Bank of Baroda: ಗೃಹ ಸಾಲ ಬಡ್ಡಿದರ ಶೇ.8.50ಕ್ಕೆ ಇಳಿಕೆ!

Published : Mar 15, 2023, 05:04 AM IST
Bank of Baroda:  ಗೃಹ ಸಾಲ ಬಡ್ಡಿದರ ಶೇ.8.50ಕ್ಕೆ ಇಳಿಕೆ!

ಸಾರಾಂಶ

ಬ್ಯಾಂಕ್‌ ಆಫ್‌ ಬರೋಡಾ ತನ್ನ ಗೃಹ ಸಾಲದ ಬಡ್ಡಿಯನ್ನು 40 ಮೂಲಾಂಶಗಳಷ್ಟುಕಡಿಮೆ ಮಾಡಿದ್ದು, ವಾರ್ಷಿಕ ಶೇ.8.50ಕ್ಕೆ ಇಳಿಕೆ ಮಾಡಿದೆ. ಜೊತೆಗೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಟಿ) ಸಾಲದ ಬಡ್ಡಿ ದರವನ್ನೂ ವಾರ್ಷಿಕ ಶೇ.8.40ಕ್ಕೆ ಕಡಿತಗೊಳಿಸಿದೆ.

ಬೆಂಗಳೂರು (ಮಾ.15) : ಬ್ಯಾಂಕ್‌ ಆಫ್‌ ಬರೋಡಾ ತನ್ನ ಗೃಹ ಸಾಲದ ಬಡ್ಡಿಯನ್ನು 40 ಮೂಲಾಂಶಗಳಷ್ಟುಕಡಿಮೆ ಮಾಡಿದ್ದು, ವಾರ್ಷಿಕ ಶೇ.8.50ಕ್ಕೆ ಇಳಿಕೆ ಮಾಡಿದೆ. ಜೊತೆಗೆ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್‌ಎಂಟಿ) ಸಾಲದ ಬಡ್ಡಿ ದರವನ್ನೂ ವಾರ್ಷಿಕ ಶೇ.8.40ಕ್ಕೆ ಕಡಿತಗೊಳಿಸಿದೆ.

ಹೊಸ ಬಡ್ಡಿದರಗಳು 2023 ಮಾಚ್‌ರ್‍ 5ರಿಂದಲೇ ಅನ್ವಯವಾಗಲಿದ್ದು, ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರಲಿವೆ. ಹೊಸ ಬಡ್ಡಿದರಗಳು ಬ್ಯಾಂಕ್‌ ಉದ್ಯಮದಲ್ಲಿನ ಅತ್ಯಂತ ಕಡಿಮೆ ಮತ್ತು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಒಂದಾಗಿವೆ. ಬ್ಯಾಂಕ್‌ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದಲ್ಲದೇ ಗೃಹ ಸಾಲದ ಮೇಲಿನ ಪ್ರಕ್ರಿಯಾ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಿದೆ. ಅಲ್ಲದೇ ಎಂಎಸ್‌ಎಂಇ ಸಾಲಗಳ ಪ್ರಕ್ರಿಯಾ ಶುಲ್ಕವನ್ನು ಶೇ.50ರಷ್ಟುರಿಯಾಯಿತಿ ನೀಡಿದೆ.

ತೀವ್ರ ಆರ್ಥಿಕ ಹಿಂಜರಿತ ಪರಿಣಾಮ: ಅಮೆರಿಕದ ಮತ್ತೊಂದು ಬ್ಯಾಂಕ್‌ ಮಹಾಪತನ; 1 ವಾರದಲ್ಲಿ 3ನೇ ಬ್ಯಾಂಕ್‌ ದಿವಾಳಿ

ಹೊಸ ಗೃಹಸಾಲದ ಬಡ್ಡಿ ದರಗಳು ವಾರ್ಷಿಕ ಶೇ.8.50ರಿಂದ ಆರಂಭಗೊಳ್ಳಲಿದ್ದು, ಇದು ಹೊಸ ಗೃಹ ಸಾಲದ ಅರ್ಜಿಗಳಿಗೆ, ವರ್ಗಾವಣೆಗೊಳ್ಳುವ ಗೃಹಸಾಲಗಳು ಅಲ್ಲದೇ ಮನೆ ಅಭಿವೃದ್ದಿಯ ಸಾಲಗಳಿಗೂ ಅನ್ವಯವಾಗಲಿವೆ. ಬಡ್ಡಿದರ ಸಾಲಗಾರರ ಕ್ರೆಡಿಟ್‌ ಸ್ಕೋರ್‌ಗೆ ಹೊಂದಿಕೊಂಡಿರುತ್ತದೆ ಎಂದು ಬ್ಯಾಂಕ್‌ ತಿಳಿಸಿದೆ.

ಈ ಕುರಿತು ಮಾತನಾಡಿದ ಬ್ಯಾಂಕ್‌ ಆಫ್‌ ಬರೋಡಾ(Bank of Baroda)ದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್‌ ಕೆ.ಖುರಾನ ಅವರು, ಗೃಹಸಾಲದ ಬಡ್ಡಿಯನ್ನು ಕಡಿಮೆ ಮಾಡಿ ಶೇ.8.50ರಷ್ಟು ಹೊಸ ಬಡ್ಡಿ ದರವನ್ನು ಸೀಮಿತ ಅವಧಿಗೆ ಬ್ಯಾಂಕ್‌ ನೀಡುತ್ತಿದೆ. ಎಲ್ಲೆಡೆ ಗೃಹಸಾಲದ ಬಡ್ಡಿಗಳು ಹೆಚ್ಚುತ್ತಲೇ ಇರುವ ಸಂದರ್ಭದಲ್ಲಿ ಹೊಸ ಬಡ್ಡಿದರ ಹೊಸ ಮನೆಯನ್ನು ಖರೀದಿಸಲು ಮುಂದಾಗುವ ಗ್ರಾಹಕರಿಗೆ ಸಹಕಾರಿಯಾಗಲಿದೆ. ಎಂಎಸ್‌ಎಂಇ ವಲಯದ ಸಾಲದ ಮೇಲಿನ ಬಡ್ಡಿದರವೂ ಕಡಿಮೆ ಮಾಡಿರುವುದರಿಂದ ಉದ್ಯಮಿಗಳಿಗೆ ಮತ್ತು ಅಭಿವೃದ್ದಿಯ ಯೋಜನೆಯ ರೂಪಿಸುತ್ತಿರುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಗೃಹಸಾಲಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಗ್ರಾಹಕರು ಸಾಲದ ಅರ್ಜಿಯನ್ನು ಬ್ಯಾಂಕಿನ ವೆಬ್‌ಸೈಟ್‌ ಅಥವಾ ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ನಲ್ಲಿ ಡಿಜಿಟಲ್‌ ರೂಪದಲ್ಲಿಯೇ ಸಲ್ಲಿಸಿ 30 ನಿಮಿಷಗಳೊಳಗೆ ಅನುಮೋದನೆ ಪಡೆಯಬಹುದು. ಇದು ಸಾಧ್ಯವಾಗದೇ ಇದ್ದರೆ ಗ್ರಾಹರು ತಮ್ಮ ಸಮೀಪದ ಬ್ಯಾಂಕ್‌ ಆಫ್‌ ಬರೋಡಾ ಶಾಖೆಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ ಉದ್ಯೋಗಿಗಳಿಗೆ ವಾರಕ್ಕೆ 5 ದಿನ ಮಾತ್ರ ಕೆಲಸ?

ಗೃಹ ಸಾಲಗಳ ವಿಶೇಷತೆ

ಸೀಮಿತ ಅವಧಿಗೆ ವಾರ್ಷಿಕ ಬಡ್ಡಿದರ ಶೇ.8.50ರಿಂದ ಆರಂಭವಾಗಲಿದೆ. ಶೂನ್ಯ ಪ್ರಕ್ರಿಯಾ ಶುಲ್ಕ, ಕನಿಷ್ಠ ದಾಖಲೆಗಳೊಂದಿಗೆ ಗೃಹಸಾಲ ಪಡೆಯಬಹುದು. ಗರಿಷ್ಠ 360 ತಿಂಗಳವರೆಗೆ ಮರುಪಾವತಿ ಅವಧಿ ಇರಲಿದೆ. ಯಾವುದೇ ಪೂರ್ವಪಾವತಿ ಅಥವಾ ಅರೆ ಪಾವತಿ ಶುಲ್ಕಗಳು ಇರುವುದಿಲ್ಲ. ಡಿಜಿಟಲ್‌ ಗೃಹಸಾಲದ ಅರ್ಜಿಗೆ ಕೇವಲ 30 ನಿಮಿಷಗಳಲ್ಲಿ ಅನುಮೋದನೆ ಸಿಗಲಿದೆ. ಪ್ರಮುಖ ಕೇಂದ್ರಗಳಲ್ಲಿ ಮನೆ ಬಾಗಿಲಿಗೇ ಸೇವೆ ಸಿಗಲಿದ್ದು ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ ಎಂದು ಬ್ಯಾಂಕ್‌ ಪ್ರಕಟಣೆಯಲ್ಲಿ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!