Viral Video : ಆಡಿ ಕಾರಲ್ಲಿ ಟೀ ಮಾರ್ತಿರೋನ ನೋಡಿ ಜನ ಕಂಗಾಲು

Published : Apr 10, 2023, 11:14 AM ISTUpdated : Apr 10, 2023, 11:20 AM IST
Viral Video : ಆಡಿ ಕಾರಲ್ಲಿ ಟೀ ಮಾರ್ತಿರೋನ ನೋಡಿ ಜನ ಕಂಗಾಲು

ಸಾರಾಂಶ

ಆಡಿ ಕಾರ್ ಇರೋರು ಶ್ರೀಮಂತರು ಅಂತಾ ನಾವೆಲ್ಲ ಅಂದ್ಕೊಂಡಿದ್ದೇವೆ. ಆದ್ರೆ ಈಗ ವೈರಲ್ ಆಗಿರುವ ವಿಡಿಯೋ ಸ್ವಲ್ಪ ಅನುಮಾನ ಮೂಡಿಸಿದೆ. ಆಡಿ ಕಾರ್ ಹೊಟ್ಟೆ ತುಂಬಿಸಲು ಈ ವ್ಯಕ್ತಿ ಟೀ ಮಾರಾಟಕ್ಕೆ ಇಳಿದಿದ್ದಾನಾ ಇಲ್ಲ ಟೀ ಮಾರಾಟ ಮಾಡಿ ಆಡಿ ಖರೀದಿ ಮಾಡಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ಸಿಗ್ತಿಲ್ಲ.  

ದುಡಿಯಬೇಕೆನ್ನುವ ಮನಸ್ಸಿದ್ರೆ ಜನರು ಏನು ಬೇಕಾದ್ರೂ ಮಾಡ್ತಾರೆ. ಈಗಿನ ದಿನಗಳಲ್ಲಿ ಜನರು ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸ ಹುಡುಕ್ತಾ ಕೂರುತ್ತಿಲ್ಲ. ಸರ್ಕಾರಿ ಉದ್ಯೋಗವೇ ಬೇಕೆಂದು ಕಾಲಹರಣ ಮಾಡ್ತಿಲ್ಲ. ಹೊಸ ಹೊಸ ರೀತಿಯಲ್ಲಿ ಹಣ ಗಳಿಕೆ ಮಾಡ್ತಿದ್ದಾರೆ. ಆಹಾರದ ವ್ಯವಹಾರಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ. ಫಾಸ್ಟ್ ಫುಡ್, ಊಟ ಸೇರಿದಂತೆ ಟೀ, ಕಾಫಿಗೂ ಸದಾ ಬೇಡಿಕೆಯಿರುತ್ತದೆ. ಮಾರುಕಟ್ಟೆ ಪ್ರದೇಶದಲ್ಲಿ ಬರೀ ಟೀ, ಕಾಫಿ ಮಾರಾಟ ಮಾಡಿ ಜೀವನ ನಡೆಸುವವರು ಸಾಕಷ್ಟು ಮಂದಿಯಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವಿಡಿಯೋ (Video) ವೈರಲ್ ಆಗ್ತಿರುತ್ತದೆ. ಎಂಬಿಎ (MBA) ಚಾಯ್ ವಾಲಾ ಬಗ್ಗೆ ನೀವು ಕೇಳಿರ್ತೀರಿ. ಟೀ ಮಾರುವ ಮೂಲಕ 4 ಕೋಟಿ ರೂಪಾಯಿ ವಹಿವಾಟು ನಡೆಸುವ 25 ವರ್ಷದ ಯುವಕ ಎಂಬಿಎ ಚಾಯ್‌ವಾಲಾ (Chai Wala) ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಪಾನಿಪುರಿ ಮಾರಾಟ ಮಾಡ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಈಗ ವೈರಲ್ ಆದ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಆಡಿ ಚಾಯ್ವಾಲಾ ಎಂದು ಕರೆಯಬಹುದು. ಆಶಿಶ್ ತ್ರಿವೇದಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನೀವು ಆಡಿ ಕಾರ್ ನಲ್ಲಿ ಟೀ ಮಾರುತ್ತಿರುವ ವ್ಯಕ್ತಿಯನ್ನು ನೋಡಬಹುದು.

ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಇಲ್ಲಿದೆ ಸರ್ಕಾರದ ನಿಯಮ!

ಸೋಷಿಯಲ್ ಮೀಡಿಯಾದಲ್ಲಿ ಜನರನ್ನು ಅಚ್ಚರಿಗೊಳಿಸುತ್ತಿರುವ ಚಾಯ್ ವಾಲಾ ಆಡಿ ಕಾರು ಹೊಂದಿದ್ದಾರೆ. ಆಡಿ ಒಂದು ಐಷಾರಾಮಿ ಕಾರು ಕಂಪನಿ ಅನ್ನೋದು ನಿಮಗೆ ಗೊತ್ತು. ಅದನ್ನು ಖರೀದಿ ಮಾಡಲು ಅನೇಕರು ಕನಸು ಕಾಣ್ತಾರೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ಜನರು ಆಡಿ ಕಾರ್ ಖರೀದಿ ಮಾಡ್ತಾರೆ. ಕಷ್ಟಪಟ್ಟು ಖರೀದಿ ಮಾಡಿದ ಕಾರನ್ನು ಪ್ರೀತಿಯಿಂದ ಮಕ್ಕಳಂತೆ ನೋಡಿಕೊಳ್ತಾರೆ. ಅದಕ್ಕೆ ಸಣ್ಣ ಗೀರು ಬಿದ್ರೂ ಇವರಿಗೆ ನಿದ್ರೆ ಬರೋದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಆಡಿ ಕಾರನ್ನು ಟೀ ಮಾರಾಟಕ್ಕೆ ಬಳಸಿಕೊಂಡಿದ್ದಾನೆ.  ರಸ್ತೆ ಬದಿಯಲ್ಲಿ ಆಡಿ ಕಾರ್ ನಿಲ್ಲಿಸಲಾಗಿದೆ. ಅದ್ರ ಪಕ್ಕದಲ್ಲಿ ಸಣ್ಣ ಸ್ಟೂಲ್ ಹಾಕಿ ಟೀ ಮಾರಾಟ ಮಾಡಲಾಗ್ತಿದೆ. ಟೀ ಸ್ಟಾಲ್ ಬಳಿ ಕೆಲವರು ನಿಂತು ಟೀ ಕುಡಿಯುತ್ತಿದ್ದಾರೆ. ಈ ಪೋಸ್ಟ್ ಅನ್ನು ashishtrivedii_24 ಹೆಸರಿನ ಇನ್ಸ್ಟಾಗ್ರಾಮ್ (Instagram) ಬಳಕೆದಾರರು ಹಂಚಿಕೊಂಡಿದ್ದಾರೆ. ಆಡಿ ಕಾರ್ ಇದ್ದೂ ಟೀ ಮಾರಾಟ ಮಾಡುವ ಪರಿಸ್ಥಿತಿ ಇವರಿಗೆ ನಿರ್ಮಾಣವಾಗಿದ್ಯಾ ಅಥವಾ ಟೀ ಮಾರಾಟ ಮಾಡಿ ಈತ ಆಡಿ ಕಾರ್ ಖರೀದಿ ಮಾಡಿದ್ದಾನಾ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿದೆ.

ಭಿಕ್ಷುಕರ ಮೇಲೆ ಹೂಡಿಕೆ, ಬಂದ ಲಾಭದಲ್ಲಿ Beggars Corporation ಕಟ್ಟಿದ ಸಾಹಸಿ!

ಈ ವೀಡಿಯೋವನ್ನು ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಿ 26 ಲಕ್ಷ ಬಾರಿ ವೀಕ್ಷಿಸಲಾಗಿದೆ. ಜನರು ಕಮೆಂಟ್ ನಲ್ಲಿ ಈತನನ್ನು ಆಡಿ ಚಾಯ್‌ವಾಲಾ ಎಂದು ಕರೆಯುತ್ತಿದ್ದಾರೆ. ಈ ವೀಡಿಯೊಕ್ಕೆ ಇದುವರೆಗೆ 70 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಕಾರಿನೊಳಗೆ ಕುಳಿತು ಟೀ ಸೇವನೆ ಮಾಡಿದ್ರೆ ಒಂದು ಟೀಗೆ 100 ರೂಪಾಯಿ ಇರಬಹುದು ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ.   ಆಡಿಯಲ್ಲಿ ಚಹಾ ಮಾರಾಟ ಮಾಡಿದ ನಂತರ, ಅವರು ವ್ಯಾಗನ್ ಖರೀದಿಸುತ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಟೀ ಮಾರಾಟ ಮಾಡೋದು ಒಳ್ಳೆ ಬ್ಯುಸಿನೆಸ್ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ  ಬಿಹಾರ ವಿದ್ಯಾರ್ಥಿನಿಯ ಟೀ ಸ್ಟಾಲ್ ಸುದ್ದಿಯಾಗಿತ್ತು. ಬಿ.ಟೆಕ್ ಮುಗಿಸಿರುವ ವಿದ್ಯಾರ್ಥಿನಿ ಫರೀದಾಬಾದ್ ನಲ್ಲಿ ಬಿ.ಟೆಕ್  ಚಾಯ್ ವಾಲಿ ಎಂದೇ ಹೆಸರು ಹಾಕಿಕೊಂಡು ಟೀ ಮಾರಾಟ ಮಾಡ್ತಿದ್ದಾಳೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ