ಎಂಎಸ್ ಎಂಇಗಳ ಸಮಸ್ಯೆ ಪರಿಹಾರಕ್ಕೆ ಸಮಿತಿ: ಗೋಯಲ್

By Web DeskFirst Published Aug 4, 2018, 10:15 PM IST
Highlights

ಎಂಎಸ್ ಎಂಇಗಳ ಸಮಸ್ಯೆ ಪರಿಹಾರಕ್ಕೆ ಸಮಿತಿ! ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಣಯ! ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ  ಸಮಸ್ಯೆ ಪರಿಹಾರ! ಹಣಕಸು ಸಚಿವ ಪಿಯೂಷ್ ಗೋಯಲ್ ಮಾಹಿತಿ

ನವದೆಹಲಿ(ಆ.4): ಹಣಕಾಸು ಸಚಿವ ಪಿಯೂಷ್ ಗೊಯಲ್ ಅಧ್ಯಕ್ಷತೆಯಲ್ಲಿ ಇಂದು ನಡೆದ  29 ನೇ ಸರಕು ಮತ್ತು ಸೇವಾ ತೆರಿಗೆ ಸಲಹಾ ಸಭೆಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ  ಸಮಸ್ಯೆ   ಪರಿಹಾರಕ್ಕೆ  ಸಮಿತಿ ರಚಿಸುವುದಾಗಿ ಘೋಷಿಸಲಾಯಿತು.


ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಯೂಷ್ ಗೊಯಲ್, ಎಂಎಸ್ ಎಂಇಗಳ ಸಮಸ್ಯೆ ಗಳ  ಪರಿಹಾರ ಸಂಬಂಧ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ಚರ್ಚಿಸಲಾಯಿತು ಎಂದು ತಿಳಿಸಿದರು.

ಇಂದಿನ  ಚಾರಿತ್ರಿಕ ಜಿಎಸ್ ಟಿ ಸಲಹಾ ಸಮಿತಿ ಸಭೆಯಲ್ಲಿ  ಅರ್ಥಪೂರ್ಣವಾದ ಚರ್ಚೆ ನಡೆಯಿತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ  ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವ ನಿಟ್ಟಿನಲ್ಲಿ  ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಹೇಳಿದರು.

Finance Minister Piyush Goyal, announced that a committee has been set up to look after the issues of Micro, Small and Medium Enterprises (MSMEs) in the 29th GST council meeting

Read Story | https://t.co/xiqOKMPFOI pic.twitter.com/U3AtsSM9Pw

— ANI Digital (@ani_digital)

ಕಾನೂನು ಸಮಿತಿ ತೆರಿಗೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲು  ಚರ್ಚಿಸಲಾಯಿತು. ಕಾನೂನು ಮತ್ತು ಪಿಟ್ಮೆಂಟ್ ಸಮಿತಿ  ತೆರಿಗೆ ಸುಂಕಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಎಂದು  ಸಚಿವರು ತಿಳಿಸಿದರು.
 
ಹಣಕಾಸು ರಾಜ್ಯ ಸಚಿವ ಶಿವ  ಪ್ರತಾಪ್ ಶುಕ್ಲಾ ಅಧ್ಯಕ್ಷತೆಯಲ್ಲಿ  ಉಪ ಸಮಿತಿಯೊಂದನ್ನು ಮಾಡಲಾಗಿದೆ. ದೆಹಲಿಯ ಉಪಮುಖ್ಯಮಂತ್ರಿ ಮನಿಶ್ ಸಿಸೊಡಿಯಾ, ಬಿಹಾರದ ಉಪಮುಖ್ಯಮಂತ್ರಿ  ಸುಶೀಲ್ ಕುಮಾರ್  ಮೋದಿ, ಅಸ್ಸಾಂ ಹಣಕಾಸು ಸಚಿವ ಹಿಮಾಂತ ಬಿಸ್ವಾ ಶರ್ಮಾ,  ಕೇರಳ ಹಣಕಾಸು ಸಚಿವ ಥಾಮಸ್  ಇಸ್ಯಾಕ್, ಮತ್ತು ಪಂಜಾಬ್ ಹಣಕಾಸು ಸಚಿವ  ಮನ್ ಪ್ರೀತ್ ಸಿಂಗ್ ಬಾದಲ್ ಈ ಸಮಿತಿಯಲ್ಲಿ ಇದ್ದಾರೆ ಎಂದು ಎಂದು ಗೋಯೆಲ್ ತಿಳಿಸಿದರು.

click me!