ಅನಿಲ್ ಅಂಬಾನಿ ಕೇಂದ್ರ ಕಚೇರಿ ಬ್ಯಾಂಕಿಂದ ಜಪ್ತಿ| 2900 ಕೋಟಿ ರು. ಸಾಲ ತೀರಿಸದ ಹಿನ್ನೆಲೆ
ಮುಂಬೈ(ಜು.31): ಬರೋಬ್ಬರಿ 2892 ಕೋಟಿ ರು. ಸಾಲ ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಗ್ರೂಪ್‌ನ ಕೇಂದ್ರ ಕಚೇರಿ ‘ರಿಲಯನ್ಸ್ ಸೆಂಟರ್’ ಅನ್ನು ಯಸ್ ಬ್ಯಾಂಕ್ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೇ ವೇಳೆ, ಮುಂಬೈನಲ್ಲಿರುವ ಎರಡು ಫ್ಲಾ ್ಯಟ್‌ಗಳನ್ನೂ ಜಪ್ತಿ ಮಾಡಿದೆ. ಈ ಕುರಿತು ಬ್ಯಾಂಕ್ ಗುರುವಾರ ಪತ್ರಿಕಾ ಜಾಹೀರಾತು ನೀಡಿದೆ.
ಈ ಬೆಳವಣಿಗೆಯೊಂದಿಗೆ, ವಿಶ್ವದ 5ನೇ ಸಿರಿವಂತ ಎಂಬ ಹಿರಿಮೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ಸೋದರ ಅನಿಲ್ ಅಂಬಾನಿಯ ಸಂಕಷ್ಟಗಳು ಮತ್ತಷ್ಟುಹೆಚ್ಚಿದಂತಾಗಿದೆ.
undefined
ಅನಿಲ್ ಒಡೆತನದ ಅನಿಲ್ ಧೀರೂಭಾಯ್ ಅಂಬಾನಿ ಗ್ರೂಪ್ (ಎಡಿಎಜಿ)ನ ಬಹುತೇಕ ಪ್ರಮುಖ ಕಂಪನಿಗಳು 21432 ಚದರ ಮೀಟರ್ ವಿಸ್ತೀರ್ಣದ ರಿಲಯನ್ಸ್ ಸೆಂಟರ್‌ನಿಂದಲೇ ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯು ಯಸ್ ಬ್ಯಾಂಕ್‌ಗೆ 2892 ಕೋಟಿ ರು. ಸಾಲ ಬಾಕಿ ಉಳಿಸಿಕೊಂಡಿತ್ತು. ಈ ಸಂಬಂಧ ಬ್ಯಾಂಕ್ ಹಲವು ಬಾರಿ ನೋಟಿಸ್ ನೀಡಿತ್ತು. ಆದಾಗ್ಯೂ ಸಾಲ ಮರುಪಾವತಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿ ಹಾಗೂ ಫ್ಲ್ಯಾಟ್‌ಗಳನ್ನು ಬ್ಯಾಂಕ್ ಜಪ್ತಿ ಮಾಡಿಗೆ. ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಒಟ್ಟಾರೆ 6000 ಕೋಟಿ ರು. ಸಾಲ ಹೊಂದಿದೆ.
ಜಪ್ತಿಯಾದ ಎರಡು ಫ್ಲಾ ್ಯಟ್‌ಗಳು ದಕ್ಷಿಣ ಮುಂಬೈನ ನಾಗಿನ್ ಮಹಲ್‌ನಲ್ಲಿದ್ದು, ಕ್ರಮವಾಗಿ 1717 ಮತ್ತು 4936 ಚದರಡಿ ವಿಸ್ತೀರ್ಣ ಹೊಂದಿವೆ.