ರೆಸ್ಲರ್ ಜಾನ್ ಸೀನಾ, ಮೈಕ್ ಟೈಸನ್, ಕಿಮ್ ಕರ್ದಾಶಿಯನ್‌: ಅಂಬಾನಿ ಮನೆ ಮದ್ವೆಯಲ್ಲಿ ಯಾರುಂಟು ಯಾರಿಲ್ಲ

By Anusha Kb  |  First Published Jul 12, 2024, 4:02 PM IST

ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ  ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳ ಗಣ್ಯಾತಿಗಣ್ಯರು ಮುಂಬೈ ತಲುಪಿದ್ದಾರೆ. ಹೀಗಾಗಿ ಮುಂಬೈನಲ್ಲಿ ಮಳೆಯ ಜೊತೆ ಜೊತೆಗೆ ವಿವಿಧ ಲೋಕದ ತಾರೆಯರ ಸಮಾಗಮವಾಗಿದೆ. 


ಮುಂಬೈ: ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ  ಭಾಗವಹಿಸುವುದಕ್ಕಾಗಿ ದೇಶ ವಿದೇಶಗಳ ಗಣ್ಯಾತಿಗಣ್ಯರು ಮುಂಬೈ ತಲುಪಿದ್ದಾರೆ. ಹೀಗಾಗಿ ಮುಂಬೈನಲ್ಲಿ ಮಳೆಯ ಜೊತೆ ಜೊತೆಗೆ ವಿವಿಧ ಲೋಕದ ತಾರೆಯರ ಸಮಾಗಮವಾಗಿದೆ. ಇಂದು ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯಲಿದೆ. 

ಈ ಮದುವೆಗೆ ಅಂಬಾನಿ ಕುಟುಂಬದವರು ಪ್ರಪಂಚದ ಮೂಲೆ ಮೂಲೆಯಲ್ಲಿರುವ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಈ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಹಾಲಿವುಡ್‌, ಬಾಲಿವುಡ್ ಹಾಗೂ ದಕ್ಷಿಣದ ಹಲವು ಸಿನಿಮಾ ತಾರೆಯರು, ಜಗತ್ತಿನ ಉದ್ಯಮ ಲೋಕದ ದಿಗ್ಗಜರು ಈ ಸಮಾರಂಭಕ್ಕಾಗಿ ಮುಂಬೈ ನಗರಿಗೆ ಆಗಮಿಸಿದ್ದು,  ದೇವಲೋಕವೇ ಧರೆಗಿಳಿದಂತೆ ಕಾಣಿಸುತ್ತಿದೆ. ಹಲವು ಗಣ್ಯಾತಿಗಣ್ಯರು ಅಂಬಾನಿ ಮನೆಯ ಮದ್ವೆಗೆ ಆಗಮಿಸುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

Tap to resize

Latest Videos

ಇಂದು ಅಂಬಾನಿ ಮಗನ ವೈಭವದ ಮದುವೆ: ವಿವಾಹಕ್ಕೆ 5000 ಕೋಟಿ ಖರ್ಚು?

ದೇಶದ ರಾಜಕಾರಣಿಗಳಾದ ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್,  ಉತ್ತರ ಪ್ರದೇಶ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ, ಯುಕೆಯ ಮಾಜಿ ಪ್ರಧಾನಿ ಟೋನಿ ಬ್ಲೇರ್, ಸ್ಯಾಮ್ಸಂಗ್ ಸಂಸ್ಥೆಯ ಸಿಇಒ ಜೇ ವೈಲೀ , ಹಾಲಿವುಡ್ ನಟಿ ಕಿಮ್ ಕರ್ದಾಶಿಯನ್‌,  ಕೆಜಿಎಫ್ ಸ್ಟಾರ್ ನಮ್ಮ ಕನ್ನಡದ ನಟ ಯಶ್, ಹಾಲಿವುಡ್ ನಟ ರೇಮಾ, ರೆಸ್ಲರ್ ಜಾನ್ ಸೀನಾ, ಮೈಕ್ ಟೈಸನ್, ಹೀಗೆ ಯಾರಿಲ್ಲ  ಎಂಬಷ್ಟು ಗಣ್ಯ ಅತಿಥಿಗಳು ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರನ್ನು ಆಶೀರ್ವದಿಸಲು ಮುಂಬೈಗೆ ಆಗಮಿಸಿದ್ದಾರೆ. ಇವರಷ್ಟೇ ಅಲ್ಲದೇ ಬಾಲಿವುಡ್‌ನ ದೊಡ್ಡ ತಾರಾಗಣವೇ ಇಲ್ಲಿ ಹಾಜರಿರಲಿದ್ದು, ಯಾವ ರಾಜವೈಭೋಗಕ್ಕೂ ಕಡಿಮೆ ಇಲ್ಲದಂತೆ ಮದುವೆ ನಡೆಯುತ್ತಿದೆ. 

ಇತ್ತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಕಾಣಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಮದುವೆಗೆ ಗೈರಾಗುವ ಸಾಧ್ಯತೆ ಇದೆ. 

ತಾಜಾ ತಾಜಾ ಮಲ್ಲಿಗೆ, ಚೆಂಡು ಹೂವುಗಳಿಂದ ರಾಧಿಕಾ ದುಪ್ಪಟ್ಟಾ, ಆಭರಣ! ಘಮಘಮಿಸಿದ ಮದುಮಗಳ ಝಲಕ್​...

 

 

ರಾಜಕಾರಣಿಗಳ ದಂಡು
ಮದುವೆಗೆ ಬರುವ ಅತಿಥಿಗಳ ಪಟ್ಟಿಯಲ್ಲಿ ರಾಜಕಾರಣಿಗಳಾದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಆಂಧ್ರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್,  ಕೇಂದ್ರ ಸಚಿವ ನಾರಾ ಲೋಕೇಶ್, ನಟ ಹಾಗೂ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್, ತೆಲಂಗಾಣ ವಿರೋಧಪಕ್ಷದ ನಾಯಕ ಕೆ.ಟಿ ರಾಮರಾವ್, ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖುರ್ಷಿದ್, ದಿಗ್ವಿಜಯ್ ಸಿಂಗ್, ಕಪಿಲ್ ಸಿಬಲ್, ಸಚಿನ್ ಪೈಲಟ್ ಸೇರಿದಂತೆ ಇನ್ನೂ ಅನೇಕ ಗಣ್ಯರರಿಗೆ ಆಹ್ವಾನವಿದೆ.

ಮದುವೆಯ ಕಾರ್ಯಕ್ರಮಗಳ ಆರಂಭಕ್ಕೂ ಮೊದಲು ಅಂಬಾನಿ ನಿವಾಸ ಅಂಟಿಲಿಯಾದಲ್ಲಿ ಶಿವಶಕ್ತಿ ಪೂಜೆ ನಡೆಯಿತು. ಅಂಬಾನಿ ಕುಟುಂಬದವರು ವಧು ವರ ಹಾಗೂ ಕುಟುಂಬಸ್ಥರು ನೆಂಟರಿಸ್ಟರು ಈ ಪೂಜೆಯಲ್ಲಿ ಭಾಗಿಯಾದರು. ಮನೆಯಲ್ಲಿದ್ದ ಶೀವಲಿಂಗಕ್ಕೆ ಮುಕೇಶ್ ಅಂಬಾನಿ, ನೀತಾ ಅಂಬಾನಿ ನವವಧು ರಾಧಿಕಾ ಮರ್ಚೆಂಟ್, ವರ ಅನಂತ್ ಅಂಬಾನಿ ಸೇರಿದಂತೆ ಎಲ್ಲರೂ ಹಾಲಿನ ಅಭಿಷೇಕ ನಡೆಸುವ ಮೂಲಕ ದೈವಿಕವಾಗಿ ಶುಭ ಸಮಾರಂಭಕ್ಕೂ ಮುನ್ನ ದೇವರ ಆಶೀರ್ವಾದ ಬೇಡಿದರು.

 

click me!