Earn Money:ಈ ಸಂಖ್ಯೆಯ ನೋಟು ನಿಮ್ಮ ಬಳಿಯಿದ್ರೆ ಸಾಕು, ಲಕ್ಷಾಂತರ ರೂಪಾಯಿ ಗಳಿಸೋದು ತುಂಬಾ ಸುಲಭ!

By Suvarna NewsFirst Published May 19, 2022, 6:09 PM IST
Highlights

* '786' ಸಂಖ್ಯೆಯಿಂದ ಕೊನೆಯಾಗುವ ಸೀರಿಯಲ್ ನಂಬರ್ ಬ್ಯಾಂಕ್ ನೋಟಿಗೆ ಆನ್ ಲೈನ್ ಹರಾಜು ತಾಣದಲ್ಲಿ ಭಾರೀ ಬೇಡಿಕೆ
*ಮನೆಯಲ್ಲೇ ಕುಳಿತು 3 ಲಕ್ಷ ರೂ. ತನಕ ಗಳಿಸಬಹುದು
* ಹಳೆಯ ನಾಣ್ಯ ಹಾಗೂ ನೋಟುಗಳ ಖರೀದಿ ಹಾಗೂ ಮಾರಾಟಕ್ಕೆ ಅನೇಕ ವೆಬ್ ಸೈಟ್ ಗಳಲ್ಲಿ ಅವಕಾಶ
 

Business Desk: ಹಳೆಯ ನಾಣ್ಯ (Old coin) ಅಥವಾ ಬ್ಯಾಂಕ್ ನೋಟುಗಳನ್ನು(Bank notes) ಸಂಗ್ರಹಿಸುವ ಹವ್ಯಾಸ ನಿಮಗಿದ್ದರೆ, ಇಲ್ಲಿದೆ ಗುಡ್ ನ್ಯೂಸ್. ನಿಮಗೆ ತುರ್ತು ಹಣದ ಅಗತ್ಯವಿದ್ದರೆ ಅಥವಾ ಸುಲಭವಾಗಿ ಒಂದಿಷ್ಟು ಹಣ ಸಂಪಾದಿಸುವ ಆಸೆಯಿದ್ದರೆ, ಅದು ಈಗ ನನಸಾಗಲಿದೆ. ನಿಮ್ಮ ಹಳೆಯ ನೋಟುಗಳ ಸಂಗ್ರಹದಲ್ಲಿ '786' ಸಂಖ್ಯೆಯಿಂದ ಕೊನೆಯಾಗುವ ಸೀರಿಯಲ್ ನಂಬರ್ (Serial number) ಹೊಂದಿರುವ ನೋಟಿದ್ರೆ ಸಾಕು,ನಿಮ್ಮ ಅದೃಷ್ಟ ಖುಲಾಯಿಸಿದಂತೆ. ಮನೆಯಲ್ಲೇ ಕುಳಿತು ನೀವು ಸುಮಾರು 3 ಲಕ್ಷ ರೂ. ತನಕ ಸಂಪಾದಿಸಬಹುದು. 

ನಿಮ್ಮ ಸಂಗ್ರಹದಲ್ಲಿರುವ ನೋಟುಗಳಲ್ಲಿ ಭಾರತೀಯ ನೋಟುಗಳನ್ನು ಹೊರ ತೆಗೆದು ಅವುಗಳಲ್ಲಿ '786' ಸಂಖ್ಯೆಯಿಂದ ಕೊನೆಯಾಗುವ ಸೀರಿಯಲ್ ನಂಬರ್ ಹೊಂದಿರುವ ನೋಟು ಇದೆಯಾ ಎಂದು ಪರಿಶೀಲಿಸಿ. ಒಂದು ವೇಳೆ ಇದ್ದರೆ ನೀವು ಲಕ್ಷಾಧೀಶರಾಗಲು ಕೆಲವೇ ಹೆಜ್ಜೆಗಳು ಹಿಂದೆ ಇದ್ದೀರಿ ಎಂದರ್ಥ. ಹೌದು, ಇತ್ತೀಚೆಗೆ ಹಳೆಯ ನಾಣ್ಯ ಹಾಗೂ ನೋಟುಗಳ ಖರೀದಿ ಹಾಗೂ ಮಾರಾಟ ಟ್ರೆಂಡ್ ಆಗಿದ್ದು, ಅನೇಕ ವೆಬ್ ಸೈಟ್ ಗಳು (Websites) ಇದಕ್ಕೆ ವೇದಿಕೆ ಕಲ್ಪಿಸಿವೆ. ಪುರಾತನ ಕಾಲದ ನಾಣ್ಯಗಳು ಹಾಗೂ ನೋಟುಗಳ ಆನ್ ಲೈನ್ ಹರಾಜು (Online auction) ಹಲವು ವರ್ಷಗಳಿಂದ ನಡೆಯುತ್ತಿದೆ. ಕೆಲವರು  ಆನ್ ಲೈನ್ ಹರಾಜಿನ ಮೂಲಕ ತಮ್ಮ ಬಳಿಯಿರೋ ಹಳೆಯ ಹಾಗೂ ಅಪರೂಪದ ನಾಣ್ಯಗಳು ಹಾಗೂ ನೋಟುಗಳ ಬದಲಿಗೆ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ ಕೂಡ. ಇನ್ನು ಕೊರೋನಾ ಕಾರಣದಿಂದ ಕಳೆದೆರಡು ವರ್ಷಗಳಲ್ಲಿ ಅನೇಕರು ಉದ್ಯೋಗ ಕಳೆದುಕೊಂಡು ಅಥವಾ ಉದ್ಯಮ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ಹಳೆಯ ನೋಟು ಹಾಗೂ ನಾಣ್ಯಗಳ ಆನ್ ಲೈನ್ ಹರಾಜು ಹಣ ಗಳಿಕೆಗೆ ಒಂದೊಳ್ಳೆಯ ಮಾರ್ಗವಾಗಿದೆ.

ಈ 5ರೂ.ನೋಟು ನಿಮ್ಮ ಬಳಿಯಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು!

ಮೊದಲಿಗೆ ಹೀಗೆ ಮಾಡಿ
ನಿಮ್ಮ ಬಳಿಯಿರುವ ನೋಟು ಅಧಿಕೃತವಾಗಿರುವಂಥದ್ದು ಹೌದೋ ಅಲ್ಲವೋ ಎಂದು ಪರಿಶೀಲಿಸಿ. ಆ ನೋಟು ಭಾರತೀಯ ರಿಸರ್ವ್ ಬ್ಯಾಂಕಿನಿಂದ  (RBI) ವಿತರಣೆಯಾಗಿರಬೇಕು. ಅದು ನಕಲಿಯಲ್ಲ ಎಂಬುದು ಖಾತ್ರಿಯಾದ ಬಳಿಕ ಉತ್ತಮ ಸ್ಥಿತಿಯಲ್ಲಿದೆಯಾ ಎಂಬುದನ್ನು ಪರಿಶೀಲಿಸಿ. 5, 10, 20, 50, 100, 200, 500, 2000 ರೂಪಾಯಿಯ ಎಲ್ಲ ಕರೆನ್ಸಿ ನೋಟುಗಳನ್ನು ನೀವು ವಿನಿಮಯ ಮಾಡಬಹುದು. ಅದ್ರೆ ನೆನಪಿರಲಿ, ಈ ಎಲ್ಲ ನೋಟುಗಳಲ್ಲಿರುವ ಸೀರಿಯಲ್ ನಂಬರ್ '786' ಸಂಖ್ಯೆಯೊಂದಿಗೆ ಕೊನೆಯಾಗಬೇಕು.

'786'ವಿಶೇಷತೆಯೇನು?
786  ಅನ್ನೋದು ಅದೃಷ್ಟ ಅಥವಾ ಪವಿತ್ರ ಸಂಖ್ಯೆ ಎಂಬ ನಂಬಿಕೆ ಇಸ್ಲಾಂ ಧರ್ಮದಲ್ಲಿದೆ. ಇದೇ ಕಾರಣಕ್ಕೆ ಈ ಸಂಖ್ಯೆಯ ನೋಟಿಗೆ ಹೆಚ್ಚಿನ ಬೇಡಿಕೆಯಿದೆ.

ಆನ್ ಲೈನ್ ನಲ್ಲಿ ಹರಾಜು ಮಾಡೋದು ಹೇಗೆ?
*ಮೊದಲಿಗೆ ಕಾಯಿನ್ ಬಜಾರ್ (Coinbazaar),ಕ್ವಿಕರ್ (Quikr),ಇ-ಬೇ (eBay) ಮುಂತಾದ ಹಳೆಯ ನಾಣ್ಯ ಟ್ರೇಡಿಂಗ್ ಸೈಟ್ ಗಳನ್ನು ಹುಡುಕಿ.
*ನಾಣ್ಯ ಟ್ರೇಡಿಂಗ್ ನಡೆಸುವ ಯಾವುದೇ ಆನ್ ಲೈನ್ ಸೈಟ್ ನಲ್ಲಿ ನಿಮ್ಮ ಹೆಸರು ನೋಂದಾಯಿಸಿ ಖಾತೆ ತೆರೆಯಿರಿ.  
*'786' ಸೀರಿಯಲ್ ನಂಬರ್ ಹೊಂದಿರುವ ಬ್ಯಾಂಕ್ ನೋಟಿನ ಫೋಟೋ ತೆಗೆಯಿರಿ.
*ಈಗ ಈ ಪೋಟೋವನ್ನು ನೀವು ಖಾತೆ ತೆರೆದಿರುವ ಸೈಟಿಗೆ ಅಪ್ ಲೋಡ್ ಮಾಡಿ.
*ಆ ಬಳಿಕ ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ನಮೂದಿಸಿ.
*ನಿಮ್ಮ ಬಳಿಯಿರುವ ನೋಟಿಗೆ ನಿಮ್ಮ ಬೆಲೆ ನಮೂದಿಸಿ.
*ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ  ಸಂಪರ್ಕಿಸುತ್ತಾರೆ. ಅವರೊಂದಿಗೆ ನೀವು ಬೆಲೆಯ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಬಹುದು.

ಒಂದು ಷರತ್ತು ಪಾಲಿಸಿ, ಮನೆಯಲ್ಲಿದ್ದೇ 1 ಲಕ್ಷ ರೂಪಾಯಿ ಗಳಿಸಿ!

ಆರ್ ಬಿಐ ಎಚ್ಚರಿಕೆ
ಕೆಲವು ದಿನಗಳ ಹಿಂದೆ ಆನ್ ಲೈನ್ ನಾಣ್ಯ ಟ್ರೇಡಿಂಗ್ ಗೆ ಸಂಬಂಧಿಸಿ ಆರ್ ಬಿಐ ಹೆಸರು ಹಾಗೂ ಲೋಗೋ ದುರ್ಬಳಕೆ ಮಾಡಿಕೊಂಡು ಶುಲ್ಕ, ಕಮೀಷನ್ ಹಾಗೂ ತೆರಿಗೆ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಹಿತಿ ನೀಡಿದೆ. ಅಲ್ಲದೆ, ಇಂಥ ಯಾವುದೇ ಟ್ರೇಡಿಂಗ್ ನಲ್ಲಿ ಆರ್ ಬಿಐ (RBI) ತೊಡಗಿಲ್ಲ ಎಂದು ತಿಳಿಸಿದೆ. 


 

click me!