
Business Desk:ಸುರಕ್ಷಿತ ಭವಿಷ್ಯ ಹಾಗೂ ಕಷ್ಟಪಟ್ಟು ಗಳಿಸಿದ ಹಣ ಕಳೆದುಕೊಳ್ಳುವ ಭಯದಿಂದ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದ ಹೂಡಿಕೆದಾರರಿಗೆ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಯೋಜನೆಗಳು ಇಂದಿಗೂ ಅಚ್ಚುಮೆಚ್ಚು. ಬ್ಯಾಂಕ್ ಹಾಗೂ ಅಂಚೆ ಕಚೇರಿ ಉಳಿತಾಯ ಯೋಜನೆಗಳಂತೆ ಮಧ್ಯಮ ವರ್ಗದ ಜನರು ಹೂಡಿಕೆಗೆ ಆಯ್ಕೆ ಮಾಡುವ ಮತ್ತೊಂದು ಸಂಸ್ಥೆಯೆಂದ್ರೆ ಅದು ಎಲ್ಐಸಿ. ಇದೇ ಕಾರಣಕ್ಕೆ ಎಲ್ಐಸಿ ಕೂಡ ವಿವಿಧ ವಯೋಮಾನದ ಜನರಿಗೆ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿದೆ. ಸರ್ಕಾರ ಬೆಂಬಲಿತ ಸಂಸ್ಥೆಯಾಗಿರುವ ಎಲ್ಐಸಿಯಲ್ಲಿ ಎಲ್ಲ ವಯಸ್ಸಿನ ಜನರಿಗೆ ಅನ್ವಯವಾಗುವ ಪಾಲಿಸಿಗಳಿವೆ. ಎಲ್ಐಸಿಯ ಪ್ರಮುಖ ಪಾಲಿಸಿಗಳಲ್ಲಿ ಎಲ್ಐಸಿ ಧನ್ ಸಂಚಯ್ ಪಾಲಿಸಿ ಕೂಡ ಒಂದು. ಇತ್ತೀಚೆಗೆ ಎಲ್ಐಸಿ ಪರಿಚಯಿಸಿರುವ ಈ ಜೀವ ವಿಮಾ ಪ್ಲ್ಯಾನ್ ಪಾಲಿಸಿದಾರನಿಗೆ ಸುರಕ್ಷತೆ ಹಾಗೂ ಉಳಿತಾಯ ಎರಡನ್ನೂ ಕಲ್ಪಿಸುತ್ತದೆ. ಪಾಲಿಸಿ ಅವಧಿಯಲ್ಲಿ ಪಾಲಿಸಿದಾರ ಅಕಾಲಿಕ ಮರಣ ಹೊಂದಿದ್ರೆ, ಆಗ ಈ ಪ್ಲ್ಯಾನ್ ಆತನ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುತ್ತದೆ. ಅಷ್ಟೇ ಅಲ್ಲ, ಭರವಸೆ ನೀಡಿರುವ ಮೊತ್ತವನ್ನು ಕೂಡ ಪಾವತಿಸುತ್ತದೆ.
ಎಷ್ಟು ಅವಧಿ?
ಎಲ್ಐಸಿ ಧನ್ ಸಂಚಯ್ ಪಾಲಿಸಿ (LIC Dhan Sanchay Policy) ಕನಿಷ್ಠ 5 ವರ್ಷಗಳಿಂದ ಗರಿಷ್ಠ 15 ವರ್ಷಗಳ ಅವಧಿಗೆ ಲಭ್ಯವಿದೆ.
ಆದಾಯ ತೆರಿಗೆ ಪಾವತಿಯಲ್ಲಿ ಅಕ್ಷಯ್ ಕುಮಾರ್‌ಗೆ ಅಗ್ರಸ್ಥಾನ, ಸನ್ಮಾನ್ ಪ್ರಮಾಣಪತ್ರ ಗೌರವ ಪಡೆದ ನಟ!
ಪ್ರೀಮಿಯಂ ಹೇಗೆ?
ಈ ಪಾಲಿಸಿಯಲ್ಲಿ ವಾರ್ಷಿಕ ಪ್ರೀಮಿಯಂ ಪಾವತಿ (annualised premium) ಅಥವಾ ಸಿಂಗಲ್ ಪ್ರೀಮಿಯಂ ಪಾವತಿ (Single Premium payments) ಆಯ್ಕೆಗಳಿವೆ.
22 ಲಕ್ಷ ರೂ. ಗಳಿಸೋದು ಹೇಗೆ?
ಎಲ್ಐಸಿ ಧನ್ ಸಂಚಯ್ ಪಾಲಿಸಿ ನಿರಂತರ ಅಥವಾ ವಾರ್ಷಿಕ ಪ್ರೀಮಿಯಂ ಪಾವತಿ ಆಧಾರದಲ್ಲಿ ಪ್ರಯೋಜನಗಳನ್ನು ಪಡೆಯಲು ನಾಲ್ಕು ಆಯ್ಕೆಗಳನ್ನು ಒದಗಿಸುತ್ತದೆ.
-ನಿರಂತರ/ಸೀಮಿತ ಪ್ರೀಮಿಯಂ ಪಾವತಿ:
ಆಯ್ಕೆ ಎ- ಲೆವೆಲ್ ಇನ್ ಕಮ್ ಬೆನಿಫಿಟ್
ಆಯ್ಕೆ ಬಿ- ಇನ್ ಕ್ರಿಸಿಂಗ್ ಇನ್ ಕಮ್ ಬೆನಿಫಿಟ್
-ಸಿಂಗಲ್ ಪ್ರೀಮಿಯಂ ಪಾವತಿ:
ಆಯ್ಕೆ ಸಿ-ಸಿಂಗಲ್ ಪ್ರೀಮಿಯಂ ಲೆವೆಲ್ ಇನ್ ಕಮ್ ಬೆನಿಫಿಟ್
ಆಯ್ಕೆ ಡಿ-ಸಿಂಗಲ್ ಪ್ರೀಮಿಯಂ ಎನ್ಯಾನ್ಸಡ್ ಕವರ್ ವಿಥ್ ಲೆವೆಲ್ ಇನ್ ಕಮ್ ಬೆನಿಫಿಟ್
ಎ ಮತ್ತು ಬಿ ಆಯ್ಕೆಗಳ ಸಂದರ್ಭದಲ್ಲಿ ಪಾಲಿಸಿದಾರ ಮರಣ ಹೊಂದಿದ್ರೆ ಎಲ್ಐಸಿ ಧನ್ ಸಂಚಯ್ ಪಾಲಿಸಿ ಅಡಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 3.30ಲಕ್ಷ ರೂ. ಇನ್ನು ಆಯ್ಕೆ ಸಿಗೆ ಭರವಸೆ ನೀಡಿರುವ ಕನಿಷ್ಠ ಮೊತ್ತ 2.50ಲಕ್ಷ ರೂ. ಆಯ್ಕೆ ಡಿಗೆ ಅಂದರೆ ಸಿಂಗಲ್ ಪ್ರೀಮಿಯಂಗೆ ಭರವಸೆ ನೀಡಿರುವ ಕನಿಷ್ಠ ಮೊತ್ತ 22 ಲಕ್ಷ ರೂ.
DA Update:ಸರ್ಕಾರಿ ಉದ್ಯೋಗಿಗಳಿಗೆ ಶುಭಸುದ್ದಿ; ಈ ತಿಂಗಳು ಶೇ.4ರಷ್ಟು ತುಟ್ಟಿ ಭತ್ಯೆ ಏರಿಕೆ?
ವಯೋಮಿತಿ
ಈ ಪಾಲಿಸಿ ಆನ್ ಲೈನ್ (online) ಹಾಗೂ ಆಪ್ ಲೈನ್ (offline) ಎರಡೂ ಮಾದರಿಯಲ್ಲಿ ಲಭ್ಯವಿದೆ. ಈ ಪಾಲಿಸಿ ಪಡೆಯಲು ವಯೋಮಿತಿ (Age limit) 3 ವರ್ಷ. ಇನ್ನು ಪಾಲಿಸಿ ಅವಧಿಯ ಆಯ್ಕೆ ಆಧಾರದಲ್ಲಿ ವಯೋಮಿತಿ ಕೂಡ ಬದಲಾಗುತ್ತದೆ. ಮೇಲೆ ತಿಳಿಸಿದಂತೆ ನೀವು ಆಯ್ಕೆ ಎ ಮತ್ತು ಬಿ ಆಯ್ದುಕೊಂಡರೆ ಗರಿಷ್ಠ ವಯೋಮಿತಿ 50ವರ್ಷಗಳು. ಇನ್ನು ಆಯ್ಕೆ ಸಿಗೆ ಗರಿಷ್ಠ ವಯೋಮಿತಿ 65 ವರ್ಷ. ಆಯ್ಕೆ ಡಿಗೆ ಗರಿಷ್ಠ ವಯೋಮಿತಿ 40 ವರ್ಷಗಳು. ಇನ್ನು ಕನಿಷ್ಠ ಮೆಚ್ಯೂರ್ ವಯಸ್ಸು 18 ವರ್ಷಗಳು. ಇನ್ನು ಆಯ್ಕೆ ಎ ಮತ್ತು ಬಿಗೆ ಮೆಚ್ಯೂರ್ ವಯಸ್ಸು 65 ವರ್ಷಗಳು. ಆಯ್ಕೆ ಸಿಗೆ 80 ವರ್ಷಗಳು ಹಾಗೂ ಡಿಗೆ 55 ವರ್ಷಗಳು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.