್ಕಾರದ ಯೋಜನೆ| ಮಾರ್ಚ್‌ನೊಳಗೆ ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟ| ಸಂದರ್ಶನದಲ್ಲಿ ನಿರ್ಮಲಾ ಘೋಷಣೆ!


ನವದೆಹಲಿ[ನ.17]: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಕ್ರೋಡೀಕರಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪೆನಿ ಏರ್ ಇಂಡಿಯಾ ಹಾಗೂ ತೈಲ ಶುದ್ಧೀಕರಣ ಮತ್ತು ಮಾರುಕಟ್ಟೆ ಕಂಪೆನಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಯನ್ನು ಮಾರ್ಚ್ ತಿಂಗಳಿನೊಳಗೆ ಮಾರಾಟ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿರುವ ನಿರ್ಮಲಾ ಸೀತಾರಾಮನ್ 'ಪ್ರಸಕ್ತ ಹಣಕಾಸು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಕ್ರೋಢೀಕರಿಸುವುದು ಸರ್ಕಾರದ ಯೋಜನೆ. ಇದರ ಅಂಗವಾಗಿ ಈ ಎರಡು ಕಂಪೆನಿಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭವಾಗಿದ್ದು, ಇದೇ ವರ್ಷ ಪೂರ್ಣಗೊಳ್ಳುವ ನಿರೀಕ್ಷೆ ಇದೆ' ಎಂದಿದ್ದಾರೆ.

Latest Videos

undefined

ಆರ್ಥಿಕತೆ ಮಂದಗತಿಯಲ್ಲಿದೆ ಗುರುವೇ: ಸತ್ಯ ಒಪ್ಪಿಕೊಂಡ ವಿತ್ತ ಸಚಿವೆ!

ಏರ್ ಇಂಡಿಯಾ ಖರೀದಿಸಲು ಅಂತರಾಷ್ಟ್ರೀಯ ಹೂಡಿಕೆದಾರರು ತೀವ್ರ ಆಸಕ್ತಿ ಹೊಂದಿದ್ದಾರೆ. ನಷ್ಟ ಎದುರಿಸುತ್ತಿದ್ದ ಕಂಪೆನಿಯನ್ನು ಕಳೆದೊಂದು ವರ್ಷದ ಹಿಂದೆ ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಸೂಕ್ತ ಸ್ಪಂದನೆ ಸಿಗದ ಕಾರಣ ಸ್ಥಗಿತಗೊಳಿಸಲಾಗಿತ್ತು.

ತೆರಿಗೆ ಸಂಗ್ರಹಿಸುವ ಒತ್ತಡ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಇಂತಹ ಬಂಡವಾಳ ಹಿಂತೆಗೆತದ ಕ್ರಮದಿಂದ ಸರ್ಕಾರದ ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ನಿರ್ಮಲಾ ಸೀತಾರಾಮನ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

ದೇಶಕ್ಕಾಗಿ ಕಷ್ಟ ಇಷ್ಟ ಎಂದ ಭಾರತೀಯ: ಅಪನಗದೀಕರಣಕ್ಕೆ 3 ವರ್ಷದ ಐತಿಹ್ಯ!

ಇಷ್ಟೇ ಅಲ್ಲದೇ ’ಆರ್ಥಿಕ ಹಿಂಜರಿತವನ್ನು ತಡೆಯಲು ಸರ್ಕಾರ ಸಕಾಲದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು ಹಲವಾರು ಕ್ಷೇತ್ರಗಳು ಈ ಒತ್ತಡದಿಂದ ಹೊರ ಬರುತ್ತಿವೆ. ಉದ್ಯಮ ವಲಯದಲ್ಲಿ ಬ್ಯಾಲೆನ್ಸ್ ಶೀಟ್ ಸುಧಾರಿಸಲು ಇದು ನೆರವಾಗಿದ್ದು, ಹಲವರು ಹೊಸ ಹೂಡಿಕೆಗೆ ಯೋಜನೆ ಸಿದ್ಧಪಡಿಸಿದ್ದಾರೆ. ಇನ್ನು ಕೆಲ ಕ್ಷೇತ್ರಗಳಲ್ಲಿ ಮಾರಾಟ ಹೆಜ್ಜಾಗುತ್ತಿದ್ದಂತೆಯೇ ಜಿಎಸ್ ಟಿ ಸಂಗ್ರಹವೂ ಅಧಿಕವಾಗಲಿದೆ' ಎಂದು ತಿಳಿಸಿದ್ದಾರೆ

click me!