ರೈತರ ಆದಾಯ ಡಬಲ್ ಮಾಡಲು ಬ್ಯಾಂಕ್ ಆಫ್ ಬರೋಡಾ ಅಭಿಯಾನ

By Kannadaprabha NewsFirst Published Oct 4, 2019, 1:40 PM IST
Highlights

ರೈತರ ಉತ್ಪಾದನೆಗೆ ಭದ್ರತೆ ನೀಡುವುದು, ರೈತರಿಗೆ ಕೃಷಿ ಕ್ಷೇತ್ರದಲ್ಲಿನ ಆಸಕ್ತಿ ಹೆಚ್ಚಳ ಮಾಡುವ ಉದ್ದೇಶದಿಂದ ಬ್ಯಾಂಕ್ ಆಫ್ ಬರೋಡ ಕಿಸಾನ್ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿದೆ.

ಬೆಂಗಳೂರು [ಅ.04]:  ರೈತರ ಆದಾಯ ದ್ವಿಗುಣ ಗೊಳಿಸುವ ಸಲುವಾಗಿ ಬ್ಯಾಂಕ್‌ ಆಫ್‌ ಬರೋಡ ವತಿಯಿಂದ ಅಕ್ಟೋಬರ್‌ 1ರಿಂದ ಹದಿನೈದು ದಿನಗಳ ಕಾಲ ದೇಶದಾದ್ಯಂತ ‘ಬರೋಡ ಕಿಸಾನ್‌ ಪಾಕ್ಷಿಕ’ ಅಭಿಯಾನ ಹಮ್ಮಿಕೊಂಡಿದೆ.

ಸುದ್ದಿಗೀಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‌ನ ಕಾರ್ಯನಿರ್ವಹಣ ನಿರ್ದೇಶಕ ವಿಕ್ರಮಾದಿತ್ಯ ಸಿಂಗ್‌ ಖಿಚಿ, ಕಳೆದ ವರ್ಷ ಹಮ್ಮಿಕೊಂಡಿದ್ದ ಅಭಿಯಾನದಿಂದ ದೇಶದಾಧ್ಯಂತ ಸುಮಾರು 2,40,817 ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರಸಕ್ತ ವರ್ಷದ ಅಭಿಯಾನದಲ್ಲಿ ರೈತರ ಉತ್ಪಾದನೆಗೆ ಭದ್ರತೆ ನೀಡುವುದು, ರೈತರಿಗೆ ಕೃಷಿ ಕ್ಷೇತ್ರದಲ್ಲಿನ ಆಸಕ್ತಿ ಹೆಚ್ಚಳ ಮಾಡುವುದು, ಆದಾಯ ಪ್ರಮಾಣ ವೃದ್ಧಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

ವಾಚ್, ಮೊಬೈಲ್... ಈ ದುಬಾರಿ ವಸ್ತುಗಳ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ...

ಅಭಿಯಾನದ ಅಂಗವಾಗಿ ಬ್ಯಾಂಕ್‌ನ ಶಾಖೆಗಳಲ್ಲಿ ರೈತರ ಜಾತ್ರೆ, ಅಧಿಕಾರಿಗಳ ತಂಡದೊಂದಿಗೆ ಗ್ರಾಮಗಳಿಗೆ ರಾತ್ರಿ ಭೇಟಿ ನೀಡುವುದು, ರೈತರಿಗೆ ಆರೋಗ್ಯ ಶಿಬಿರ, ರೈತರ ಸಮ್ಮೇಳನ, ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತಹ ಶಿಬಿರ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಐಆರ್‌ಸಿಟಿಸಿ ಐಪಿಒಗೆ 112 ಪಟ್ಟು ಬೇಡಿಕೆ!

 ಈ ವೇಳೆ ದಕ್ಷಿಣ ವಲಯದ ಮುಖ್ಯ ಮಹಾ ಪ್ರಬಂಧಕ ಬೀರೇಂದ್ರ ಕುಮಾರ್‌ ಹಾಜರಿದ್ದರು.

click me!