ಸ್ಟಾರ್ಟ್‌ಅಪ್‌ಗೆ ₹120 ಕೋಟಿ ಸಂಗ್ರಹಿಸಿದರೂ ಬೆಂಗಳೂರು ಮನೆ ಬಾಡಿಗೆ ಕಟ್ಟಲು ಪರದಾಡಿದ ಉದ್ಯಮಿ

Published : May 01, 2025, 01:31 PM ISTUpdated : May 01, 2025, 02:29 PM IST
ಸ್ಟಾರ್ಟ್‌ಅಪ್‌ಗೆ ₹120 ಕೋಟಿ ಸಂಗ್ರಹಿಸಿದರೂ ಬೆಂಗಳೂರು ಮನೆ ಬಾಡಿಗೆ ಕಟ್ಟಲು ಪರದಾಡಿದ ಉದ್ಯಮಿ

ಸಾರಾಂಶ

ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವುದು, ಹಾಗೂ ಬಾಡಿಗೆ ಪಾವತಿಸುವುದು ಅತೀ ದೊಡ್ಡ ಸವಾಲು. ಇದೀಗ ಬೆಂಗಳೂರು ಮನೆ ಬಾಡಿಗೆ ಮತ್ತೆ ಚರ್ಚೆಯಾಗುತ್ತಿದೆ. ಕಾರಣ ಸ್ಟಾರ್ಟ್ಅಪ್ ಉದ್ಯಮಿ ತನ್ನ ಉದ್ಯಮಕ್ಕೆ 120 ಕೋಟಿ ರೂ ಸಂಗ್ರಹಿಸಿದ್ದರು. ಆದರೆ ಬೆಂಗಳೂರಿನಲ್ಲಿ ಗಗನಕ್ಕೇರಿರುವ ಮನೆ ಬಾಡಿಗೆ ಕಟ್ಟಲು ಮಾತ್ರ ಪರದಾಡಬೇಕಾಯಿತು ಎಂದಿದ್ದಾರೆ.

ಬೆಂಗಳೂರು(ಮೇ.01) ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯುವುದು ದೊಡ್ಡ ಸವಾಲಾದರೆ, ಬಾಡಿಗೆ ಪಾವತಿಸುವುದು ಅದಕ್ಕಿಂತ ದೊಡ್ಡ ಸವಾಲು. ಬೆಂಗಳೂರಲ್ಲಿ ಬಾಡಿಗೆ ಬಲು ದುಬಾರಿಯಾಗಿದೆ. ಅಡ್ವಾನ್ಸ್ ಮೊತ್ತ, ಬಾಡಿಗೆ ಕಟ್ಟುವಷ್ಟರಲ್ಲಿ ಹೈರಾಣಾಗುತ್ತಾರೆ. ಬೆಂಗಳೂರನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಬಹುತೇಕರಿಗೆ ಈ ಅನುಭವವಾಗಿರುತ್ತದೆ. ತಿಂಗಳ ಬಾಡಿಗೆ, ನೀರು ಸೇರಿದಂತೆ ಇತರ ವೆಚ್ಚ, ನಿರ್ವಹಣೆ ವೆಚ್ಚ ಸೇರಿದಂತೆ ಒಂದಷ್ಟು ವೆಚ್ಚಗಳು ಸೇರಿಕೊಳ್ಳುತ್ತದೆ. ಇದು ಮತ್ತಷ್ಟು ದುಬಾರಿಯನ್ನಾಗಿ ಮಾಡುತ್ತದೆ. ಇದೀಗ ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ ಉದ್ಯಮ ಆರಂಭಿಸಿದ ಉದ್ಯಮಿಯೇ ಬಾಡಿಗೆ ಕಟ್ಟಲಾಗದೆ ಪರದಾಡಿದ ಘಟನೆ ನಡೆದಿದೆ.

ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಬೆಂಗಳೂರಿನ ಯಶಸ್ವಿ ಸ್ಟಾರ್ಟ್ಅಪ್ ಉದ್ಯಮ ಒಕೆ ಕ್ರೆಡಿಟ್(@OkCredit) ಹರ್ಷಾ ಪೋಖರ್ನಾ ಬೆಂಗಳೂರಿನ ದುಬಾರಿ ಬಾಡಿಗೆ ಹಾಗೂ ತಾನು ಪರದಾಡಿದ ಘಟನೆಯನ್ನು ವಿವರಿಸಿದ್ದಾರೆ. ಹರ್ಷಾ ಪೋಖರ್ನಾ ಹೇಳಿದ ಬೆಂಗಳೂರು ಬಾಡಿಗೆಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ಒಕೆ ಕ್ರಿಕೆಡ್ ಸ್ಟಾರ್ಟ್ಅಪ್ ಉದ್ಯಮ ಆರಂಭಿಸುವಾಗ ತಾನು ದಿವಾಳಿಯಾಗಿದ್ದೆ ಎಂದಿದ್ದಾರೆ. ಒಂದೆಡೆ ಗಗನೆತ್ತರಕ್ಕೆ ಏರಿದ್ದ ಬೆಂಗಳೂರಿನ ಮನೆ ಬಾಡಿಗೆ ತೀವ್ರ ತಲೆನೋವು ತಂದಿದ್ದು ಎಂದು ಹರ್ಷಾ ಪೋಖರ್ನಾ ಹೇಳಿದ್ದಾರೆ. 

ಅಲ್ಟ್ರವೈಲೆಟ್ ಇವಿ ಸ್ಕೂಟರ್ ಲಾಂಚ್, 100ರೂಗೆ 500km ಮೈಲೇಜ್, 14 ದಿನದಲ್ಲಿ 50000 ಬುಕಿಂಗ್

ಒಕೆ ಕ್ರಿಡಿಟ್ ಸ್ಟಾರ್ಟ್ ಅಪ್ ಉದ್ಯಮ ಆರಂಭಿಸಿ ವಿಸ್ತರಣೆ ಮಾಡುವ ಕಾರ್ಯ ಆರಂಭಗೊಂಡಿತ್ತು. ಹೂಡಿಕೆದಾರರಿಂದ ಹಣ ಸಂಗ್ರಹ ಆರಂಭಿಸಲಾಗಿತ್ತು. 2019ರಲ್ಲಿ ಹೂಡಿಕೆದಾರರಿಗೆ 120 ಕೋಟಿ ರೂಪಾಯಿ ಹಣ ಸಂಗ್ರಹ ಮಾಡಿದ್ದೆ. ಒಕೆ ಕ್ರಿಡಿಟ್ ಭವಿಷ್ಯದಲ್ಲಿನ ಉದ್ಯಮ, ವ್ಯವಹಾರ ಕುರಿತು ಹೂಡಿಕೆದಾರರ ಮನ ಒಲಿಸಿ ಫಂಡಿಂಗ್ ತರಲಾಗಿತ್ತು. ಒಕೆ ಕ್ರಿಡಿಟ್ ಉದ್ಯಮಕ್ಕೆ 120 ಕೋಟಿ ರೂಪಾಯಿ ಸಂಗ್ರಹಿಸಿದ ನಾನು ದಿವಾಳಿಯಾಗಿದ್ದೆ. ನನ್ನ ಬಳಿ ಒಂದು ರೂಪಾಯಿಯೂ ಇರಲಿಲ್ಲ. ಪ್ರತಿ ತಿಂಗಳ ಸಂಬಂಳ ಬರಲು ಕಾಯುತ್ತಿದ್ದೆ.  ಇದರ ನಡುವೆ ರಾಕೆಚ್ ವೇಗದಲ್ಲಿ ಏರುತ್ತಿದ್ದ ಬೆಂಗಳೂರು ಮನೆ ಬಾಡಿಗೆ ಪಾವತಿಸಲು ಪರದಾಡಬೇಕಾಯಿತು ಎಂದು ಹರ್ಷಾ ಹಳಿದ್ದಾರೆ.

ಒಂದು ಸ್ಯಾಲರಿಯಿಂದ ಮತ್ತೊಂದು ತಿಂಗಳ ಸಂಬಂಳ ವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ನನ್ನ ಮಾತ್ರ ಕತೆಯಲ್ಲಿ ಉದ್ಯಮ ಆರಂಭಿಸಿ, ಬೆಳೆಸಲು ಕಷ್ಟಪಟ್ಟ ಹಲವರು ಉದ್ಯಮಿದಾರರ ಕತೆ ಇದೇ ಆಗಿದೆ ಎಂದು ಹರ್ಷಾ ಹೇಳಿದ್ದಾರೆ. ಸ್ಟಾರ್ಟ್ ಅಪ್ ಉದ್ಯಮಿಗಳ ಸಂಸ್ಥಾಪಕರು ಕೋಟಿ ಕೋಟಿ ಹಣ ಹೂಡಿಕೆದಾರರಿಂದ ಸಂಗ್ರಹಿಸುತ್ತಿದ್ದರೂ ಬೆಂಗಳೂರು ಜೀವನ ಮಾತ್ರ ಕಾಲೇಜು ಹುಡುಗರ ರೀತಿ ಇತ್ತು ಎಂದಿದ್ದಾರೆ. ತಿಂಗಳ ಅಂತ್ಯವಾಗುತ್ತಿದ್ದಂತೆ ಬಾಡಿಗೆ ಕಟ್ಟುವುದು ಹೇಗೆ ಅನ್ನೋ ಚಿಂತೆಯಾಗುತ್ತಿತ್ತು. ಇದು ಇನ್ನಿಲ್ಲದಂತೆ ಕಾಡಲು ಆರಂಭಿಸಿತ್ತು ಎಂದಿದ್ದಾರೆ.

ಸಣ್ಣ ಆರ್ಥಿಕ ಭದ್ರತೆ ಉದ್ಯಮ, ಸ್ಟಾರ್ಟ್ಅಪ್ ಸಂಸ್ಥಾಪಕರನ್ನು ದುರ್ಬಲಗೊಳಿಸುವುದಿಲ್ಲ, ಬದಲಾಗಿ ಅವರನ್ನು ಧೈರ್ಯದಿಂದ ಮುನ್ನುಗ್ಗುವಂತೆ ಮಾಡುತ್ತದೆ ಎಂದು ಹರ್ಷಾ ಹೇಳಿದ್ದಾರೆ. ನೀವು ಉದ್ಯಮ ಆರಂಭಿಸುವವರಾಗಿದ್ದರೆ, ಉದ್ಯಮ ಆರಂಭಿಸಿದ್ದರೆ, ನೀವು ಹೇಗೆ ಬದುಕುತ್ತಿದ್ದೀರಿ, ಇತರ ಸಿಇಒ ರೀತಿ ಐಷಾರಾಮಿ ಕಾರು, ಮನೆ ಇಲ್ಲ ಎಂದು ಹಿಂಜರಿಕೆ ಬೇಡ. ನೀವು ಹೇಗಿದ್ದಿರೋ ಹಾಗೇ ಬದುಕಿ, ಆಧರೆ ನಿಮ್ಮ ಗಮನ ಉದ್ಯಮ ಬೆಳೆಸುವತ್ತ ಇರಲಿ ಎಂದು ಹರ್ಷಾ ಕಿವಿಮಾತು ಹೇಳಿದ್ದಾರೆ. ನಿಮ್ಮ ಕನಸುಗಳನ್ನು ಬೆಳೆಸುವಾಗ, ನೀವು ಸ್ವಾತಂತ್ರ್ಯವನ್ನೂ ನೀಡಿ ಎಂದು ಹರ್ಷಾ ಹೇಳಿದ್ದಾರೆ.

ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಸಿಇಒಗೆ ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದಾದರೆ ಬೆಂಗಳೂರಿನ ಜನಸಾಮಾನ್ಯರ ಗತಿ ಏನು ಎಂದು ಹಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಸಿಇಒ ದಿವಾಳಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. 

ಭಾರತದ ಮೊದಲ ಹಾರುವ ಟ್ಯಾಕ್ಸಿ ಅನಾವರಣ, ಬೆಂಗಳೂರು ಏವಿಯೇಶನ್ ಕಂಪನಿಯಿಂದ ಕ್ರಾಂತಿ
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Aadhaar Card Misuse Check: ನಿಮ್ಮ ಆಧಾರ್ ಕಾರ್ಡ್ ಮಿಸ್ ಯೂಸ್ ಆಗ್ತಿದೆಯಾ?: ಕೇವಲ 2 ನಿಮಿಷಗಳಲ್ಲಿ ಇದನ್ನ ಪತ್ತೆ ಮಾಡಿ
ರಾತ್ರೋರಾತ್ರಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ 4 ರೂಪಾಯಿ ಇಳಿಸಿದ ಪಾಕಿಸ್ತಾನ, ಭಾರತದಲ್ಲಿ ಇಳಿಕೆಯಾಗುತ್ತಾ?