ATM Safety Tips : ಎಟಿಎಂ ಬಳಸುವ ಮುನ್ನ ಹಸಿರು ಲೈಟ್ ಬಗ್ಗೆ ಗಮನವಿರಲಿ!

By Suvarna News  |  First Published Jan 19, 2022, 7:59 AM IST

ಹಣದ ಅವಶ್ಯಕತೆಯಿದೆ ಎಂದಾಗ ನಾವು ಎಟಿಎಂಗೆ ನುಗ್ತೇವೆ. ತರಾತುರಿಯಲ್ಲಿ ಕಾರ್ಡ್ ಒಳಗೆ ಹಾಕಿ ಹಣ ವಿತ್ ಡ್ರಾ ಮಾಡಿ ಬರ್ತೇವೆ. ಇದಾದ ಕೆಲವೇ ಗಂಟೆಗಳಲ್ಲಿ ನಮ್ಮ ಖಾತೆಯ ಹಣವೆಲ್ಲ ಖಾಲಿಯಾಗಿರುತ್ತೆ. ಏನಾಯ್ತು ಎಂಬುದು ಅರಿವಿಗೆ ಬರುವ ಮೊದಲೇ ಕೈ ಖಾಲಿಯಾಗಿರುತ್ತದೆ.
 


Business Desk: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಹೆಚ್ಚಾಗಿವೆ. ಆನ್ಲೈನ್ (Online) ವಹಿವಾಟು ಹೆಚ್ಚಾಗ್ತಿದ್ದಂತೆ ಸೈಬರ್ ಅಪರಾಧ ಪ್ರಕರಣಗಳೂ ಏರಿಕೆಯಾಗ್ತಿವೆ. ಹಣದ ವಹಿವಾಟಿಗೆ ಈಗಿನ ದಿನಗಳಲ್ಲಿ ಜನರು ಆನ್ಲೈನ್ ಸಹಾಯ ಪಡೆಯುತ್ತಿದ್ದಾರೆ. ನಗದು ಅಗತ್ಯವಿರುವವರು ಎಟಿಎಂ (ATM)ಗಳ ಮೊರೆ ಹೋಗ್ತಾರೆ. ಎಟಿಎಂ ನಮ್ಮ ಕೆಲಸವನ್ನು ಸುಲಭಗೊಳಿಸಿದೆ. ಜೊತೆಗೆ ಅಷ್ಟೇ ಕಷ್ಟವನ್ನೂ ಹೆಚ್ಚಿಸಿದೆ. ಪ್ರತಿದಿನ ಎಟಿಎಂ ವಂಚನೆಗೆ ಸಂಬಂಧಿಸಿದ ಕೆಲವು ಹೊಸ ಪ್ರಕರಣಗಳು ಬೆಳಕಿಗೆ ಬರ್ತಿವೆ.

ಬ್ಯಾಂಕ್ ಶಾಖೆಗಳಿಗೆ ಹೋಗಿ ಹಣ ಪಡೆಯುವುದು ಕಷ್ಟ. ಎಟಿಎಂ ಅನಿವಾರ್ಯ. ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವವರು ಕೆಲವೊಂದು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.  ಎಟಿಎಂ ಬಳಕೆ ವೇಳೆ ಎಚ್ಚರಿಕೆ ವಹಿಸಿದ್ರೆ  ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇಂದು ಎಟಿಎಂಗೆ ಹೋದಾಗ ಏನೆಲ್ಲ ಎಚ್ಚರಿಕೆ ವಹಿಬೇಕು ಎಂಬುದನ್ನು ನಾವು ಹೇಳ್ತೆವೆ. 

Latest Videos

ಎಟಿಎಂಗೆ ಹೋದಾಗ ಏನು ಮಾಡ್ಬೇಕು?: ಅಪಾಯಕಾರಿ ಕಾರ್ಡ್ ಕ್ಲೋನಿಂಗ್ : ನೀವು ಹಣ ವಿತ್ ಡ್ರಾ ಮಾಡಲು ಎಟಿಎಂಗೆ ಹೋದಾಗ ಮೊದಲು ಎಟಿಎಂ ಸುರಕ್ಷಿತವಾಗಿದೆಯೇ ಎಂದು ಪರಿಶೀಲಿಸಬೇಕು. ಎಟಿಎಂನಲ್ಲಿ ದೊಡ್ಡ ಅಪಾಯವೆಂದರೆ ಕಾರ್ಡ್ ಕ್ಲೋನಿಂಗ್. ಕಾರ್ಡ್ ಕ್ಲೋನಿಂಗ್ ಮೂಲಕ ನಿಮ್ಮ ಹಣವನ್ನು ಕದಿಯಲಾಗುತ್ತದೆ. 

ನಿಮ್ಮ ವಿವರವನ್ನು ಹೀಗೆ ಖದಿಯುತ್ತಾರೆ : ಎಟಿಎಂಗೆ ಹೋದಾಗ  ನಾವು ಮೊದಲು ಯಂತ್ರದೊಳಗೆ ಕಾರ್ಡ್ ಹಾಕ್ತೇವೆ. ಕಾರ್ಡ್ ಹಾಕುವ ಸ್ಲಾಟ್‌ ಮೂಲಕ ಗ್ರಾಹಕರ ಡೇಟಾವನ್ನು ಹ್ಯಾಕರ್‌ಗಳು ಕದಿಯುತ್ತಾರೆ. ನಿಮ್ಮ ಕಾರ್ಡ್ ಡೇಟಾವನ್ನು ಸ್ಕ್ಯಾನ್ ಮಾಡಬಲ್ಲ ಸಾಧನವನ್ನು ಅವರು ಕಾರ್ಡ್ ಕ್ಲೋನಿಂಗ್ ನಲ್ಲಿ ಇರಿಸಿರುತ್ತಾರೆ. ಬ್ಲೂಟೂತ್ ಅಥವಾ ಯಾವುದೇ ಇತರ ವೈರ್ಲೆಸ್ ಸಾಧನದಿಂದ ಡೇಟಾವನ್ನು ಕದಿಯುತ್ತಾರೆ.

ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ :  ಹ್ಯಾಕರ್ಸ್ ನಿಮ್ಮ ಡೆಬಿಟ್ ಕಾರ್ಡ್ ಡೇಟಾ ಕದಿಯುತ್ತಾರೆ. ಆದ್ರೆ ಡೆಬಿಟ್ ಕಾರ್ಡ್ ಸಂಪೂರ್ಣ ಪ್ರವೇಶ ಅಥವಾ ಹಣ ವಿತ್ ಡ್ರಾಗೆ ಅವರ ಬಳಿ ಪಿನ್ ಸಂಖ್ಯೆ ಇರಬೇಕು. ಹ್ಯಾಕರ್‌ಗಳು ಪಿನ್ ಸಂಖ್ಯೆಯನ್ನು ಕ್ಯಾಮರಾ ಮೂಲಕ ಟ್ರ್ಯಾಕ್ ಮಾಡಬಹುದು. ಹಾಗಾಗಿ ಎಟಿಎಂನಲ್ಲಿ ನಿಮ್ಮ ಪಿನ್ ಸಂಖ್ಯೆಯನ್ನು ನಮೂದಿಸುವಾಗ ಅದನ್ನು ಇನ್ನೊಂದು ಕೈಯಿಂದ ಮರೆಮಾಡಿ. ಆಗ ಅವರಿಗೆ ಪಿನ್ ಸಂಖ್ಯೆ ಸಿಗುವುದಿಲ್ಲ. ನೀವು ಸಿಸಿಟಿವಿಗೆ ಕಾಣುವಂತೆ ಪಿನ್ ಸಂಖ್ಯೆಯನ್ನು ನೋಂದಾಯಿಸಿದ್ರೆ ಹ್ಯಾಕರ್ ಕೆಲಸ ಸುಲಭವಾಗುತ್ತದೆ.   

ಇದನ್ನೂ ಓದಿ: Business Ideas : 2022ರಲ್ಲಿ ಅತಿ ಹೆಚ್ಚು ಲಾಭ ತಂದುಕೊಡಲಿದೆ ಈ ಬ್ಯುಸಿನೆಸ್!

ಕಾರ್ಡ್ ಸ್ಲಾಟ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ : ಎಟಿಎಂಗೆ ಹೋದಾಗ ಎಟಿಎಂ ಯಂತ್ರದ ಕಾರ್ಡ್ ಸ್ಲಾಟನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಎಟಿಎಂ ಕಾರ್ಡ್ ಸ್ಲಾಟ್‌ನಲ್ಲಿ ಯಾವುದೇ ಟ್ಯಾಂಪರಿಂಗ್ ಮಾಡಲಾಗಿದೆ ಎನ್ನಿಸಿದ್ರೆ ಅಥವಾ ಸ್ಲಾಟ್ ಸಡಿಲವಾಗಿದ್ದರೆ ಅಥವಾ ಇನ್ನಾವುದೇ ದೋಷವಿದ್ದರೆ ಅದನ್ನು ಬಳಸಬೇಡಿ.  

ಸ್ಲಾಟ್ ನಲ್ಲಿರು ಹಸಿರು ಲೈಟ್ : ಕಾರ್ಡ್ ಸ್ಲಾಟ್‌ಗೆ ಕಾರ್ಡ್ ಹಾಕುವ ಮೊದಲು ಅದ್ರಲ್ಲಿರುವ ಬೆಳಕನ್ನು ಗಮನಿಸಿ. ಸ್ಲಾಟ್‌ನಲ್ಲಿ ಗ್ರೀನ್ ಲೈಟ್ ಆನ್ ಆಗಿದ್ದರೆ ಎಟಿಎಂ ಸುರಕ್ಷಿತವಾಗಿದೆ ಎಂದರ್ಥ. ಆದರೆ ಅದರಲ್ಲಿ ಕೆಂಪು ಅಥವಾ  ಬೇರೆ ಬೆಳಕು ಕಾಣಿಸಿದಲ್ಲಿ  ಎಟಿಎಂ ಬಳಸಬೇಡಿ.  ಇದು ಸುರಕ್ಷಿತವಾಗಿಲ್ಲ ಎಂದರ್ಥ. 

ಇದನ್ನೂ ಓದಿ:  Gold Investment: ಚಿನ್ನಾಭರಣ ಖರೀದಿ ಬದಲು ಬಂಗಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ!

ಹ್ಯಾಕರ್ ಬಲೆಗೆ ಬಿದ್ದಾಗ  ಏನು ಮಾಡ್ಬೇಕು ? : ಹ್ಯಾಕರ್‌ಗಳ ಬಲೆಗೆ ಬಿದ್ದಿದ್ದೀರಿ ಅನ್ನಿಸಿದ್ರೆ ಅಥವಾ ನಿಮ್ಮ ಖಾತೆಯಲ್ಲಿರುವ ಹಣವನ್ನು ಹ್ಯಾಕರ್ಸ್ ಖಾಲಿ ಮಾಡಿದ್ದರೆ ಪೊಲೀಸರನ್ನು ಸಂಪರ್ಕಿಸಬೇಕು. ಆದಷ್ಟು ಬೇಗ ನೀವು ಪೊಲೀಸರಿಗೆ ದೂರು ನೀಡಬೇಕಾಗುತ್ತದೆ. ಯಾವ ಎಟಿಎಂನಲ್ಲಿ ವಂಚನೆ ನಡೆದಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಹಾಗೆಯೇ ನಿಮ್ಮ ಕಾರ್ಡ್ ಬ್ಲಾಕ್ ಮಾಡುವುದು ಕೂಡ ಮುಖ್ಯವಾಗುತ್ತದೆ. 

click me!