
ಆಪಲ್ ಕಂಪನಿ ಭಾರತದಲ್ಲಿ ದಿನದಿಂದ ದಿನಕ್ಕೆ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಇದೀಗ ಭಾರತದಲ್ಲಿ ಐಫೋನ್, ಮ್ಯಾಕ್ ಮಾರಾಟದಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ಅಂದರೆ ಆಪಲ್ ಕಂಪನಿ 2026ರ ಸೆಪ್ಟೆಂಬರ್‌ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಆಪಲ್ ಕಂಪನಿ 114.5 ಬಿಲಿಯನ್ ಡಾಲರ್ (ಸುಮಾರು ₹9.5 ಲಕ್ಷ ಕೋಟಿ) ಆದಾಯ ಗಳಿಸಿದೆ.
ಇದು ಕಳೆದ ವರ್ಷಕ್ಕೆ ಹೋಲಿಸಿ ನೋಡುವುದಾದ್ರೆ ಈ ಸಲ ಕಂಪನಿ ಗಳಿಕೆಯಲ್ಲಿ ಶೇ.12ರಷ್ಟು ಆದಾಯ ಹೆಚ್ಚಳವಾಗಿದೆ. ಮಾರಾಟದ ಪೈಕಿ ಐಫೋನ್ ಮಾರಾಟದ್ದೇ ಸಿಂಹಪಾಲು.ನಂತರದ್ದು ಸರ್ವಿಸ್, ಮ್ಯಾಕ್ ಕಂಪ್ಯೂಟರ್‌ಗಳ ಮಾರಾಟ ಹೆಚ್ಚಳವೇ ಆದಾಯ ಏರುಗತಿಗೆ ಕಾರಣವಾಗಿದೆ.
ಭಾರತದಲ್ಲಿ ಐಫೋನ್ ಕ್ರೇಜ್ ಯಾವ ಪರಿ ಇದೆ ಎಂದರೆ ಇಂದು ಪ್ರತಿಯೊಬ್ಬರ ಬಳಿಯೂ ಐಫೋನ್, ಕಾಲೇಜು ಯುವಕರ ಮೊದಲ ಆಯ್ಕೆಯೇ ಐಫೋನ್. ಹೀಗಾಗಿ ಆಪಲ್ ಐಫೋನ್ ಮಾರಾಟದಿಂದಲೇ ಅತಿ ಹೆಚ್ಚು ಆದಾಯ ಗಳಿಸುತ್ತಿದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೇವಲ ಐಫೋನ್ ಮಾರಾಟದಿಂದಲೇ ಕಂಪನಿಗೆ 57.6 ಬಿಲಿಯನ್ ಡಾಲರ್ ಆದಾಯ ಬಂದಿದೆ! ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.17 ಪಟ್ಟು ಹೆಚ್ಚು. ಇನ್ನು ಇಡೀ ಹಣಕಾಸು ವರ್ಷದ ಆದಾಯದ ಬಗ್ಗೆ ಹೇಳುವುದಾದರೆ ಆಪಲ್ ಕಂಪನಿಯ ಒಟ್ಟು ಆದಾಯ ಸುಮಾರು 479 ಬಿಲಿಯನ್ ಡಾಲರ್‌ಗೆ ತಲುಪಿದೆ. ಅಂದರೆ ಆಪಲ್ ಕಂಪನಿಯ ಬೆಳವಣಿಗೆಯಲ್ಲಿ ಭಾರತದ ಮಾರುಕಟ್ಟೆಯಿಂದ ಸಿಂಹಪಾಲು ಆದಾಯ ಬರುತ್ತಿದೆ.
ಇತ್ತೀಚೆಗೆ ಕಂಪನಿಯ ಆದಾಯದ ಕುರಿತು ನಡೆದ ಸಭೆಯಲ್ಲೂ ಈ ವಿಚಾರವಾಗಿ ಚರ್ಚೆಯಲ್ಲಿ ಕಂಪನಿಯ ಸಿಇಒ ಜಾನ್ ಟರ್ನಸ್ ಬಹಿರಂಗಪಡಿಸಿದ್ದಾರೆ. ಅವರು ಹೇಳುವ ಪ್ರಕಾರ, ಈವರೆಗೆ ದಾಖಲಾದ ಅತಿ ಹೆಚ್ಚಿನ ಆದಾಯ ಭಾರತದ ಮಾರುಕಟ್ಟೆಯಿಂದಲೇ ಬಂದಿದ್ದಾಗಿದೆ. ಅತಿಹೆಚ್ಚು ಆದಾಯ ಭಾರತದಲ್ಲಿನ ಆಪಲ್ ಮಾರಾಟದಿಂದ ಬರುತ್ತಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಐಫೋನ್ 18 ಸರಣಿ ಹೊಸ ಫೋನ್‌ಗಳ ಬಿಡುಗಡೆಯಾದ ನಂತರ ಈ ಹಿಂದೆ ಖರೀದಿಸಿದ್ದ ಐಫೋನ್ 15,16 ಸರಣಿಯ ಫೋನ್‌ಗಳನ್ನು ಹೊಸ ಫೋನ್‌ಗಳಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಇದರೊಂದಿಗೆ ಆಪಲ್ ಮ್ಯಾಕ್ ಮಾರಾಟ ಪ್ರಮಾಣ ಹೆಚ್ಚಳ, ಸರ್ವಿಸ್‌ನಿಂದಾಗಿ ಆಪಲ್ ಕಂಪನಿಗೆ ಹೆಚ್ಚಿನ ಆದಾಯ ಗಳಿಸುವ ಮೂಲಕ ಆಪಲ್ ಕಂಪನಿ ಹೊಸ ದಾಖಲೆ ನಿರ್ಮಿಸಿದೆ. ಆದರೆ ಭಾರತದಿಂದ ಎಷ್ಟು ಆದಾಯ ಬಂದಿದೆ ಎಂಬ ಬಗ್ಗೆ ನಿಖರವಾದ ಅಂಕಿ-ಅಂಶಗಳನ್ನು ಆಪಲ್ ಕಂಪನಿ ಬಹಿರಂಗಪಡಿಸಿಲ್ಲ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.