Devas Multimedia Deal ಕಾಂಗ್ರೆಸ್‌‌ನ ಅತೀ ದೊಡ್ಡ ಹಗರಣ, ಸುದ್ದಿಗೋಷ್ಠಿಯಲ್ಲಿ ದೇವಾಸ್ ಆಂತರಿಕ್ಷ್ ಡೀಲ್ ಬಿಚ್ಚಿಟ್ಟ ನಿರ್ಮಲಾ!

By Suvarna NewsFirst Published Jan 18, 2022, 5:58 PM IST
Highlights
  • ಅಂತರಿಕ್ಷ್ ದೇವಾಸ್ ಮಲ್ಟಿಮೀಡಿಯಾ ಒಪ್ಪಂದ ಹಗರಣ
  • ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಅತೀ ದೊಡ್ಡ ಹಗರಣ
  • ಕಾನೂನು ಹೋರಾಟದಲ್ಲಿ ಮೋದಿ ಸರ್ಕಾರಕ್ಕೆ ಗೆಲುವು
  • ಹಗರಣ ಕುರಿತು ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿ
     

ನವದೆಹಲಿ(ಜ.18):  ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಭಾರತದಲ್ಲಿ ಆಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಡೀಲ್ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಈ ಪ್ರಕರಣ ಕುರಿತು ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 16 ವರ್ಷಗಳ ಹಿಂದಿನ ಒಪ್ಪಂದ ಹಾಗೂ ಕಾಂಗ್ರೆಸ್ ಸರ್ಕಾರ ನಡೆಸಿದ ಭ್ರಷ್ಟಾಚಾರವನ್ನು ಬಿಚ್ಚಿಟ್ಟಿದ್ದಾರೆ. ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿದ ಮತ್ತೊಂದು ಅತೀ ದೊಡ್ಡ ಹಗರಣ ಇದು ಎಂದು ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸೋಮವಾರ(ಜ.18) ಅಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ನಡುವಿನ ಒಪ್ಪಂದ ರದ್ದು ಮಾಡಿದ ಕೇಂದ್ರ ಸರ್ಕಾರ ಪರಿಹಾರ ಮೊತ್ತವಾಗಿ 7,800 ಕೋಟಿ ರೂಪಾಯಿ ನೀಡಬೇಕು ದೇವಾಸ್ ಮಲ್ಟಿಮೀಡಿಯಾ ಕಾನೂನು ಹೋರಾಟ ಮಾಡಿತ್ತು. ಈ ವೇಳೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (NCLAT)ನೀಡಿದ ತೀರ್ಪವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿತ್ತು. ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಕಂಪನಿಯನ್ನು ಮುಚ್ಚಲು ಕೋರಿದ್ದ ಆಂತರಿಕ್ಷ್ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತ್ತು. ಈ ಕುರಿತು ಕಾಂಗ್ರೆಸ್ ಸರ್ಕಾರ ನಡೆಸಿದ ಹಗರಣವನ್ನು ನಿರ್ಮಲಾ ಸೀತಾರಾಮನ್ ದಾಖಲೆ ಸಮೇತ ವಿವರಿಸಿದ್ದಾರೆ.

Budget 2022: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಪ್ರಾರಂಭ; ಬಜೆಟ್ ಬಗ್ಗೆ ನಿಮಗೆಷ್ಟು ಗೊತ್ತು?

ಯುಪಿಎ ಸರ್ಕಾರ 2005ರಲ್ಲಿ ಒಪ್ಪಂದಕ್ಕೆ ಸಹಿ ಮಾಡಿರುವುದು ವಂಚನೆ ಕಂಪನಿ ಜೊತೆಗೆ ಅನ್ನೋದು 2011ರಲ್ಲಿ ಅರಿವಿಗೆ ಬಂದಿದೆ. ಹೀಗಾಗಿ ಸರ್ಕಾರದ ಅಂಗ ಸಂಸ್ಥೆಯಾಗಿರುವ ಆಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಒಪ್ಪಂದವನ್ನು ರದ್ದುಗೊಳಿಸಿತು. ವಂಚನೆ ನಡೆಯುತ್ತಿದೆ ಅನ್ನೋ ಕಾರಣಕ್ಕೆ ಒಪ್ಪಂದವನ್ನು ಕಾಂಗ್ರೆಸ್ ಸರ್ಕಾರ ರದ್ದು ಮಾಡಿತು. ಬಳಿಕ ಈ ವಂಚನೆಯಿಂದ ಭಾರತಕ್ಕೆ ಆದ ನಷ್ಟ, ಕಾನೂನು ಹೋರಾಟದ ಮೂಲಕ ದೇವಾಸ್ ಕೇಳಿದ ಪರಿಹಾರ ಮೊತ್ತದ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕಾನೂನು ಹೋರಾಟ ನಡೆಸದೆ ಸುಮ್ಮನೆ ಕೂತಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 

Antrix appeared in agreement with Devas in 2005 during the UPA govt. It was a fraud deal. UPA govt cancelled this deal in 2011: Finance Minister Smt.

— BJP LIVE (@BJPLive)

ಯುಪಿ ಒಪ್ಪಂದ ರದ್ದು ಮಾಡಿದ ಬಳಿಕ ಇದೇ ಪ್ರಕರಣ ಸಂಬಂಧಿಸಿ ಯುಪಿಎ ಸಚಿವರೊಬ್ಬರ ಬಂಧನವಾಗಿತ್ತು. ಸರ್ಕಾರದ ಅಂಗ ಸಂಸ್ಥೆಯಾಗಿರುವ ಆಂತರಿಕ್ಷ್ ಹಾಗೂ ದೇವಾಸ್ ಮಲ್ಟಿಮೀಡಿಯಾ ಜೊತೆಗಿನ ಒಪ್ಪಂದ ಕೇಂದ್ರ ಕ್ಯಾಬಿನೆಟ್‌ಗೆ ತಿಳಿದಿರಲಿಲ್ಲ ಎಂದು ಅಂದಿನ ಮಂತ್ರಿ ಕಪಿಲ್ ಸಿಬಲ್ ಹೇಳಿಕೆ ನೀಡಿದ್ದರು. ಇದು ಕಾಂಗ್ರೆಸ್ ಭ್ರಷ್ಟಾಚಾರ ಹಾಗೂ ಆಡಳಿತದ ವೈಖರಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

Budget 2022 :ಕೈಗಾರಿಕಾ ವಲಯಕ್ಕೆ ಸಂಬಂಧಿಸಿ ವಿತ್ತ ಸಚಿವರಿಗೆ 12 ಸಲಹೆ ನೀಡಿದ FICCI

ಇಸ್ರೋ ಸ್ಯಾಟಲೈಟ್ ಸೇವೆಗಳ ನೀಡುವ GSLV 6 ಹಾಗೂ GSLV 6A ಉಪಗ್ರಹವನ್ನು ಇನ್ನು ಲಾಂಚ್ ಮಾಡಿರಲಿಲ್ಲ. ಅಷ್ಟರಲ್ಲೇ  ಸ್ಯಾಟಲೈಟ್ ಮಲ್ಟಿಮೀಡಿಯಾ ಸೇವೆಗಳ ಶೇಕಡಾ 90 ರಷ್ಟು ಹಕ್ಕನ್ನು ದೇವಾಸ್ ಮಲ್ಟಿಮೀಡಿಯಾ ಕಂಪನಿಗೆ ಮಾರಾಟ ಮಾಡಲಾಗಿತ್ತು. ಈ ಮೂಲಕ ಕೋಟಿ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಕಾಂಗ್ರೆಸ್ ಸರ್ಕಾರದ ಮೂಗಿನ ನೇರದಲ್ಲಿ ನಡೆದಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುಪ್ರೀಂ ಕೋರ್ಚ್ ಈ ಪ್ರಕರಣದ ಗಂಭೀರತೆ ಅರಿತು ಕೂಲಂಕೂಷ ವಿಚಾರಣೆ ನಡೆಸಿ ಮಹತ್ವದ ಹಾಗೂ ಐತಿಹಾಸಿಕ ತೀರ್ಪು ನೀಡಿದೆ. ಇದು ಮೋದಿ ಸರ್ಕಾರದ ಗೆಲುವು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಒಪ್ಪಂದದ ಮೂಲಕ ಇಸ್ರೋ ಪರಿಶ್ರಮದ ಸ್ಯಾಟಲೈಟ್ ಸೇವೆಗಳನ್ನು ಭಾರತದಲ್ಲಿ ನೀಡಲು ದೇವಾಸ್ ಮಲ್ಟಿಮೀಡಿಯಾ ಕಂಪನಿ ಹಕ್ಕು ಪಡೆದಿತ್ತು. ಒಪ್ಪಂದ ವೇಳೆ ದೇವಾಸ್ ಸರ್ವೀಸಸ್ ವಿಭಾಗ, ದೇವಾಸ್ ಮಲ್ಟಿಮೀಡಿಯಾ ಡಿವೈಸ್ ಮೂಲಕ ಸ್ಯಾಟಲೈಟ್ ಸೇವೆಗಳನ್ನು ಭಾರತದಲ್ಲಿ ದೇವಾಸ್ ಟೆಕ್ನಾಲಜಿ ವಿಭಾಗದ ಮೂಲಕ ನೀಡಲಾಗುತ್ತದೆ ಎಂದು ದೇವಾಸ್ ಮಲ್ಟಿಮೀಡಿಯಾ ಕಂಪನಿ ಹೇಳಿತ್ತು. ಆದರೆ ಒಪ್ಪಂದ ವೇಳೆ ಹಾಗೂ ಬಳಿಕ ದೇವಾಸ್ ಮಲ್ಟಿಮೀಡಿಯಾದಲ್ಲಿ ದೇವಾಸ್ ಸರ್ವೀಸಸ್, ದೇವಾಸ್ ಟೆಕ್ನಾಲಜಿ ಎಂಬ ಸಂಸ್ಥೆಗಳೇ ಇರಲಿಲ್ಲ. ಇಷ್ಟೇ ಅಲ್ಲ ಸೇವೆ ನೀಡುವ ಎಲ್ಲಾ ಭರವಸೆಗಳು ಕೇವಲ ಒಪ್ಪಂದಕ್ಕಾಗಿ ಮಾತ್ರ ಸೀಮಿತವಾಗಿತ್ತು. ಇದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಇದೇ ವಿಚಾರವನ್ನು ನಿರ್ಮಲಾ ಸೀತಾರಮನ್ ಸುದ್ದಿಗೋಷ್ಠಿಯಲ್ಲಿ ಒತ್ತಿ ಹೇಳಿದರು.

ಏನಿದು ದೇವಾಸ್ ಮಲ್ಟಿಮೀಡಿಯಾ ಡೀಲ್ ಪ್ರಕರಣ:
ಬೆಂಗಳೂರಿನ ದೇವಾಸ್ ಮಲ್ಟಿಮೀಡಿಯಾ ಸುಳ್ಳು ಮಾಹಿತಿ ನೀಡಿ ವಿದೇಶದಲ್ಲಿ ಭಾರಿ ಹಣ ಹೂಡಿಕೆ ಮಾಡಿಕೊಂಡಿತ್ತು. ಇದರ ಜೊತೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಅಂಗಸಂಸ್ಥೆಯಾದ  ಆಂತರಿಕ್ಷ್ ಜೊತೆ ಅಕ್ರಮ ಒಪ್ಪಂದ ಮಾಡಿಕೊಂಡಿತ್ತು. ಸ್ಯಾಟಲೈಟ್ ಮಲ್ಟಿಮಿಡಿಯಾ ಹಕ್ಕು ಹೊಂದಿದೆ ಎಂದು ಸುಳ್ಳು ಮಾಹಿತಿ ಮೂಲಕ ವಿದೇಶಗಳಿಂದ ಹಣ ಹೂಡಿಕೆ ಮಾಡಿ ಅತೀ ದೊಡ್ಡ ಅಕ್ರಮ ಎಸೆಗಿತ್ತು. ಇದು ಸಿಬಿಐ ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಸಿಬಿಐ ಪ್ರಕರಣ ವಿಚಾರಣೆ ಬೆನ್ನಲ್ಲೇ ಇಡೀ ದೇವಾಸ್ ಮಲ್ಟಿಮೀಡಿಯಾದ 80 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿತ್ತು. 

Budget 2022 Expectations: ಕೋವಿಡ್ ಸೋಂಕಿತರು, ಕುಟುಂಬಕ್ಕೆ ಈ ಬಾರಿ ಬಜೆಟ್ ನಲ್ಲಿ ತೆರಿಗೆ ವಿನಾಯ್ತಿ ಘೋಷಿಸುತ್ತಾರಾ?

ದೇವಾಸ್ ಮಲ್ಟಿ ಮೀಡಿಯಾ ಹುಟ್ಟಿಕೊಂಡಿದ್ದು ಹೇಗೆ?
ಇಸ್ರೋದಲ್ಲಿ ಸೇವೆ ಸಲ್ಲಿಸಿದ ನಿವೃತ್ತರಾದ ಕೆಲ ಉದ್ಯೋಗಿಗಳು ಜೊತೆ ಸೇರಿ ದೇವಾಸ್ ಮಲ್ಟಿ ಮೀಡಿಯಾ ಸಂಸ್ಥೆ ಹುಟ್ಟುಹಾಕಲಾಯಿತು. ಬೆಂಗಳೂರಿನಲ್ಲಿ ಈ ಸಂಸ್ಥೆ ಆರಂಭಗೊಂಡಿತು. 2004ರಲ್ಲಿ ಆರಂಭಗೊಂಡ ಈ ಸಂಸ್ಥೆ ಇಸ್ರೋ ಮಾಜಿ ಉದ್ಯೋಗಿಗಳ ಕಾರಣ ಸುಲಭವಾಗಿ ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿತು. ಭಾರತದಲ್ಲಿ ಮಲ್ಟಿ ಮೀಡಿಯಾ ಸೇವೆ ಒದಗಿಸುವುದಾಗಿ  ಹೇಳಿ ಇಸ್ರೋ ಒಪ್ಪಂದ ಕುದುರಿಸಿತ್ತು. 2005ರಲ್ಲಿ ಇಸ್ರೋದ ಅಂಗ ಸಂಸ್ಥೆಯಾಗಿರುವ ಅಂತರಿಕ್ಷ್ ಕಾರ್ಪೋರೇಶನ್ ಲಿಮಿಟೆಡ್ ಜೊತೆಗೂ ಒಪ್ಪಂದ ಮಾಡಿಕೊಂಡಿತ್ತು. ಬಳಿಕ ಇಸ್ರೋ ಹೆಸರು ಬಳಸಿಕೊಂಡು ದೇವಾಸ್ ಮಲ್ಟಿ ಮೀಡಿಯಾ ಕಂಪನಿ ವಿದೇಶಗಳಿಂದ ಹಣ ಹೂಡಿಕೆ ಮಾಡಿತ್ತು. ವಿದೇಶಿ ಹಲವು ಕಂಪನಿಗಳು ದೇವಾಸ್ ಮಲ್ಟಿಮೀಡಿಯಾದಲ್ಲಿ ಹಣ ಹೂಡಿಕೆ ಮಾಡಿತ್ತು.

ಆಂತರಿಕ್ಷ್ ಅಥವಾ ಅಂತರಿಕ್ಷ್ ಕಾರ್ಪೋರೇಶ್ ಲಿಮಿಡೆಟ್ ದೇವಾಸ್ ಜೊತೆಗಿನ ಒಪ್ಪಂದವನ್ನು 2011ರಲ್ಲಿ ಯುಪಿ ಸರ್ಕಾರದ ಸೂಚನೆಯಂತೆ ರದ್ದು ಮಾಡಿತು. ಇದರ ವಿರುದ್ದ ದೇವಾಸ್ ಮಲ್ಟಿಮೀಡಿಯಾ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಹಾಗೂ ಅಂತಾರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ ಕದ ತಟ್ಟಿತ್ತು. 2011ರಲ್ಲಿ ಯುಪಿ ಸರ್ಕಾರ ಒಪ್ಪಂದ ರದ್ದು ಮಾಡಿ ಆಂತರಿಕ್ಷ ಸಂಸ್ಥೆಗೆ ಈ ಭ್ರಷ್ಟಾಚಾರಾ ಹಾಗೂ ವಂಚನೆ ಕುರಿತು ದೇವಾಸ್ ಮಲ್ಟಿಮೀಡಿಯಾ ಜೊತೆಗೆ ವ್ಯವಹರಿಸಲು ಮಧ್ಯಸ್ಥಗಾರನ ನೇಮಕ ಮಾಡಲು ಸೂಚಿಸಿತ್ತು. ಬಳಿಕ ಯುಪಿಎ ಸರ್ಕಾರ ಈ ಕುರಿತು ಸುಮ್ಮನಾಯಿತು. ಆಂತರಿಕ್ಷ್ ಸಂಸ್ಥೆ ಸರ್ಕಾರದ ಯಾವುದೇ ಸೂಚನೆ ಪಾಲಿಸಲಿಲ್ಲ. ಇತ್ತ ದೇವಾಸ್ ಮಲ್ಟಿ ಮೀಡಿಯಾ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ಹೋರಾಟ ಚುರುಕುಗೊಳಿಸಿತು. ಇತ್ತ ಯುಪಿ ಸರ್ಕಾರ ಯಾವುದೇ ಪ್ರಯತ್ನ ನಡೆಸದೆ ಸುಮ್ಮನಾಯಿತು. ಇದರ ಪರಿಣಾಮ 2015ರಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ ಕೇಂದ್ರ ಸರ್ಕಾರದ ಅಂಗಸಂಸ್ಥೆ ಆಂತರಿಕ್ಷ್ ಒಪ್ಪಂದ ರದ್ದು ಮಾಡಿ ನಷ್ಟಮಾಡಿದ ಕಾರಣಕ್ಕೆ 7,800 ಕೋಟಿ ರೂಪಾಯಿ ಪರಿಹಾರವನ್ನು ದೇವಾಸ್ ಮಲ್ಟಿಮೀಡಿಯಾ ಕಂಪನಿಗೆ ನೀಡಲು ಆದೇಶಿಸಿತ್ತು.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕುರಿತು ಈ ಪ್ರಕರಣ ಕುರಿತು ಕಾನೂನು ಹೋರಾಟಕ್ಕೆ ಮುಂದಾಗಿತ್ತು. ಇತ್ತ ದೇವಾಸ್ 2018ರಲ್ಲಿ ಅಮೆರಿಕಾ ಸೇರಿದಂತೆ  ವಿಶ್ವದ ಹಲೆವು ಕೋರ್ಟ್‌ಗಳಲ್ಲಿ ಮಧ್ಯಸ್ಥಿಕೆ ತೀರ್ಪು ಜಾರಿ ಮಾಡುವಂತೆ ಮನವಿ ಮಾಡಿತ್ತು. ಇದೇ ವೇಳೆ ಅಮೆರಿಕ ನ್ಯಾಯಾಲಯ 2020ರಲ್ಲಿ ದೇವಾಸ್ ಪರ ತೀರ್ಪು ನೀಡಿತ್ತು. ಆದರೆ ಸತತ ಹೋರಾಟ ಮಾಡಿದ ಕೇಂದ್ರ ಸರ್ಕಾರ ಇದೀಗ ಒಪ್ಪಂದ ಹಾಗೂ ದೇವಾಸ್ ನಡೆಸಿದ ಅಕ್ರಮ ಹಾಗೂ ವಂಚನೆಗಳನ್ನು ದಾಖಲೆ ಸಮೇತ ಕೋರ್ಟ್ ಮುಂದೆ ಹಾಜರಪಡಿಸಿತು. ಹೀಗಾಗಿ ನಿನ್ನೆ ಸುಪ್ರೀಂ ಕೋರ್ಟ್ ದೇವಾಸ್ ಮಲ್ಟಿಮೀಡಿಯಾ ಸಂಸ್ಥೆಯನ್ನು ಮುಚ್ಚುವಂತೆ ಕೋರಿದ್ದ ಆಂತರಿಕ್ಷ್ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು. 

click me!