
ನವದೆಹಲಿ(ಜು.25): ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲಾಗದೆ ಪರದಾಡುತ್ತಿದೆ. ಇದು ಏಷ್ಯಾದ ಹಲವು ರಾಷ್ಟ್ರಗಳಿಗೆ ಎಚ್ಚರಿಕೆಯನ್ನು ರವಾನಿಸಿದೆ. ಇದರ ಬೆನ್ನಲ್ಲೇ ಬೂರ್ಮ್‌ಬರ್ಗ್ ಅರ್ಥಶಾಸ್ತ್ರಜ್ಞರ ಸಮೀಕ್ಷಾ ವರದಿ ಪ್ರಕಟಗೊಂಡಿದೆ. ಏಷ್ಯಾದ 14 ರಾಷ್ಟ್ರಗಳು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಈ ವರದಿ ಹೇಳುತ್ತಿದೆ. ಈ ವರದಿಯಲ್ಲಿ ಭಾರತ ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಇಲ್ಲ ಎಂದಿದೆ. ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ತಮ್ಮ ಬಡ್ಡಿದರನ್ನು ಹೆಚ್ಚಿಸಿದೆ. ಇತ್ತ ಅತೀಯಾದ ಸಾಲಗಳಿಂದ ಏಷ್ಯಾ ರಾಷ್ಟ್ರಗಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿದೆ ಎಂದು ಸಮೀಕ್ಷಾ ವರದಿ ಹೇಳಿದೆ. ಶ್ರೀಲಂಕಾ ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಒದ್ದಾಡುತ್ತಿದೆ. ಮುಂದಿನ ವರ್ಷದಲ್ಲಿ ಶ್ರೀಲಂಕಾ ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಶೇಕಡಾ 85 ರಷ್ಟು ಎಂದಿದೆ. ನಂತರದ ಸ್ಥಾನದಲ್ಲಿರುವುದು ನ್ಯೂಜಿಲೆಂಡ್. ನ್ಯೂಜಿಲೆಂಡ್‌ನಲ್ಲಿ ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಶೇಕಡಾ 33 ಎಂದಿದೆ. ಹೀಗೆ ಆರ್ಥಿಕ ಹಿಂಜರಿತ ಎದುರಿಸುವ ದೇಶಗಳ ಪೈಕಿ ಪಾಕಿಸ್ತಾನ ಕೂಡ ಇದೆ.
ಕ್ರೇಂದ್ರಿಯ ಬ್ಯಾಂಕ್‌ಗಳು ಹಣದುಬ್ಬರ ತಗ್ಗಿಸಲು ಬಡ್ಡಿದರ ಹೆಚ್ಚಿಸುತ್ತಿದೆ. ಇದು ಆರ್ಥಿಕತೆಯ ಬುಡ ಅಲುಗಾಡಿಸುತ್ತಿದೆ. ಅತೀಯಾದ ಸಾಲ, ಸರ್ಕಾರದ ಉಚಿತ ಘೋಷಣೆಗಳು ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಈ ಕಾರಣಗಳಿಂದ ಸಾಲ ಸಂದಾಯದ ಬದಲು ಏರಿಕೆಯಾಗುತ್ತಲೇ ಇದೆ. ಇದು ದೇಶದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಇದೀಗ ಬ್ಲೂಮ್‌ಬರ್ಗ್ ವರದಿ ಈ ಆತಂಕವನ್ನು ಹೆಚ್ಚಿಸಿದೆ.
ರಾನಿಲ್ ವಿಕ್ರಮಸಿಂಘೆಗೆ ಒಲಿದ ಶ್ರೀಲಂಕಾ ಅಧ್ಯಕ್ಷ ಸ್ಥಾನ, ಭಾರತಕ್ಕೆ ನಿರಾಳ, ಚೀನಾಗೆ ಶಾಕ್!
ಆರ್ಥಿಕ ಹಿಂಜರಿತ ಹೊಡೆತ ಅನುಭವಿಸಲಿರುವ ದೇಶಗಳ ಪೈಕಿ ಶ್ರೀಲಂಕಾ, ನ್ಯೂಜಿಲೆಂಡ್ ನಂತರದ ಸ್ಥಾನ ಸೌತ್ ಕೊರಿಯಾ ಪಡೆದಿದೆ. ಸೌತ್ ಕೊರಿಯಾ ಶೇಕಡಾ 25 ರಷ್ಟು ಆರ್ಥಿಕ ಹಿಂಚರಿತ ಅನುಭವಿಸುವ ಸಾಧ್ಯತೆ ಇದೆ ಎಂದಿದೆ. ಜಪಾನ್ ಶೇಕಡಾ 25 ರಷ್ಟು ಆರ್ಥಿಕ ಹೊಡೆತ ಎದುರಿಸಲಿದೆ ಎಂದಿದೆ. ಇನ್ನು ಚೀನಾ, ಹಾಂಕ್‌ಕಾಂಗ್, ಆಸ್ಟ್ರೇಲಿಯಾ, ತೈವಾನ್ ಹಾಗೂ ಪಾಕಿಸ್ತಾನ ಶೇಕಡಾ 20 ರಷ್ಟು ಆರ್ಥಿಕ ಹೊಡೆತ ಅನುಭವಿಸಲಿದೆ ಎಂದಿದೆ. ಮಲೇಷಿಯಾ ಶೇಕಡಾ 13, ವಿಯೆಟ್ನಾ ಹಾಗೂ ಥಾಯ್ಲೆಂಡ್ ಶೇಕಡಾ 10ರಷ್ಟು ಆರ್ಥಿಕ ಹಿಂಜರಿತಕ್ಕೊಳಗಾಗಲಿದೆ ಎಂದಿದೆ. ಪಿಲಿಫೇನ್ಸ್ ಶೇಕಡಾ 3 ರಷ್ಟು ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಇದೆ ಎಂದಿದೆ.
ಭಾರತದ ಕುರಿತು ಬ್ಲೂಮ್‌ಬರ್ಗ್ ಸಮೀಕ್ಷಾ ವರದಿ ಬಿಡುಗಡೆ ಮಾಡಿದೆ. ಭಾರತ ಆರ್ಥಿಕ ಹಿಂಜರಿತ ಎದುರಿಸುವ ಪರಿಸ್ಥಿತಿ ಶೂನ್ಯ ಎಂದಿದೆ. ಯುರೋಪ್ ಹಾಗೂ ಅಮೆರಿಕಾಗೆ ಹೋಲಿಸಿದರೆ ಏಷ್ಯಾದ ಆರ್ಥಿಕತೆ ಸ್ಥಿತಿಸ್ಥಾಪಕತ್ವ ಹೊಂದಿದೆ. ಇಂಧನ ಬೆಲೆ ಏರಿಕೆ, ಹಣದುಬ್ಬರ, ಬಡ್ಡಿದರ ಏರಿಕೆಯಿಂದ ಜರ್ಮನಿ ಫ್ರಾನ್ಸ್ ದೇಶಗಳು ತೀವ್ರ ಹೊಡೆತ ಅನುಭವಿಸಿದೆ ಎಂದು ಮೂಡೀಸ್ ಅನಾಲಿಟಿಕ್ಸ್ ಏಷ್ಯಾ ಪೆಸಿಫಿಕ್ ಅರ್ಥಶಾಸ್ತ್ರಜ್ಞ ಸ್ಟೀವನ್ ಕೊಕ್ರೇನ್ ಹೇಳಿದ್ದಾರೆ.
ಅಮೆರಿಕದ ಹಣದುಬ್ಬರ 41 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ; ಭಾರತಕ್ಕೂ ತಟ್ಟಲಿದೆ ಬಿಸಿ
ಈ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶ ಹೇಳಲಾಗಿದೆ. ಒಟ್ಟಾರೆ ಏಷ್ಯಾದ ಹಿಂಜರಿತ ಅಪಾಯ ಶೇಕಡಾ 20 ರಿಂದ 25 ಎಂದಿದೆ. ಆದರೆ ಅಮೆರಿಕ ಶೇಕಡಾ 40, ಯುರೋಪ್ ಶೇಕಡಾ 50 ರಿಂದ 55 ರಷ್ಟಿದೆ ಎಂದಿದೆ. ಮುಂದಿನ 12 ತಿಂಗಳಲ್ಲಿ ಅಮರಿಕ ಆರ್ಥಿಕ ಹಿಂಜರಿತ ಸಾಧ್ಯತೆ ಶೇಕಡಾ 38 ಎಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.