ಈ ದಿನದಿಂದ 5 ದಿನ ಬ್ಯಾಂಕ್ ಇರಲ್ಲ: ಅಂದ್ರೆ ATM ನಲ್ಲಿ ಹಣ ಬರಲ್ಲ?

By Web DeskFirst Published Sep 20, 2019, 5:48 PM IST
Highlights

ಸೆಪ್ಟೆಂಬರ್’ನಲ್ಲಿ ಸಾಲು ಸಾಲು ಸರ್ಕಾರಿ ರಜೆ| ಸೆ.26, 27ರಂದು ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ| ಸೆ.28ರಂದು ನಾಲ್ಕನೇ ಶನಿವಾರದ ಹಿನ್ನೆಲೆಯಲ್ಲಿ ಬ್ಯಾಂಕ್’ಗಳಿಗೆ ರಜೆ| ಸೆ.29ರಂದು ಭಾನುವಾರದ ಕಾರಣ ಬ್ಯಾಂಕ್’ಗಳಿಗೆ ರಜೆ| ಸೆ.30 ಬ್ಯಾಂಕ್ ಅರ್ಧ ವಾರ್ಷಿಕ ದಿನ| 

ಬೆಂಗಳೂರು(ಸೆ.20):  ಬ್ಯಾಂಕ್‌ ಮುಷ್ಕರ ಹಾಗೂ ಸಾಲು ಸಾಲು ರಜೆಯ ಪರಿಣಾಮ,  ಬ್ಯಾಂಕ್’ಗಳಿಗೆ ರಜೆ ಇರುವುದರಿಂದ ಬ್ಯಾಂಕಿಂಗ್ ವ್ಯವಹಾಸರಗಳಿಗೆ ಅಡಚಣೆಯುಂಟಾಗುವ ಸಾಧ್ಯತೆ ಇದೆ.

ಪ್ರಮುಖವಾಗಿ ಚೆಕ್‌ ಕ್ಲಿಯರೆನ್ಸ್‌, ನಗದು-ಜಮೆ ಸೇರಿದಂತೆ  ಇತರ ಬ್ಯಾಂಕಿಂಗ್‌ ವ್ಯವಹಾರಗಳಿಗೆ ಬ್ರೇಕ್ ಬೀಳಲಿದ್ದು, ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೂ ತೊಡಕುಂಟಾಗುವ ಸಾಧ್ಯತೆ ಇದೆ.

ಸೆಪ್ಟೆಂಬರ್‌ 26, 27 ರಂದು ಬ್ಯಾಂಕ್‌ ಮುಷ್ಕರ ಇರಲಿದ್ದು, ಸೆ. 28, 29 ಕ್ರಮವಾಗಿ ನಾಲ್ಕನೇ ಶನಿವಾರ ಹಾಗೂ ಭಾನುವಾರ ಬರಲಿದೆ.

ಅಲ್ಲದೇ ಸೆ. 30 ಬ್ಯಾಂಕ್‌ ವ್ಯವಹಾರದ ಅರ್ಧ ವಾರ್ಷಿಕ ದಿನವಾಗಿರುವುದರಿಂದ . ಬ್ಯಾಂಕ್‌ಗಳು ಕಾರ್ಯ ನಿರ್ವಹಿಸಿದರೂ ಗ್ರಾಹಕರಿಗೆ ಯಾವುದೇ ಸೇವೆ ಲಭ್ಯವಿರುವುದಿಲ್ಲ.


ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ

ಸೆ.26, 27: ಬ್ಯಾಂಕ್‌ ಮುಷ್ಕರ

ಸೆ.28: ನಾಲ್ಕನೇ ಶನಿವಾರ

ಸೆ. 29: ಭಾನುವಾರ

ಸೆ.30: ಬ್ಯಾಂಕ್‌ ಅರ್ಧ ವಾರ್ಷಿಕ ದಿನ

click me!