ತೆರಿಗೆದಾರರೇ ಗಮನಿಸಿ; ಟಿಡಿಎಸ್, ಜಿಎಸ್ ಟಿಆರ್ -4, ಫಾರ್ಮ್ 15G/H ಸಲ್ಲಿಕೆಗೆ ಇಂದು ಅಂತಿಮ ಗಡುವು!

By Suvarna News  |  First Published Apr 30, 2023, 4:32 PM IST

ತೆರಿಗೆಗೆ ಸಂಬಂಧಿಸಿದ ಕೆಲಸಗಳನ್ನು ಅವುಗಳಿಗೆ ನೀಡಿರುವ ಅಂತಿಮ ಗಡುವಿನೊಳಗೆ ಮಾಡಿ ಮುಗಿಸೋದು ಅಗತ್ಯ. ಇಲ್ಲವಾದರೆ ದಂಡ ಬೀಳುವ ಸಾಧ್ಯತೆ ಇರುತ್ತದೆ. ಟಿಡಿಎಸ್ ಪಾವತಿ, ಜಿಎಸ್ ಟಿಆರ್ -4, ಫಾರ್ಮ್ 15ಜಿ ಹಾಗೂ 15ಎಚ್ ಸಲ್ಲಿಕೆಗೆ ಇಂದು ಅಂತಿಮ ಗಡುವಾಗಿದೆ. 


Business Desk:ಹೊಸ ಆರ್ಥಿಕ ವರ್ಷದ ಮೊದಲ ತಿಂಗಳು ಇಂದಿಗೆ ಮುಕ್ತಾಯವಾಗಲಿದೆ. ಈಗಾಗಲೇ ತೆರಿಗೆ ಪಾವತಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ವಿವಿಧ ಗಡುವುಗಳನ್ನು ಕೂಡ ನಿಗದಿಪಡಿಸಿದೆ. ನೇರ ಅಥವಾ ಪರೋಕ್ಷ ತೆರಿಗೆಯೇ ಆಗಲಿ ತೆರಿಗೆದಾರರು ನಿಗದಿತ ಗಡುವಿಗಿಂತ ತಡವಾಗಿ ಪಾವತಿಸಿದರೆ ದಂಡ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ.ಕೆಲವೊಂದು ಸಂದರ್ಭಗಳಲ್ಲಿ ಸರ್ಕಾರ ವಿವಿಧ ತೆರಿಗೆ ಪಾವತಿ ಗಡುವನ್ನು ಮುಂದೂಡುತ್ತದೆ ಕೂಡ. ಆದರೆ, ಎಲ್ಲ ಸಂದರ್ಭಗಳಲ್ಲೂ ದಿನಾಂಕವನ್ನು ವಿಸ್ತರಿಸಲಾಗುತ್ತದೆ ಎಂಬ ನಿರೀಕ್ಷೆ ಬೇಡ. ಹೀಗಾಗಿ ತೆರಿಗೆದಾರರು ತೆರಿಗೆಗೆ ಸಂಬಂಧಿಸಿದ ಅಂತಿಮ ಗಡುವಿನ ಮಾಹಿತಿ ಹೊಂದಿರೋದು ಅಗತ್ಯ. ಟಿಡಿಎಸ್, ಐಟಿಆರ್ ಸಲ್ಲಿಕೆ ಯಾವಾಗ ಮಾಡಬೇಕು ಎಂಬ ಮಾಹಿತಿಯನ್ನು ಹೊಂದಿದ್ದರೆ ದಂಡದಿಂದ ತಪ್ಪಿಸಿಕೊಳ್ಳಬಹುದು. ಇನ್ನು ವೈಯಕ್ತಿಕ ತೆರಿಗೆದಾರರು, ವ್ಯಾಪಾರಿಗಳು ಸೇರಿದಂತೆ ವಿವಿಧ ವರ್ಗಗಳಡಿ ಬರುವ ತೆರಿಗೆದಾರರಿಗೆ ತೆರಿಗೆ ಸಂಬಂಧಿ ಮಾಹಿತಿಗಳನ್ನು ಸಲ್ಲಿಕೆ ಮಾಡಲು ವಿವಿಧ ನಮೂನೆ ಅರ್ಜಿಗಳು ಕೂಡ ಇರುತ್ತವೆ. ಈ ಅರ್ಜಿಗಳ ಬಗ್ಗೆ ಕೂಡ ಮಾಹಿತಿ ಹೊಂಡಿರೋದು ಅಗತ್ಯ. ಇನ್ನು ಇಂದು ಕೆಲವೊಂದು ತೆರಿಗೆ ಸಲ್ಲಿಕೆಗೆ ಅಂತಿಮ ಗಡುವಾಗಿದೆ. ಹಾಗಾದ್ರೆ ಇಂದು ಯಾವೆಲ್ಲ ತೆರಿಗೆ ಸಂಬಂಧಿ ಕೆಲಸಗಳನ್ನು ಮಾಡಿ ಮುಗಿಸಲು ಅಂತಿಮ ಗಡುವಾಗಿದೆ? ಇಲ್ಲಿದೆ ಮಾಹಿತಿ.

ಮಾರ್ಚ್ ತಿಂಗಳ ಟಿಡಿಎಸ್ ಪಾವತಿಗೆ ಅಂತಿಮ ದಿನ
ಟಿಡಿಎಸ್ ಅಂದರೆ ಆದಾಯದ ಮೂಲದಲ್ಲಿ ಕಡಿತ ಮಾಡಿದ ತೆರಿಗೆ. ಬ್ಯಾಂಕ್ ಠೇವಣಿ ಬಡ್ಡಿ, ಬಾಡಿಗೆ, ಕನ್ಸಲ್ಟೇಷನ್ ಶುಲ್ಕ, ಕಮೀಷನ್ ಗಳು, ಕ್ರಿಪ್ಟೋ ಕರೆನ್ಸಿ ಅಥವಾ ವರ್ಚುವಲ್ ಡಿಜಿಟಲ್ ಆಸ್ತಿಗಳು ಹಾಗೂ ಸ್ಟ್ಯಾಂಪ್ ಡ್ಯೂಟಿ ಮುಂತಾದವುಗಳಿಗೆ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಸಾಮಾನ್ಯವಾಗಿ ಟಿಡಿಎಸ್ ದರ ವಿವಿಧ ಆದಾಯಗಳು ಹಾಗೂ ಹೂಡಿಕೆ ಮೇಲೆ ಕನಿಷ್ಠ ಶೇ.1ರಷ್ಟಿದ್ದರೆ, ಇನ್ನೂ ಕೆಲವು ಹೂಡಿಕೆಗಳ ಮೇಲೆ ಶೇ.30ರಷ್ಟು ಇರುತ್ತದೆ. 2023ರ ಮಾರ್ಚ್ ತಿಂಗಳ ಟಿಡಿಎಸ್ ಪಾವತಿಗೆ ಇಂದು (ಏ.30) ಅಂತಿಮ ದಿನಾಂಕವಾಗಿದೆ.

Tap to resize

Latest Videos

EPF calculation:25 ಸಾವಿರ ಮೂಲವೇತನ ಹೊಂದಿರುವ ಉದ್ಯೋಗಿಗೆ ನಿವೃತ್ತಿ ವೇಳೆ ಎಷ್ಟು ಇಪಿಎಫ್ ಸಿಗುತ್ತೆ?

2022-23ನೇ ಆರ್ಥಿಕ ಸಾಲಿನ GSTR-4 ಸಲ್ಲಿಕೆಗೆ ಇಂದು ಗಡುವು
ಸರಕು ಹಾಗೂ ಸೇವೆಗಳ ತೆರಿಗೆ (GST) ಪದ್ಧತಿಯಲ್ಲಿ ಸಂಯೋಜಿತ ಯೋಜನೆಯನ್ನು ಆಯ್ಕೆ ಮಾಡುವ ತೆರಿಗೆದಾರರು ಜಿಎಸ್ ಟಿಆರ್ -4 ರಿಟರ್ನ್ ಅನ್ನು ಸಲ್ಲಿಕೆ ಮಾಡಬೇಕು. ಈ ಅರ್ಜಿಯನ್ನು ವರ್ಷಕ್ಕೆ ಒಂದು ಬಾರಿ ಸಲ್ಲಿಕೆ ಮಾಡಿದರೆ ಸಾಕು. 2018-19ನೇ ಆರ್ಥಿಕ ಸಾಲಿನ ತನಕ ಇದನ್ನು ಪ್ರತಿ ತ್ರೈಮಾಸಿಕಕ್ಕೆ ಒಮ್ಮೆ ಸಲ್ಲಿಕೆ ಮಾಡಬೇಕಿತ್ತು.

ಬಳಕೆದಾರರಿಗೆ ಶಾಕ್ ನೀಡಿದ ಸ್ವಿಗ್ಗಿ;ಪ್ರತಿ ಫುಡ್ ಆರ್ಡರ್ ಮೇಲೆ 2ರೂ. ಪ್ಲಾಟ್ ಫಾರ್ಮ್ ಶುಲ್ಕ

ಫಾರ್ಮ್ 15ಜಿ ಹಾಗೂ 15ಎಚ್ ಸಲ್ಲಿಕೆಗೆ ಕೊನೆಯ ದಿನಾಂಕ
2023ನೇ ಸಾಲಿನ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ ಬಡ್ಡಿ ಆದಾಯದ ಮೇಲಿನ ಟಿಡಿಎಸ್ ಉಳಿತಾಯಕ್ಕೆ ಫಾರ್ಮ್ 15ಜಿ ಹಾಗೂ 15ಎಚ್ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ನೀವು ಬ್ಯಾಂಕ್ ಠೇವಣಿಯಿಂದ ವಾರ್ಷಿಕ 40,000ರೂ.ಗಿಂತ ಅಧಿಕ ಬಡ್ಡಿ ಪಡೆಯುತ್ತಿದ್ದರೆ ಬ್ಯಾಂಕ್ ಟಿಡಿಎಸ್ ಕಡಿತ ಮಾಡುತ್ತದೆ. ಈ ಮಿತಿ ಹಿರಿಯ ನಾಗರಿಕರಿಗೆ ವಾರ್ಷಿಕ 50,000ರೂ. ಆಗಿದೆ. ಆದರೆ, ಬಡ್ಡಿ ಆದಾಯದ ಮೇಲೆ ಟಿಡಿಎಸ್ ಉಳಿತಾಯ ಮಾಡಲು ಒಮದು ಮಾರ್ಗವಿದೆ. ಅದೇನೆಂದರೆ ನಿಮ್ಮ ಒಟ್ಟು ವಾರ್ಷಿಕ ಆದಾಯ ತೆರಿಗೆ ಮಿತಿಗಿಂತ ಕಡಿಮೆಯಿದ್ದರೆ ಆಗ ನೀವು ಬಡ್ಡಿ ಆದಾಯದಿಂದ ಟಿಡಿಎಸ್ ಕಡಿತ ಮಾಡದಂತೆ ಕೋರಿ ಫಾರ್ಮ್ 15ಜಿ ಹಾಗೂ 15ಎಚ್ ಸ್ವ ಘೋಷಣ ಪತ್ರ ಸಲ್ಲಿಕೆ ಮಾಡಬೇಕು. ಹೀಗಾಗಿ ಈ ಮೇಲಿನ ಎಲ್ಲ ಕೆಲಸಗಳನ್ನು ಇಂದೇ ಮಾಡಿ ಮುಗಿಸಿ. 

click me!