24,713 ಕೋಟಿ ರೂ ರಿಲಯನ್ಸ್ ಒಪ್ಪಂದ ವಿರುದ್ಧ ಕಾನೂನು ಹೋರಾಟ; ಅಮೆಜಾನ್ ಪರ ಸುಪ್ರೀಂ ತೀರ್ಪು !

By Suvarna News  |  First Published Aug 6, 2021, 8:13 PM IST
  • ರಿಲಯನ್ಸ್ ಹಾಗೂ ಅಮೆಜಾನ್ ನಡುವಿನ ಕಾನೂನು ಹೋರಾ
  • ಫ್ಯೂಚರ್ ಗ್ರೂಪ್-ರಿಲಯನ್ಸ್ ಒಪ್ಪಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಅಮೆಜಾನ್
  • 24,713 ಕೋಟಿ ರೂಪಾಯಿ ರಿಲಯನ್ಸ್ ಹಾಗೂ  ಫ್ಯೂಚರ್ ಗ್ರೂಪ್ ಒಪ್ಪಂದ

ನವದೆಹಲಿ(ಆ.06): ರಿಲಯನ್ಸ್ ಹಾಗೂ ಅಮೆಜಾನ್ ನಡುವಿನ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ ಫುಲ್ ಸ್ಟಾಪ್ ಇಟ್ಟಿದೆ. ಫ್ಯುಚರ್ ಗ್ರೂಪ್ ಹಾಗೂ ರಿಲಯನ್ಸ್ ನಡುವಿನ 24,713 ಕೋಟಿ ರೂಪಾಯಿ ಒಪ್ಪಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಅಮೆಜಾನ್ ಪರ ಇದೀಗ ತೀರ್ಪು ಹೊರಬಿದ್ದಿದೆ. ರಿಲಯನ್ಸ್ ಒಪ್ಪಂದ ಮುಂದುವರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಅಮೆಜಾನ್, ಫ್ಲಿಪ್‌ಕಾರ್ಟ್‌ಗೆ ಮತ್ತೊಂದು ಹಿನ್ನಡೆ, CCI ತನಿಖೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ!

Latest Videos

undefined

ಕಳೆದ ವರ್ಷ ಫ್ಯೂಚರ್ ಗ್ರೂಪ್ ಹಾಗೂ ರಿಲಯನ್ಸ್ ಮಾಡಿಕೊಂಡಿದ್ದ ಒಪ್ಪಂದ ಮುಂದುವರಿಸಲು ವಿರುದ್ಧ ಸಿಂಗಾಪುರ ಮೂಲದ ಏಕ ನ್ಯಾಯಧೀಶರ ಮಧ್ಯಸ್ಥಿಕೆ ಸಮಿತಿ ನಿರಾಕರಿಸಿತ್ತು. ಆದರೆ  ಸಿಂಗಾಪುರ ಸಮಿತಿ ನೀಡಿದ ಆದೇಶ ಭಾರತದಲ್ಲಿ ಜಾರಿಗೊಳಿಸುವ ಕುರಿತು ಪ್ರಶ್ನೆ ಎದ್ದಿತ್ತು. ಹೀಗಾಗಿ ಅಮೆಜಾನ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. 

ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಧ್ಯಸ್ಥಿಕಿ ಸಮಿತಿ ನೀಡಿದ ಆದೇಶವನ್ನು ಭಾರತದಲ್ಲಿ ಜಾರಿಗೊಳಿಸಬಹುದು ಎಂದು ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಹೇಳಿದ್ದಾರೆ. ಮಧ್ಯಸ್ಥಿಕೆ ಹಾಗೂ ಸಮನ್ವಯ ಕಾಯ್ದಿ ಸೆಕ್ಷನ್  17 (1) ರ ಅಡಿಯಲ್ಲಿ ತುರ್ತು ಮಧ್ಯಸ್ಥಗಾರರ ಆದೇಶವನ್ನು ಎತ್ತಿಹಿಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

2020ರಲ್ಲಿ ರಿಲಯನ್ಸ್ ಫ್ಯೂಚರ್ ಗ್ರೂಪ್ ಪಾಲು ಖರೀದಿಸಲು 24,713 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿತ್ತು. ಆದರೆ ಅಮೆಜಾನ್ ಪಾಲುದಾರರಾಗಿರುವ ಫ್ಯೂಚರ್ ಗ್ರೂಪ್ ತನ್ನ ಅನುಮತಿ ಇಲ್ಲದೆ ರಿಲಯನ್ಸ್‌ಗೆ ಪಾಲು ನೀಡುಲು ಸಾಧ್ಯವಿಲ್ಲ. ಈ ಒಪ್ಪಂದವನ್ನು ರದ್ದುಗೊಳಿಸಬೇಕು ಎಂದಿತ್ತು. ಈ ಕುರಿತು ಸಿಂಗಾಪುರ ಏಕ ನ್ಯಾಯಾಧೀಶರ ಮಧ್ಯಸ್ಥಿಕೆ ಸಮಿತಿ ಒಪ್ಪಂದ ಮುಂದುವರಿಸಲು ಸಾಧ್ಯವಿಲ್ಲ ಎಂದು ರಿಲಯನ್ಸ್ ಹಾಗೂ ಫ್ಯೂಚರ್ ಗ್ರೂಪ್‌ಗೆ ಸೂಚಿಸಿತ್ತು.

ಇದೀಗ ಸುಪ್ರೀಂ ಕೋರ್ಟ್ ಇದೇ ತೀರ್ಪು ನೀಡಿದೆ. ಫ್ಯೂಚರ್ ಗ್ರೂಪ್ ಹಾಗೂ ರಿಲಯನ್ಸ್ ನಡುವಿನ ಒಪ್ಪಂದ ಕಾನೂನು ಉಲ್ಲಂಘನೆಯಾಗಿದೆ. ಅಮೆಜಾನ್ ಪಾಲುದಾರ ಫ್ಯೂಚರ್ ಗ್ರೂಪ್, ರಿಲಯನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲು ಉದ್ಯಮಿ ಜೊತೆಗಾರರ ಅನುಮತಿ ಕಡ್ಡಾಯ ಎಂದಿದೆ.

click me!