ಕ್ಯಾಶ್ ಲೆಸ್ ವ್ಯವಹಾರ ಮಾಡುವವರಿಗೆ ಇಲ್ಲಿದೆ ಗುಡ್ ನ್ಯೂಸ್

By Web DeskFirst Published Aug 5, 2018, 1:07 PM IST
Highlights

ಕ್ಯಾಶ್ ಲೆಸ್ ವ್ಯವಹಾರ ಮಾಡುವವರಿಗೆ ಇಲ್ಲಿದೆ ಗುಡ್ ನ್ಯೂಸ್. ನೀವು ಯಾವುದೇ ರೀತಿಯ ಕ್ಯಾಶ್ ಲೆಸ್ ವ್ಯವಹಾರ ಮಾಡಿದಲ್ಲಿ ನಿಮಗೆ ಭರ್ಜರಿ ಕ್ಯಾಶ್ ಬ್ಯಾಕ್ ಆಫರ್ ಸಿಗಲಿದೆ.

ನವದೆಹಲಿ: ನಗದು ರಹಿತ ವ್ಯವಹಾರ ಮಾಡುವವರಿಗೊಂದು ಸಿಹಿ ಸುದ್ದಿ. ರುಪೇ ಕಾರ್ಡ್, ಭೀಮ್ ಆ್ಯಪ್ ಮತ್ತು ಯುಪಿಐ ವ್ಯವಸ್ಥೆಯಡಿ ಡಿಜಿಟಲ್ ಪಾವತಿ ಮಾಡುವ ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ನೀಡುವ ಪ್ರಸ್ತಾಪಕ್ಕೆ ಜಿಎಸ್‌ಟಿ ಮಂಡಳಿ ಅನುಮೋದನೆ ನೀಡಿದೆ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

 ಯೋಜನೆಯ ಪ್ರಕಾರ ರುಪೇ ಕಾರ್ಡ್, ಭೀಮ್, ಯುಪಿಐಯಲ್ಲಿ ಹಣ ಪಾವತಿಸುವವರಿಗೆ ಜಿಎಸ್‌ಟಿ ಮೊತ್ತದ ಶೇ.20 ರಷ್ಟು ಕ್ಯಾಶ್‌ಬ್ಯಾಕ್ (ಹಣ ಹಿಂದಿರುಗಿಸುವ) ಕೊಡುಗೆ ಲಭ್ಯವಾಗಲಿದೆ. ಆದರೆ, 
ಇದಕ್ಕೆ ಗರಿಷ್ಠ 100 ರು. ಮಿತಿಯಿದೆ.

ಸಣ್ಣ ಕೈಗಾರಿಕೆಗೆ ಕೊಡುಗೆ: ಎಂಎಸ್‌ಎಂಇ ವಲಯದ ವಿಷಯಗಳನ್ನು ಇತ್ಯರ್ಥ ಪಡಿಸಲು ಹಣಕಾಸು ಖಾತೆಯ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ ನೇತೃತ್ವದಲ್ಲಿ ಆರು ಸದಸ್ಯರ ಸಚಿವರ ಸಮಿತಿಯೊಂದನ್ನು ರಚಿಸಲಾಗಿದೆ.

click me!