
ಇಂದಿನ ಕಾಲದಲ್ಲಿ ನಿಮಗೆ ಯಾವುದೇ ಸಮಯದಲ್ಲಿಯಾದರೂ ಬ್ಯಾಂಕಿನಿಂದ ಲೋನ್ ತೆಗೆಯಬೇಕಾಗದ ಸಂದರ್ಭ ಬರಬಹುದು. ನಾವೆಲ್ಲರೂ ನಮ್ಮ ಅಗತ್ಯಕ್ಕೆ ಅನುಗುಣವಾಗಿ ವೈಯಕ್ತಿಕ ಸಾಲ, ಗೃಹ ಸಾಲ ಅಥವಾ ಕಾರು ಸಾಲವನ್ನು ತೆಗೆದುಕೊಳ್ಳುತ್ತೇವೆ. ಸಾಲ ನೀಡುವ ಮೊದಲು ಬ್ಯಾಂಕ್ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುತ್ತದೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಬ್ಯಾಂಕ್ ಸುಲಭವಾಗಿ ಸಾಲವನ್ನು ಪಾಸ್ ಮಾಡುತ್ತದೆ. ಆದರೆ ಕೆಲವೊಮ್ಮೆ ಕೆಲವು ತಪ್ಪುಗಳು ಸಂಭವಿಸುತ್ತವೆ. ಇದರಿಂದಾಗಿ ಕ್ರೆಡಿಟ್ ಸ್ಕೋರ್ ಹಾಳಾಗುತ್ತದೆ. ಅದರ ನಂತರ ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳುವುದು ಕಷ್ಟಕರವಾಗುತ್ತದೆ. ಇಂದು ನಾವು ನಿಮಗೆ ಆ 3 ಸಾಮಾನ್ಯ ತಪ್ಪುಗಳ ಬಗ್ಗೆ ಹೇಳುತ್ತಿದ್ದೇವೆ. ಅಪ್ಪಿ ತಪ್ಪಿಯೂ ನೀವು ಈ ತಪ್ಪುಗಳನ್ನು ಮಾಡಿದರೆ ಬ್ಯಾಂಕ್ ನಿಮಗೆ ಎಂದಿಗೂ ಲೋನ್ ಕೊಡುವುದಿಲ್ಲ.
ಮೊದಲನೆಯ ತಪ್ಪು: ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸದಿರುವುದು
ನೀವು ನಿಮ್ಮ ಸಾಲ ಅಥವಾ ಕ್ರೆಡಿಟ್ ಕಾರ್ಡ್ EMI ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ದೊಡ್ಡ ತಪ್ಪು ಮಾಡುತ್ತಿದ್ದೀರಿ ಅಂತಲೇ ಅರ್ಥ. ಏಕೆಂದರೆ ಪ್ರಮುಖ ಹಣಕಾಸು ಸಂಸ್ಥೆಗಳು ಮತ್ತು ಕ್ರೆಡಿಟ್ ಬ್ಯೂರೋಗಳು ಇದನ್ನು "ರೆಡ್ ಫ್ಲ್ಯಾಗ್" ಎಂದು ಪರಿಗಣಿಸುತ್ತವೆ. ಕೇವಲ 30 ದಿನಗಳ ವಿಳಂಬವೂ ಸಹ ನಿಮ್ಮ ಸ್ಕೋರ್ ಅನ್ನು 50 ರಿಂದ 100 ಅಂಕಗಳಷ್ಟು ಕಡಿಮೆ ಮಾಡಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಆರ್ಥಿಕ ಸ್ಥಿರತೆ ವರದಿಗಳಲ್ಲಿ Credit accessಗಾಗಿ ಸಕಾಲಿಕ ಪಾವತಿಯನ್ನು ಕಡ್ಡಾಯವೆಂದು ಪರಿಗಣಿಸುತ್ತದೆ. ಸಮಯಕ್ಕೆ ಸರಿಯಾಗಿ EMI ಪಾವತಿಸದಿರುವುದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹಾಳು ಮಾಡುತ್ತದೆ. ಹಾಗೆಯೇ ನೀವು ಬ್ಯಾಂಕಿನಿಂದ ಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಎರಡನೇಯ ತಪ್ಪು: ಕ್ರೆಡಿಟ್ ಕಾರ್ಡ್‌ಗಳ ಅತಿಯಾದ ಬಳಕೆ
ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯ 30% ಕ್ಕಿಂತ ಹೆಚ್ಚು ಬಳಸಿದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಸಾಲದ ಮೇಲೆ ಅತಿಯಾಗಿ ಅವಲಂಬಿತರಾಗಿದ್ದೀರಿ ಎಂದು ಇದು ಬ್ಯಾಂಕಿಗೆ ಸಿಗ್ನಲ್ ಕೊಡುತ್ತದೆ. ಕೊನೆಗೆ ಭವಿಷ್ಯದಲ್ಲಿ ಹೆಚ್ಚಿನ ಬಡ್ಡಿದರಗಳಲ್ಲಿ ಸಾಲಗಳನ್ನು ತೆಗೆದುಕೊಳ್ಳುವಂತೆ ನಿಮ್ಮನ್ನು ಒತ್ತಾಯಿಸಬಹುದು.
ಮೂರನೇಯ ತಪ್ಪು: ನಿಮ್ಮ ಹಳೆಯ ಕ್ರೆಡಿಟ್ ಖಾತೆ ಅಥವಾ ಅಕೌಂಟ್ ಕ್ಲೋಸ್ ಮಾಡೋದು
ಜನರು ಸಾಮಾನ್ಯವಾಗಿ ತಮ್ಮ ಹಳೆಯ ಕ್ರೆಡಿಟ್ ಕಾರ್ಡ್ ಅಥವಾ ವೈಯಕ್ತಿಕ ಸಾಲದ ಖಾತೆಗಳನ್ನು ತಿಳಿಯದೆಯೇ ಕ್ಲೋಸ್ ಮಾಡ್ತಾರೆ. ಆದರೆ ಹಾಗೆ ಮಾಡುವುದರಿಂದ ನಿಮ್ಮ ಸರಾಸರಿ ಕ್ರೆಡಿಟ್ ಹಿಸ್ಟ್ರಿ ಕಡಿಮೆಯಾಗುತ್ತದೆ, ಇದು ಕಡಿಮೆ ಸ್ಕೋರ್‌ಗೆ ಕಾರಣವಾಗುತ್ತದೆ. ಕ್ರೆಡಿಟ್ ಬ್ಯೂರೋಗಳು ಈ ಅಂಶವನ್ನು "ಮರುಪಾವತಿ ಇತಿಹಾಸದ ವಿಶ್ವಾಸಾರ್ಹತೆ" (Repayment history reliability) ಎಂದು ನೋಡುತ್ತವೆ.
ಕ್ರೆಡಿಟ್ ಸ್ಕೋರ್ ಶ್ರೇಣಿಗಳು (range) ಮತ್ತು ಅವುಗಳ ಅರ್ಥ
300 – 579 (Poor) ಸಾಲ ತಿರಸ್ಕಾರದ ಸಾಧ್ಯತೆ
580 – 739 (Fair) ನ್ಯಾಯಯುತ ಕ್ರೆಡಿಟ್ ಲಭ್ಯ, ಆದರೆ ಹೆಚ್ಚಿನ ಬಡ್ಡಿದರಗಳಲ್ಲಿ
740 – 900 (Good/Excellent) ಉತ್ತಮ/ಅತ್ಯುತ್ತಮ ಸುಲಭ ಸಾಲ ಅನುಮೋದನೆ ಮತ್ತು ಉತ್ತಮ ನಿಯಮಗಳು
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಏನು ಮಾಡಬೇಕು?
*ನಿಮ್ಮ ಸಾಲದ EMI ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ.
*ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಗಿಂತ ಕಡಿಮೆ ಖರ್ಚು ಮಾಡಿ.
*ಒಂದೇ ಸಮಯದಲ್ಲಿ ಹಲವಾರು ಸ್ಥಳಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿ.
*ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.