ಹೋಯ್ತಲ್ಲಪ್ಪ ಮಾನ: 50ರ ನೋಟು ಪ್ರಮಾದದ ಪರಮಾವಧಿ!

Published : May 10, 2019, 03:41 PM ISTUpdated : May 10, 2019, 03:58 PM IST
ಹೋಯ್ತಲ್ಲಪ್ಪ ಮಾನ: 50ರ ನೋಟು ಪ್ರಮಾದದ ಪರಮಾವಧಿ!

ಸಾರಾಂಶ

ದೇಶದ ಮಾನ ಹರಾಜು ಹಾಕಿದ ಹೊಸ ನೋಟುಗಳು| ಹೊಸ ನೋಟಿನಲ್ಲಿ ತಪ್ಪು ಮುದ್ರಣದ ಯಡವಟ್ಟು| ಕ್ಷಮೆ ಕೋರಿದ ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೆಲೀಯಾ| ಹೊಸ 50 ಡಾಲರ್ ನೋಟಿನಲ್ಲಿ ತಪ್ಪು ಮುದ್ರಣ| RESPONSIBILITY ಬದಲಿಗೆ RESPONSIBILTY ಎಂದು ಮುದ್ರಣ| 50 ಡಾಲರ್ ನೋಟಿನಲ್ಲಿ ಇಂಗ್ಲಿಷ್ ಪದ I ಮಿಸ್| ನೋಟುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲ್ಲ ಎಂದ ಆರ್‌ಬಿಎ|

ಸಿಡ್ನಿ(ಮೇ.10): ಸಣ್ಣದೊಂದು ತಪ್ಪು ಇಡೀ ಸರ್ಕಾರ ಮತ್ತು ದೇಶದ ಮಾನವನ್ನು ಹರಾಜು ಹಾಕಬಲ್ಲದು ಎಂಬುದಕ್ಕೆ ಆಸ್ಟ್ರೆಲೀಯಾ ಇತ್ತೀಚಿಗೆ ಬಿಡುಗಡೆ ಮಾಡಿರುವ 50 ಡಾಲರ್ ನೋಟುಗಳೇ ಸಾಕ್ಷಿ.

ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೆಲೀಯಾ(RBA) ಇತ್ತಿಚೀಗೆ 50 ಡಾಲರ್ ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಿದ್ದು, ನೊಟಿನ ಹಿಂಭಾಗದಲ್ಲಿ ಇಂಗ್ಲಿಷ್ ಭಾಷೆಯ 'RESPONSIBILITY' ಪದವನ್ನು ತಪ್ಪಾಗಿ ಮುದ್ರಿಸಿದೆ.

ಎಡಿತ್ ಕೋವನ್ ಅವರ ಭಾವಚಿತ್ರವುಳ್ಳ 50 ಡಾಲರ್ ಮುಖಬೆಲೆಯ ನೋಟಿನಲ್ಲಿ 'RESPONSIBILTY' ಎಂದು ಮುದ್ರಿಸಿದ್ದು, ಇದರಲ್ಲಿ ಇಂಗ್ಲಿಷ್ ಪದ I ಮಿಸ್ ಆಗಿದೆ. ಕಳೆದ ಅಕ್ಟೋಬರ್‌ನಲ್ಲಿ ಈ ನೋಟುಗಳನ್ನು ಆರ್‌ಬಿಎ ಮುದ್ರಿಸಿತ್ತು.

ಆದರೆ ಈಗಾಗಲೇ ಈ ನೋಟುಗಳು ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವುದರಿಂದ ಇವುಗಳನ್ನು ಹಿಂಪಡೆಯವುದಿಲ್ಲ ಎಂದು ಆರ್‌ಬಿಎ ಸ್ಪಷ್ಟಪಡಿಸಿದೆ. 50 ಡಾಲರ್ ಮುಖಬೆಲೆಯ ಒಟ್ಟು 184 ಮಿಲಿಯನ್ ಹೊಸ ನೋಟುಗಳನ್ನು ಆರ್‌ಬಿಎ ಮುದ್ರಿಸಿದೆ. ಅಲ್ಲದೇ ತಪ್ಪು ಮುದ್ರಣಕ್ಕಾಗಿ ಕ್ಷಮೆ ಕೋರಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..