
ಮುಂಬೈ: ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಇಂಡಿಗೋ ಇತ್ತೀಚೆಗಷ್ಟೇ ಒಂದು ಟಿಕೆಟ್‌ಗೆ 1212 ರು.ನಂತೆ 12 ಲಕ್ಷ ಸೀಟುಗಳನ್ನು ಬುಕ್ ಮಾಡುವ ಅವಕಾಶ ಕಲ್ಪಿಸಿತ್ತು. ಇದಕ್ಕೆ ಸಡ್ಡು ಹೊಡೆಯಲು ಮುಂದಾಗಿರುವ ಗೋಏರ್, ಭಾರೀ ರಿಯಾಯಿತಿ ದರದಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದೆ.
ಅದರ ಪ್ರಕಾರ, ಪ್ರತೀ ಸೀಟಿಗೆ 1099 ರು. ರಿಯಾಯತಿ ದರದಲ್ಲಿ 10 ಲಕ್ಷ ಸೀಟುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಈ ಸೀಟುಗಳನ್ನು ಗ್ರಾಹಕರು ಆ.4ರಿಂದ 2018 ರ ಡಿಸೆಂಬರ್ 31ರ ಒಳಗೆ ಯಾವ ದಿನಾಂಕ ಬೇಕಾದರೂ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು. ಆದರೆ, ಈ ಕೊಡುಗೆ ಆ.9 ರವರೆಗೂ ಮಾತ್ರ ಇರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.