ಜಾಗತಿಕ ಆರ್ಥಿಕ ಬಿಕ್ಕಟ್ಟು: ನಿರ್ಮಲಾ ಬಿಚ್ಚಿಟ್ಟರು ಪರಿಹಾರದ ಗುಟ್ಟು!

By Web DeskFirst Published Oct 20, 2019, 8:44 PM IST
Highlights

ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ನಿರ್ಮಲಾ ಸೀತಾರಾಮನ್ ಪರಿಹಾರ| 'ಬಹುಪಕ್ಷೀಯ ಮಟ್ಟದಲ್ಲಿ ಸಹಕಾರ ಬಲಪಡಿಸುವ ಅಗತ್ಯವಿದೆ'| ಐಎಂಎಫ್ ಮತ್ತು ವಿಶ್ವಬ್ಯಾಂಕ್ 2019 ರ ವಾರ್ಷಿಕ ಸಭೆಯಲ್ಲಿ ನಿರ್ಮಲಾ ಭಾಷಣ| , ಜಾಗತಿಕ ಸಹಕಾರ ಬಲಪಡಿಸುವುದೊಂದೇ ಬಿಕ್ಕಟ್ಟಿಗೆ ಪರಿಹಾರ ಎಂದ ವಿತ್ತ ಸಚಿವೆ| 'ಸಮತೋಲಿತ ವಿಧಾನ ಅಳವಡಿಸಿಕೊಂಡರೆ ಅಭಿವೃದ್ಧಿ ಸಾಮರ್ಥ್ಯ ಸಾಧಿಸಲು ಸಾಧ್ಯ'|

ನವದೆಹಲಿ(ಅ.20): ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅಸಮತೋಲನ ಹಿನ್ನೆಲೆಯಲ್ಲಿ ಬಹುಪಕ್ಷೀಯ ಮಟ್ಟದಲ್ಲಿ ಸಹಕಾರ ಬಲಪಡಿಸುವ ಅಗತ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಡಿಸಿ ಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ 2019 ರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಸೀತಾರಾಮನ್, ಜಾಗತಿಕ ಸಹಕಾರ ಬಲಪಡಿಸುವುದೊಂದೇ ಬಿಕ್ಕಟ್ಟಿಗೆ ಪರಿಹಾರ ಎಂದು ಹೇಳಿದರು.


ದೇಶಗಳ ಹಣಕಾಸು, ವಿತ್ತೀಯ ಮತ್ತು ರಚನಾತ್ಮಕ ಕ್ರಮಗಳನ್ನು ಒಟ್ಟು ಸೇರಿಸಿ ಜಾರಿಗೊಳಿಸುವ ವಿಧಾನ ಸದ್ಯದ ಅನಿವಾರ್ಯತೆ ಎಂದು ನಿರ್ಮಲಾ ಹೇಳಿದ್ದಾರೆ. 

ಸಮತೋಲಿತ ವಿಧಾನ ಅಳವಡಿಸಿಕೊಂಡರೆ, ದೇಶಗಳು ಅಭಿವೃದ್ಧಿ ಸಾಮರ್ಥ್ಯ ಸಾಧಿಸಲು ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವರು ಸಭೆಯಲ್ಲಿ ಅಭಿಪ್ರಾಯಪಟ್ಟರು.

click me!
Last Updated Oct 20, 2019, 8:46 PM IST
click me!