ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನದಲ್ಲಿ, ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ವಾಯುಪಡೆಗಾಗಿ 97 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿದೆ. ಅಲ್ಲದೆ, ಭಾರತೀಯ ಸೇನೆಗಾಗಿ 156 ಪ್ರಚಂಡ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.
ನವದೆಹಲಿ (ನವೆಂಬರ್ 30, 2023): ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಇದೀಗ, ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ದೊರೆತಿದ್ದು, ರಕ್ಷಣಾ ಇಲಾಖೆಗೆ ತೇಜಸ್ ಯುದ್ಧ ವಿಮಾನ ಹಾಗೂ ಪ್ರಚಂಡ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಿಗೆ ದೊರೆತಿದೆ.
ಹೌದು, ಭಾರತದ ರಕ್ಷಣಾ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನದಲ್ಲಿ, ರಕ್ಷಣಾ ಸ್ವಾಧೀನ ಮಂಡಳಿಯು ಭಾರತೀಯ ವಾಯುಪಡೆಗಾಗಿ 97 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿದೆ. ಅಲ್ಲದೆ, ಭಾರತೀಯ ಸೇನೆಗಾಗಿ 156 ಪ್ರಚಂಡ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಕೌನ್ಸಿಲ್ ಅನುಮೋದನೆ ನೀಡಿದೆ.
ರಕ್ಷಣಾ ವಲಯದಲ್ಲಿ ಭಾರತದ ಮಹತ್ತರ ಸಾಧನೆ: ಮೇಕ್ ಇನ್ ಇಂಡಿಯಾಗೆ ಮೆಗಾ ಸಕ್ಸಸ್..!
ರಕ್ಷಣಾ ಅಧಿಕಾರಿಗಳ ಪ್ರಕಾರ ತೇಜಸ್ ಯುದ್ಧ ವಿಮಾನಗಳ ಬೆಲೆ ಸುಮಾರು 65,000 ಕೋಟಿ ರೂ. ಆಗಿದೆ. ಭಾರತೀಯ ವಾಯುಪಡೆ ಬಳಸುವ 84 Su-30MKI ಫೈಟರ್‌ಗಳ ಅಪ್‌ಗ್ರೇಡ್ ವಿಮಾನಕ್ಕೂ ಕೌನ್ಸಿಲ್ ಅನುಮೋದನೆ ನೀಡಿದೆ. ಒಟ್ಟಾರೆಯಾಗಿ, ಪ್ರಸ್ತಾವನೆಗೆ ಸುಮಾರು 1.6 ಲಕ್ಷ ಕೋಟಿ ರೂ. ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು, ರಕ್ಷಣಾ ಸಚಿವಾಲಯವು ಭಾರತೀಯ ವಾಯುಪಡೆಗೆ ಸುಮಾರು 65,000 ಕೋಟಿ ರೂ. ವೆಚ್ಚದಲ್ಲಿ 97 LCA ಮಾರ್ಕ್ 1A ಫೈಟರ್ ಜೆಟ್‌ಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ಹಾಗೂ, 156 LCH ಪ್ರಚಂಡ್ ಚಾಪರ್‌ಗಳನ್ನು ಖರೀದಿಸುವ ಪ್ರಸ್ತಾವನೆಯನ್ನು ರಕ್ಷಣಾ ಸ್ವಾಧೀನ ಮಂಡಳಿಯು ಅನುಮೋದಿಸಿದೆ. ಜೊತೆಗೆ 84 Su-30MKI ಫೈಟರ್‌ಗಳ ಅಪ್‌ಗ್ರೇಡ್ ಯೋಜನೆಗೆ ಸಹ ಅನುಮೋದನೆ ನೀಡಲಾಗಿದೆ. ಈ ಪ್ರಸ್ತಾವನೆಗಳು 1.6 ಲಕ್ಷ ಕೋಟಿ ರೂ. ಮೌಲ್ಯದ ಮತ್ತು ಸ್ವದೇಶಿ ಯೋಜನೆಗಳಾಗಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಎಎನ್‌ಐ ಉಲ್ಲೇಖಿಸಿದೆ.
ಬೆಂಗಳೂರಲ್ಲಿ ನಮೋ: ತೇಜಸ್ ಯುದ್ಧ ವಿಮಾನದಲ್ಲಿ ಪ್ರಧಾನಿ ಮೋದಿ ಹಾರಾಟ
ಭಾರತವು 2030 ರ ವೇಳೆಗೆ 160 ಮತ್ತು 2035 ರ ವೇಳೆಗೆ 175 ಯುದ್ಧನೌಕೆಗಳನ್ನು ಹೊಂದಲು ಯೋಜಿಸಿದ್ದು, ಇದಕ್ಕೆ ಅಂದಾಜು 2 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ. ಭಾರತೀಯ ನೌಕಾಪಡೆಯ 60ಕ್ಕೂ ಹೆಚ್ಚು ಹಡಗುಗಳು ಪ್ರಸ್ತುತ ನಿರ್ಮಾಣದ ವಿವಿಧ ಹಂತಗಳಲ್ಲಿವೆ ಎಂದೂ ತಿಳಿದುಬಂದಿದೆ. ಚೀನಾದ ಹೆಚ್ಚುತ್ತಿರುವ ನೌಕಾ ಶಕ್ತಿಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆ ದೇಶವು ಹಿಂದೆಂದಿಗಿಂತಲೂ ಹೆಚ್ಚು ಯುದ್ಧನೌಕೆ ಗಸ್ತು ನಡೆಸುತ್ತಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರತವು ರನ್‌ವೇ ಸೌಲಭ್ಯಗಳನ್ನು ನವೀಕರಿಸಿದ್ದು, ವಿಮಾನಗಳು ರಾತ್ರಿಯಲ್ಲಿ ಇಳಿಯಲು ಅನುವು ಮಾಡಿಕೊಡುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.