
ಬೆಂಗಳೂರು(ಆ.2): ಆಗಸ್ಟ್ ತಿಂಗಳಲ್ಲಿ ಎಷ್ಟು ದಿನ ಬ್ಯಾಂಕ್ ರಜೆ ಇರುತ್ತದೆ ಅಂತಾ ನಿಮೆ ಗೊತ್ತಾ?. ಇಲ್ಲಾ ಅಂದರೆ 2018 ಆಗಸ್ಟ್ ತಿಂಗಳ ಬ್ಯಾಂಕ್ ರಜಾ ದಿನಗಳ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿ ಭಾನುವಾರದಂದು, ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಸಾರ್ವತ್ರಿಕ ರಜಾ ದಿನಗಳು ಸೇರಿದಂತೆ ಆಗಸ್ಟ್ ನಲ್ಲಿ ಒಂಬತ್ತು ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜಾ ದಿನವಾಗಿರಲಿದೆ. ಹಾಗಾಗಿ ಬ್ಯಾಂಕ್ ಸಂಬಂಧಿತ ಕೆಲಸ ಕಾರ್ಯಗಳನ್ನು ಮುಗಿಸಲು ಇಚ್ಛಿಸುವವರು ಸೂಕ್ತ ಪೂರ್ವ ಯೋಜನೆಯನ್ನು ಮಾಡುವುದು ಅವಶ್ಯಕ.
ರಜಾ ದಿನದ ಬಳಿಕ ಬ್ಯಾಂಕ್ ತೆರೆದುಕೊಳ್ಳುವಾಗ ಹೆಚ್ಚಿನ ನೂಕುನಗ್ಗಲು ಕಂಡುಬರುವ ಸಾಧ್ಯತೆಯ ಹಿನ್ನಲೆಯಲ್ಲಿ, ಬ್ಯಾಂಕ್ ಕೆಲಸ ಕಾರ್ಯಗಳಿಗಾಗಿ ಇತರೆ ದಿನಗಳನ್ನು ಆಯ್ಕೆ ಮಾಡುವುದು ಸೂಕ್ತ. ಅದರಂತೆ ಈ ಕೆಳಗಿನ ಪಟ್ಟಿಯಲ್ಲಿರುವಂತೆ ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.
ಆಗಸ್ಟ್ 5: ಭಾನುವಾರ
ಆಗಸ್ಟ್ 11: ಎರಡನೇ ಶನಿವಾರ
ಆಗಸ್ಟ್ 12: ಭಾನುವಾರ
ಆಗಸ್ಟ್ 15: ಬುಧವಾರ, ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್ 17: ಶುಕ್ರವಾರ, ಪಾರ್ಸಿ ಹೊಸ ವರ್ಷ
ಆಗಸ್ಟ್ 19: ಭಾನುವಾರ
ಆಗಸ್ಟ್ 22: ಬುಧವಾರ, ಬಕ್ರೀದ್
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.