ಹಲವು ಸೌಲಭ್ಯಗಳೊಂದಿಗೆ ಗ್ರಾಹಕರ ಬಳಿಗೆ ‘ಬ್ಯಾಂಕ್ ಆಫ್ ಇಂಡಿಯಾ’ ಹೊಸಹೆಜ್ಜೆ

By Web DeskFirst Published Oct 2, 2019, 2:39 PM IST
Highlights

ಉಳಿತಾಯ ಖಾತೆ ತೆರೆಯುವುದು, ಹಣಕಾಸಿನ ನೆರವು, ಗ್ರಾಹಕರನ್ನು ವಿವಿಧ ಹಣಕಾಸು ಯೋಜನೆಗಳೊಂದಿಗೆ ಜೋಡಿಸುವುದು, ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳತ್ತ ಆಕರ್ಷಿಸುವಂತಹ ಸೌಲಭ್ಯಗಳೊಂದಿಗೆ ಮಹತ್ವದ ಉದ್ದೇಶವಿಟ್ಟುಕೊಂಡು ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರ ಬಳಿಗೆ ಹೊಸಹೆಜ್ಜೆ ಇಡುತ್ತಿದೆ.

ಬೆಂಗಳೂರು, (ಅ.02) : ಬ್ಯಾಂಕಿಂಗ್ ಕ್ಷೇತ್ರ ಹೊಸ ಸಾಧ್ಯನೆಗಳತ್ತ ಹೊರಳುತ್ತಿದೆ. ಮೊದಲೆಲ್ಲಾ ಬ್ಯಾಂಕ್‍ಗೆ ಹೋಗೋದೇ ಕಷ್ಟ ಎನ್ನುವ ಮನೋಭಾವ ಇದ್ದರೆ ಈಗ ದೇಶದ ಪ್ರತಿಷ್ಠಿತ ಸಾರ್ವಜನಿಕ ಬ್ಯಾಂಕ್‍ಗಳೆಲ್ಲಾ ಒಟ್ಟಾಗಿ ಗ್ರಾಹಕರ ಬಳಿಗೇ ಹೊರಟು ನಿಂತಿವೆ. 

ದೇಶದೆಲ್ಲೆಡೆ ಸಾರ್ವಜನಿಕ ಬ್ಯಾಂಕ್‍ಗಳು ಆಯ್ದ 400 ಜಿಲ್ಲೆಗಳಲ್ಲಿ 2 ಹಂತಗಳಲ್ಲಿ ಗ್ರಾಹಕರನ್ನು ಸಂಪರ್ಕಿಸಬೇಕೆಂಬ ಮಹಾನ್ ಗುರಿಯನ್ನು ಇಟ್ಟು ಕೊಂಡಿದ್ದು ಅದರ ಭಾಗವಾಗಿ  ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ ಗ್ರಾಹಕ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 

ಇಂದು ಹದವಾಗಿರಲಿ ಒಗ್ಗರಣೆ: ಆಧಾರ್ ಜೊತೆ ಪ್ಯಾನ್ ಲಿಂಕ್ ಗಡುವು ವಿಸ್ತರಣೆ!

ನಗರದ ಜಾನಜ್ಯೋತಿ ಸಭಾಂಗಣದಲ್ಲಿ ಅಕ್ಟೋಬರ್ 3 ಗುರುವಾರ ಮತ್ತು ಅಕ್ಟೋಬರ್ 4 ಶುಕ್ರವಾರದಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಬ್ಯಾಂಕ್ ಕೊಡುಗೆಗಳು ಮತ್ತು ಅಲ್ಲಿರುವ ಸೇವೆ ಬಗ್ಗೆ ಜನರಿಗೆ ಹೆಚ್ಚಿನ ತಿಳುವಳಿಕೆ ನೀಡುವ ಉದ್ದೇಶ ಹೊಂದಿದೆ.

 ಜಿಲ್ಲೆಯೊಳಗೆ ಇರುವ ಎಲ್ಲಾ ಸರ್ಕಾರಿ, ಖಾಸಗಿ ಬ್ಯಾಂಕ್‍ಗಳು , ಎನ್‍ಬಿಎಫ್‍ಸಿ ಹೆಚ್.ಎಫ್‍ಸಿ , ಎಂಎಫ್‍ಐ , ಸಿಡ್ಬಿ, ನಬಾರ್ಡ್ ಸಹಿತ ಎಲ್ಲಾ ಹಣಕಾಸು ಸಂಸ್ಥೆಗಳು ಒಂದೇ ಸೂರಿನಡಿ ಸೇರಿ ತಮ್ಮ ಗ್ರಾಹಕರಿಗೆ ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಮಾಹಿತಿ ಒದಗಿಸುವ ಉದ್ದೇಶವಾಗಿದೆ.

ATMನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ದಿನಕ್ಕೆ 100 ರೂ. ಪರಿಹಾರ!

ಉಳಿತಾಯ ಖಾತೆ ತೆರೆಯುವುದು, ಹಣಕಾಸಿನ ನೆರವು, ಗ್ರಾಹಕರನ್ನು ವಿವಿಧ ಹಣಕಾಸು ಯೋಜನೆಗಳೊಂದಿಗೆ ಜೋಡಿಸುವುದು, ಡಿಜಿಟಲ್ ಬ್ಯಾಂಕಿಂಗ್ ಉತ್ಪನ್ನಗಳತ್ತ ಆಕರ್ಷಿಸುವಂತಹ ಉದ್ದೇಶವೂ ಇದರ ಹಿಂದೆ ಇದೆ. 

ಸಮಾಜದ ಎಲ್ಲಾ ವರ್ಗದ ಜನರಿಗೂ ಬ್ಯಾಂಕಿಂಗ್ ಸೇವೆ ಒದಗಿಸುವುದು ಸರ್ಕಾರಿ ಸ್ವಾಮ್ಯದ ಬ್ಯಾಂಕಿನ ಗುರಿ. ಅಭಿವೃದ್ಧಿ ಮತ್ತು ಪ್ರಗತಿಯಲ್ಲಿ ಬ್ಯಾಂಕ್‍ಗಳ ಸೇವೆಯನ್ನು ಬಳಸಿಕೊಳ್ಳುವುದು ಅಗತ್ಯ. 

ಮುದ್ರಾ ಮತ್ತು ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಅಡಿಯಲ್ಲಿ ಬ್ಯಾಂಕ್‍ಗಳು ನೀಡುವ ಸಾಲಗಳು , ಕೃಷಿ ಸಾಲಗಳು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಗಳಿಗೆ (ಎಂಎಸ್‍ಎಂಇ) ನೀಡುವ ಸಾಲಗಳ ಕುರಿತು ಈ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುತ್ತದೆ. 

ಜೊತೆಗೆ ನಬಾರ್ಡ್, ಸಿಡ್ಬಿ ಸಂಸ್ಥೆಗಳ ಸ್ವಸಹಾಯ ಸಂಘಗಳಿಗೆ ನೀಡುವ ಕೃಷಿ ಸಾಲ , ಎಂ.ಎಸ್‍ಎಂಇ ಕ್ಷೇತ್ರಗಳಿಗೆ ನೀಡುವ ಸಾಲಗಳ ಕುರಿತು ಇಲ್ಲಿ ಮಾಹಿತಿ ನೀಡಲಿದ್ದಾರೆ. 

ಹಣಕಾಸು ಸೇರ್ಪಡೆ ಯೋಜನೆಗಳಾದ ಪಿಎಂಜೆಡಿವೈ/ ಬಿಎಸ್.ಡಿಬಿ ಖಾತೆ ತೆರೆಯುವುದು , ಸಾಮಾಜಿಕ ಸುರಕ್ಷಾ ಯೋಜನೆಗಲಾದ ಪಿಎಂಎಸ್‍ಬಿವೈ, ಪಿಎಂಜೆಜೆವೈ, ಎಪಿವೈ, ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್, ಬ್ಯಾಂಕ್ ಡಿಜಿಟಲೀಕರಣ, ಭೀಮ್ ಆಪ್ ನಂತಹ ವ್ಯವಸ್ತೆಯಿಂದ ಡಿಜಿಟಲ್ ಪಾವತಿ ಮೊದಲಾದ ವಿಚಾರಗಳನ್ನು ಶಿಬಿರದಲ್ಲಿ ಮನವರಿಕೆ ಮಾಡಿಕೊಡಲಾಗವುದು. 

ಯುಐಡಿಎಐ ನೆರವಿನೊಂದಿಗೆ ಗ್ರಾಹಕರಿಗೆ ಆಧಾರ್ ನೋಂದಣಿ ಮತ್ತು ಆಧಾರ್ ಪರಿಷ್ಕರಣೆ ಮಾಡುವುದಕ್ಕೂ ಶಿಬಿರದಲ್ಲಿ ಅವಕಾಶವಿದೆ ಎಂದು ಬ್ಯಾಂಕ್ ಆಫ್ ಇಂಡಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

click me!