ATMನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ದಿನಕ್ಕೆ 100 ರೂ. ಪರಿಹಾರ!

ATMನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ದಿನಕ್ಕೆ 100 ರೂ. ಪರಿಹಾರ| ಮಹತ್ವದ ಆದೇಶ ಹೊರಡಿಸಿದ ಭಾರತೀಯ ರಿಸರ್ವ್ ಬ್ಯಾಂಕ್| ಪರಿಹಾರವಾಗಿ 100 ರೂ. ನೀಡಲು ಎಲ್ಲ ಬ್ಯಾಂಕ್’ಗಳಿಗೆ RBI ಸೂಚನೆ| ನಿಗದಿತ ಸಮಯಕ್ಕಿಂತ ವಿಳಂಬ ಮಾಡಿದರೆ ಪರಿಹಾರ ಮೊತ್ತವಾಗಿ ದಿನಕ್ಕೆ 100 ರೂ.| ಪರಿಹಾರ ನೀಡಲು ವಿಫಲವಾದರೇ ಗ್ರಾಹಕರು ವRBIನ ಬ್ಯಾಂಕಿಂಗ್ ಓಂಬುಡ್ಸ್’ಮನ್’ಗೆ ದೂರು  ನೀಡಬಹುದು|

RBI Asks Banks To Pay Rs100 Per Day Compensation For Failed Transactions

ನವದೆಹಲಿ(ಸೆ.26): ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂ. ಕೊಡಲು ಎಲ್ಲ ಬ್ಯಾಂಕ್’ಗಳಿಗೆ RBI ಆದೇಶ ನೀಡಿದೆ. 

ಖಾತೆಯಿಂದ ಹಣ ಕಡಿತವಾಗಿದ್ದರೂ ಎಟಿಎಂನಲ್ಲಿ ಹಣ ಸಿಗದಿದ್ದಾಗ, ಪರಿಹಾರವಾಗಿ ಗ್ರಾಹಕರಿಗೆ ದಿನಕ್ಕೆ 100 ರೂ. ನೀಡಬೇಕು ಎಂದು RBI ಎಲ್ಲ ಬ್ಯಾಂಕ್’ಗಳಿಗೆ ನಿರ್ದೇಶನ ನೀಡಿದೆ.

ಎಟಿಎಂನಲ್ಲಿ ಹಣ ಬರದಿದ್ದರೆ ಕೂಡಲೇ ಸಂಬಂಧಪಟ್ಟ ಬ್ಯಾಂಕ್’ಗೆ ತೆರಳಿ ಲಿಖಿತ ರೂಪದಲ್ಲಿ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್ ಟರ್ನ್ ಅರೌಂಡ್ ಟೈಮ್ 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು ಎಂಬುದು ನಿಯಮವಾಗಿದೆ. 

ಒಂದು ವೇಳೆ ಬ್ಯಾಂಕ್ ನಿಗದಿತ ಸಮಯಕ್ಕಿಂತ ವಿಳಂಬ ಮಾಡಿದರೆ ಪರಿಹಾರ ಮೊತ್ತವಾಗಿ ದಿನಕ್ಕೆ 100 ರೂ. ನೀಡಬೇಕು ಎಂದು RBI ಸೂಚಿಸಿದೆ. 

ಒಂದು ವೇಳೆ ಬ್ಯಾಂಕ್’ಗಳು ಪರಿಹಾರ ಮೊತ್ತ ನೀಡಲು ವಿಫಲವಾದರೇ ಗ್ರಾಹಕರು RBIನ ಬ್ಯಾಂಕಿಂಗ್ ಓಂಬುಡ್ಸ್’ಮನ್’ಗೆ ದೂರು ನೀಡಬಹುದು ಎಂದು RBI ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios