
ನವದೆಹಲಿ: ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳು ಸಾಲ ಮನ್ನಾ ಮೊರೆ ಹೋಗಿರುವ ಬೆನ್ನಲ್ಲೇ, ರೈತರ ಋುಣಮುಕ್ತಿ ಎಂಬುದು ಚುನಾವಣಾ ಭರವಸೆಗಳ ಭಾಗವಾಗಿರಬಾರದು ಎಂದು ಹೆಸರಾಂತ ಆರ್ಥಿಕ ತಜ್ಞ ಹಾಗೂ ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ. ಅಲ್ಲದೆ, ಚುನಾವಣಾ ಭರವಸೆಗಳಿಂದ ಸಾಲ ಮನ್ನಾವನ್ನು ಹೊರಗಿಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಸಾಲ ಮನ್ನಾ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ
ಸಾಲ ಮನ್ನಾದಿಂದ ಕೃಷಿ ಕ್ಷೇತ್ರದ ಹೂಡಿಕೆಗೆ ಅಡ್ಡಿಯಾಗುತ್ತದೆ. ಅಲ್ಲದೆ ಸಾಲ ಮನ್ನಾ ಮಾಡುವ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೂ ಒತ್ತಡ ಉಂಟಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೃಷಿ ಕ್ಷೇತ್ರದ ಸಂಕಷ್ಟದ ಬಗ್ಗೆ ನಿಜಕ್ಕೂ ಆಲೋಚನೆ ಮಾಡಬೇಕು. ಆದರೆ ತೀವ್ರ ತೊಂದರೆ ಎದುರಿಸುತ್ತಿರುವ ರೈತರಿಗೆ ಸಾಲ ಮನ್ನಾದಿಂದ ಲಾಭವಾಗುತ್ತಿದೆಯೇ? ಎಂದು ಕೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.