ಬ್ಯಾಂಕ್ ವಿಲೀನ ಖಂಡಿಸಿ ನೌಕರರ ಮುಷ್ಕರ

By Kannadaprabha NewsFirst Published Oct 22, 2019, 11:17 AM IST
Highlights

ಸರ್ಕಾರಿ ಸ್ವಾಮ್ಯದ 10 ಬ್ಯಾಂಕುಗಳನ್ನು 4 ಬ್ಯಾಂಕುಗಳಾಗಿ ವಿಲೀನಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇದರಿಂದ ಹಲವು ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. 

ಚೆನ್ನೈ (ಅ. 22): ಬ್ಯಾಂಕ್ ಮುಷ್ಕರ ಹಿಂಪಡೆಯುವಂತೆ ಸರ್ಕಾರ ನಡೆಸಿದ ಸಂಧಾನ ಯತ್ನ ವಿಫಲವಾಗಿದ್ದು, ಮಂಗಳ ವಾರದಂದು ನಿಗದಿಯಂತೆ ಬ್ಯಾಂಕ್ ಮುಷ್ಕರ ನಡೆಯಲಿದೆ. ಮುಖ್ಯ ಕಾರ್ಮಿಕ ಆಯುಕ್ತ, ಕಾರ್ಮಿಕ
ಸಚಿವಾಲಯದೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದುವರಿಸಲು ಬ್ಯಾಂಕ್ ಯೂನಿಯನ್‌ಗಳು ನಿರ್ಧರಿಸಿವೆ. 

ನಿರಂತರವಾಗಿ ಇಳಿಯುತ್ತಲೇ ಇದೆ ಚಿನ್ನ: ಅಳೆದು ತೂಗಿ ಕೊಂಡರೆ ಚೆನ್ನ!

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಹಾಗೂ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟಗಳ 3,50,000 ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರಿ ಸ್ವಾಮ್ಯದ 10 ಬ್ಯಾಂಕುಗಳನ್ನು 4 ಬ್ಯಾಂಕುಗಳಾಗಿ ವಿಲೀನಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ಇದರಿಂದ ಹಲವು ಬ್ಯಾಂಕುಗಳ ಸೇವೆಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಆದರೆ, ಎಸ್‌ಬಿಐನ ಬಹುತೇಕ ನೌಕರರು ಈ ನೌಕರರ ಸಂಘಗಳಲ್ಲಿ ಗುರುತಿಸಿಕೊಂಡಿಲ್ಲ. 

 

click me!