
ನವದೆಹಲಿ (ಮೇ 19): ಈಗಾಗಲೇ ಬೆಲೆಯೇರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ (domestic LPG cylinder) ದರ ಮತ್ತೊಮ್ಮೆ ಏರಿಕೆಯಾಗಿದೆ. 3.50 ರೂ. ಹೆಚ್ಚಳದ ಮೂಲಕ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಬೆಲೆ ಗುರುವಾರ (ಮೇ 19) ಭಾರತದ ಎಲ್ಲ ನಗರಗಳಲ್ಲೂ1000 ರೂ. ಗಡಿ ದಾಟಿದೆ. ಈ ತಿಂಗಳಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಮೇ 7ರಂದು 50ರೂ. ಏರಿಕೆ ಮಾಡಲಾಗಿತ್ತು.
ತಕ್ಷಣದಿಂದಲೇ ಜಾರಿಗೆ ಬರುವಂತೆ ತೈಲ ಮಾರುಕಟ್ಟೆ ಕಂಪನಿಗಳು (OMC) 14 ಕೆಜಿ ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ದರವನ್ನು 3.50 ರೂ. ಏರಿಕೆ ಮಾಡಿದೆ. ಪರಿಣಾಮ ನವದೆಹಲಿ (New Delhi) ಹಾಗೂ ಮುಂಬೈನಲ್ಲಿ (Mumbai) 14 ಕೆಜಿ ಸಿಲಿಂಡರ್ ಬೆಲೆ 1003 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಸಿಲಿಂಡರ್ ಬೆಲೆ ಕೋಲ್ಕತ್ತದಲ್ಲಿ(Kolkata) 1029ರೂ. ಹಾಗೂ ಚೆನ್ನೈನಲ್ಲಿ (Chennai) 1018.5 ರೂ. ತಲುಪಿದೆ. ಬೆಂಗಳೂರಿನಲ್ಲಿ ಕೂಡ ಸಾವಿರದ ಗಡಿ ದಾಟಿದೆ. ಗೃಹ ಬಳಕೆ ಎಲ್ ಪಿಜಿ ಸಿಲಿಂಡರ್ ಜೊತೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ (Commercial cylinder) ಬೆಲೆಯನ್ನು ಕೂಡ ಹೆಚ್ಚಳ ಮಾಡಲಾಗಿದೆ.
MCLR ದರ ಹೆಚ್ಚಿಸಿದ ಆಕ್ಸಿಸ್ ಬ್ಯಾಂಕ್; ಏರಿಕೆಯಾಗಲಿದೆ ಗೃಹ, ವಾಹನ ಸಾಲಗಳ ಇಎಂಐ
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಕೂಡ ಹೆಚ್ಚಳ
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ಇಂದಿನಿಂದ (ಮೇ 19) ಜಾರಿಗೆ ಬರುವಂತೆ 8ರೂ. ಏರಿಕೆ ಮಾಡಲಾಗಿದೆ. ಮೇ 1ರಂದು 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ 104 ರೂ.ಗಳಷ್ಟು ಹೆಚ್ಚಿಸಲಾಯಿತು. ಆ ನಂತರ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 2,355 ರೂ.ಗೆ ಏರಿಕೆಯಾಗಿದೆ. 5ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ 655ರೂ. ಗೆ ಏರಿಕೆಯಾಗಿದೆ.
ಮಾರ್ಚ್ ನಲ್ಲಿ ಹೆಚ್ಚಳವಾಗಿತ್ತು
ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಬೆಲೆಯಲ್ಲಿ ಏರಿಕೆ ಪ್ರಾರಂಭವಾಗಿತ್ತು. ಆ ನಂತರ ಎಲ್‌ಪಿಜಿ ಬೆಲೆಯೂ ಹೆಚ್ಚಾಗತೊಡಗಿತು. ಈ ಅನುಕ್ರಮದಲ್ಲಿ, 22 ಮಾರ್ಚ್ 2022 ರಂದು, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಯಿತು. ಆ ನಂತರ ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 949.50 ರೂ.ಗೆ ಏರಿತ್ತು.
LPG ಬೆಲೆಯನ್ನು ಈ ರೀತಿ ಪರಿಶೀಲಿಸಿ
ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಪರಿಶೀಲಿಸಲು, ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಲಿಂಕ್‌ನಲ್ಲಿ ನಿಮ್ಮ ನಗರದ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ನೀವು ಪರಿಶೀಲಿಸಬಹುದು.
Recession 2022: ಆರ್ಥಿಕ ಬಡತನದ ಅಂಚಿನಲ್ಲಿದೆ ಜಗತ್ತು, ಈ ಐದು ಕಾರಣಗಳಿಂದಲೇ ದುಸ್ಥಿತಿ
ಸಬ್ಸಿಡಿ ಹೆಚ್ಚಳ
ಜನಸಾಮಾನ್ಯರಿಗಾಗುತ್ತಿರೋ ತೊಂದರೆಯನ್ನು ಮನಗಂಡ ಸರ್ಕಾರ, ಸಬ್ಸಿಡಿ ರೂಪದಲ್ಲಿ ನೀಡಲಾದ ವಿನಾಯಿತಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಈಗ ಪ್ರತಿ ಸಿಲಿಂಡರ್‌ಗೆ ಹೆಚ್ಚಿನ ರಿಯಾಯಿತಿ ಲಾಭವನ್ನು ಪಡೆಯುತ್ತಾರೆ. ಈ ಹಿಂದೆ ಸಿಲಿಂಡರ್ ಖರೀದಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಕೇವಲ 20 ರಿಂದ 30 ರೂ.ಗೆ ಇಳಿಸಲಾಗಿದ್ದು, ನವೆಂಬರ್ ನಲ್ಲಿ ಮತ್ತೆ ಸುಮಾರು 300 ರೂ.ಗೆ ಏರಿಕೆ ಮಾಡಲಾಗಿದೆ. ಉಜ್ವಲ(Ujwala) ಯೋಜನೆಯಡಿ ಗ್ಯಾಸ್ ಸಿಲಿಂಡರ್ ತೆಗೆದುಕೊಳ್ಳುವವರಿಗೆ ಈ ಸಬ್ಸಿಡಿ ಯೋಜನೆಯಿಂದ ಗರಿಷ್ಠ ಲಾಭ ಸಿಗಲಿದೆ. ಈ ಹಿಂದೆ 174.86 ರೂ.ಗಳ ಸಹಾಯಧನವನ್ನು, ಈಗ 312.48 ರೂ.ಗೆ ಹೆಚ್ಚಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.