ಗ್ರಾಹಕರು ನಿರಾಳ: ಆನ್‌ಲೈನ್ ಹಣ ವರ್ಗ ವಿಫಲವಾದ್ರೆ ಬ್ಯಾಂಕ್‌ಗೇ ದಂಡ!

By Web Desk  |  First Published Sep 21, 2019, 8:32 AM IST

ಹಣಕಾಸು ವಹಿವಾಟು ವಿಫಲವಾದರೆ ಬ್ಯಾಂಕುಗಳು ದಂಡ ಕಟ್ಟಬೇಕು|  ದಿನಕ್ಕೆ 100 ರು. ಪರಿಹಾರ


ಮುಂಬೈ[ಸೆ.21]: ಒಂದು ವೇಳೆ ಗ್ರಾಹಕರ ತಪ್ಪು ಇಲ್ಲದೇ ಇದ್ದರೂ ಹಣಕಾಸು ವಹಿವಾಟು ವಿಫಲವಾದರೆ ಬ್ಯಾಂಕುಗಳು ದಂಡ ಕಟ್ಟಬೇಕು ಎಂಬ ನಿಯಮವನ್ನು ಆರ್‌ಬಿಐ ಜಾರಿಗೊಳಿಸಿದೆ.

ಎಟಿಎಂ ಅಥವಾ ಡಿಜಿಟಲ್ ವ್ಯವಹಾರದಲ್ಲಿ ನಿಗದಿತ ಸಮಯದಲ್ಲಿ ವಹಿವಾಟು ಪೂರ್ಣಗೊಳ್ಳದೇ ಇದ್ದ ಪಕ್ಷದಲ್ಲಿ ಬ್ಯಾಂಕುಗಳು ದಿನಕ್ಕೆ 100 ರು. ಪರಿಹಾರ ನೀಡಬೇಕು. ಹಣ ವರ್ಗಾವಣೆ ಸಮಯದಲ್ಲಿ ಹಣ ಪಡೆಯುವ ವ್ಯಕ್ತಿಯ ಖಾತೆಗೆ ಹಣ ಜಮಾವಣೆ ಆಗದೇ ಖಾತೆಯಿಂದ ಹಣ ಕಡಿತಗೊಂಡಿದ್ದರೆ ಈ ತಪ್ಪಿಗೆ ಬ್ಯಾಂಕುಗಳೇ ಹೊಣೆಯಾಗಬೇಕಾಗುತ್ತದೆ.

Tap to resize

Latest Videos

undefined

ಹಣ ವರ್ಗಾವಣೆಗೆ ಆರ್‌ಬಿಐ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದ್ದು, ಆ ಸಮಯದ ಒಳಗಾಗಿ ವ್ಯವಹಾರ ಮುಗಿಯದೇ ಇದ್ದರೆ ಬ್ಯಾಂಕುಗಳು ಸ್ವಯಂಪ್ರೇರಿತವಾಗಿ ಪರಿಹಾರ ರೂಪದಲ್ಲಿ ದಂಡ ಪಾವತಿಸಬೇಕು. ಈ ಕ್ರಮ ಗ್ರಾಹಕರ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ಯುಪಿಐ ಅಥವಾ ಇ ವಾಲೆಟ್‌ನಿಂದ ಹಣ ಪಾವತಿಸುವ ಗ್ರಾಹಕರು ಇದರ ಪ್ರಯೋಜನ ಪಡೆಯಲಿದ್ದಾರೆ.

click me!